ರಮ್ಜಾನ್ ರೋಜಾಗೆ `ಡ್ರೈ ಫ್ರುಟ್ಸ್' ಮೆರುಗು

7

ರಮ್ಜಾನ್ ರೋಜಾಗೆ `ಡ್ರೈ ಫ್ರುಟ್ಸ್' ಮೆರುಗು

Published:
Updated:
ರಮ್ಜಾನ್ ರೋಜಾಗೆ `ಡ್ರೈ ಫ್ರುಟ್ಸ್' ಮೆರುಗು

ಬೆಳಗಾವಿ: ಪವಿತ್ರ ರಮ್ಜಾನ್ ತಿಂಗಳು ಶುರುವಾಗಿರುವುದರಿಂದ ಮುಸ್ಲಿಂ ಬಾಂಧವರಲ್ಲಿ ಈಗ ಹಬ್ಬದ ಸಡಗರ. ಹಗಲಿನಲ್ಲಿ ಉಪವಾಸ ವ್ರತ ನಡೆಸುವ ಮುಸ್ಲಿಂ ಬಾಂಧವರು ಮುಂಜಾನೆಯ `ಸಹರಿ' ಹಾಗೂ ರಾತ್ರಿಯ `ಇಫ್ತಾರ್' ಕೂಟಕ್ಕೆ ವಿವಿಧ ಒಣ ಹಣ್ಣುಗಳನ್ನು (ಡ್ರೈ ಫ್ರುಟ್ಸ್) ಬಳಸುತ್ತಿದ್ದಾರೆ. ಹೀಗಾಗಿ ನಗರದ ಮಾರುಕಟ್ಟೆಗೆ ದೇಶ- ವಿದೇಶಗಳಿಂದ ಬಗೆ ಬಗೆಯ ಡ್ರೈ  ಫ್ರುಟ್ಸ್ ಲಗ್ಗೆ ಇಡುತ್ತಿವೆ.ನಗರದ ದರ್ಬಾರ ಗಲ್ಲಿ, ಖಂಜರ್ ಗಲ್ಲಿ, ಬೆಂಡಿ ಬಜಾರ್ ಹಾಗೂ ಖಡೇ ಬಜಾರ್‌ನಲ್ಲಿ ಈಗ ಡ್ರೈ ಫ್ರುಟ್ಸ್ ಅಂಗಡಿಗಳದ್ದೇ ದರ್ಬಾರು. ರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ಹಲವು ವ್ಯಾಪಾ ರಿಗಳು ಇಲ್ಲಿ ತಾತ್ಕಾಲಿಕ ಅಂಗಡಿ ಗಳನ್ನೂ ತೆರೆದಿದ್ದಾರೆ. ಮಧ್ಯ ರಾತ್ರಿಯ ವರೆಗೂ ವ್ಯಾಪಾರ ನಡೆಸುತ್ತಿದ್ದಾರೆ.ಕರ್ಜೂರ, ಗೋಡಂಬಿ, ಪಿಸ್ತಾ, ಕಲ್ಲಂಗಡಿ ಬೀಜ, ಅಕ್ರೂಟ್, ಒಣ ದ್ರಾಕ್ಷಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ನಿತ್ಯ ಸಂಜೆ `ಮಗರಿಬ್' ಪ್ರಾರ್ಥನೆ ಬಳಿಕ ರೋಜಾ ಮುಗಿಸಿದ ಮುಸ್ಲಿಂ ಬಾಂಧವರು, ಮನೆಗೆ ಅಗತ್ಯ ಆಹಾರ ಪದಾರ್ಥ ಹಾಗೂ ಹೊಸ ಬಟ್ಟೆ ಖರೀದಿಗಾಗಿ ಮಾರ್ಕೆಟ್‌ಗೆ ಬರು ತ್ತಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ವಾಗಿ ಬಗೆ ಬಗೆಯ ಒಣ ಹಣ್ಣುಗಳ ಖರೀದಿಗೆ ಮುಗಿ ಬೀಳುತ್ತಿದ್ದಾರೆ.ಭಾರತದ ವಿವಿಧೆಡೆಯಿಂದ ಹಾಗೂ ವಿದೇಶಗಳಿಂದ ಆಗಮಿಸುತ್ತಿರುವ ವೈವಿಧ್ಯಮಯ ಡ್ರೈ ಫ್ರುಟ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಗ್ರಾಹಕರಿಗೆ ಅವಕಾಶ ಲಭಿಸಿದೆ. ಅಂಗಡಿಗಳಲ್ಲಿ ಹಲವು ತೂಕಗಳ ಪಾಕೆಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿರುವು ದರಿಂದ ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರೂ ಇವುಗಳನ್ನು ತಪ್ಪದೇ ಖರೀದಿಸುತ್ತಿದ್ದಾರೆ.`ರಮ್ಜಾನ್ ತಿಂಗಳ ಮೊದಲ 20 ದಿನಗಳಲ್ಲಿ ಸುಮಾರು ಶೇ. 10ರಷ್ಟು ವ್ಯಾಪಾರವಾಗುತ್ತದೆ. ಉಳಿದ ಹತ್ತು ದಿನಗಳಲ್ಲಿ ಶೇ. 90ರಷ್ಟು ವ್ಯಾಪಾರ ವಾಗುತ್ತದೆ. ಉಳಿದ 11 ತಿಂಗಳ ಒಟ್ಟು ವ್ಯಾಪಾರಕ್ಕಿಂತ ರಮ್ಜಾನ್ ತಿಂಗಳಲ್ಲಿ ನಡೆಯುವ ವ್ಯಾಪಾರವೇ ಹೆಚ್ಚು. ಕಳೆದ ವರ್ಷಕ್ಕೆ ಹೋಲಿಸಿದರೆ, ಪಿಸ್ತಾ ಬೆಲೆ ಬಹಳ ದುಬಾರಿಯಾಗಿದೆ' ಎಂದು ದರ್ಬಾರ ಗಲ್ಲಿಯ ಡ್ರೈ ಫ್ರುಟ್ಸ್ ಅಂಗಡಿ ವ್ಯಾಪಾರಿ ಮಸೂದ್ `ಪ್ರಜಾವಾಣಿ'ಗೆ ತಿಳಿಸಿದರು.`ಆಸ್ಟ್ರೇಲಿಯಾದಿಂದ ಬಾದಾಮಿ, ಸೌದಿ ಅರೇಬಿಯಾದಿಂದ ಪಿಸ್ತಾ, ಸಿಂಗಾಪುರದಿಂದ ದಾಲ್ಚಿನಿ, ಆಫ್ರಿಕಾ ದಿಂದ ಲವಂಗ, ಕಾಶ್ಮೀರದಿಂದ ಅಕ್ರೂಟ್ ತರಿಸುತ್ತೇವೆ. 20ನೇ ರೋಜಾದಿಂದ ಹತ್ತು ದಿನಗಳ ಕಾಲ ಪ್ರತಿ ದಿನ 25,000ದಿಂದ 30000 ರೂಪಾಯಿ ವಹಿವಾಟು ಆಗುತ್ತದೆ. ರಮ್ಜಾನ್ ತಿಂಗಳಲ್ಲಿ ಸುಮಾರು 5 ಲಕ್ಷ ರೂಪಾಯಿ ವಹಿವಾಟು ನಡೆಸುವ ಸಾಧ್ಯತೆ ಇದೆ. ರಮ್ಜಾನ್ ತಿಂಗಳ ಕೊನೆಯ ಒಂದು ವಾರಗಳ ಕಾಲ 24 ಗಂಟೆಯೂ ವ್ಯಾಪಾರ ನಡೆಸುತ್ತೇವೆ' ಎನ್ನುತ್ತಾರೆ ಹೀನಾ ಡ್ರೈ ಫ್ರುಟ್ಸ್ ಮಾಲೀಕ ತಾರೀಕ್ ಸಂಗೊಳ್ಳಿ.ಒಂದು ಕೆ.ಜಿ. ಪಿಸ್ತಾಗೆ 1400 ರೂಪಾಯಿ ಬೆಲೆಯಿದ್ದು, ಇದೇ ಎಲ್ಲಕ್ಕಿಂತ ದುಬಾರಿಯಾಗಿದೆ. ಕರ್ಜೂರವು ಒಂದು ಕೆ.ಜಿ.ಗೆ ರೂ. 150ರಿಂದ 240ರವರೆಗೆ ಇದೆ. ವಿದೇಶಿ ಕರ್ಜೂರಗಳಾದ ಫರತ್‌ಗೆ ರೂ. 240, ನಫ್ರಾಗೆ ರೂ. 200, ಅಮಿರ್‌ಗೆ ರೂ. 200, ಕ್ರಾಫ್ಟ್‌ಗೆ ರೂ. 240, ಕಿಮಿಯಾಗೆ 150 ರೂಪಾಯಿ ಇದೆ.ಒಂದು ಕೆ.ಜಿ. ಉತ್ಕೃಷ್ಟ ಗೋಡಂಬಿಗೆ ರೂ. 640, ಒಡೆದ ಗೋಡಂಬಿಗೆ ರೂ. 560, ಅಕ್ರೂಟ್‌ಗೆ ರೂ. 900, ಚಾರೊಲಿ ರೂ. 1000, ಬಾದಾಮಿ ರೂ. 680, ಕಲ್ಲಂಗಡಿ ಬೀಜ ರೂ. 280, ಒಣ ದ್ರಾಕ್ಷಿ 200 ರೂಪಾಯಿಗೆ ಮಾರಾಟವಾಗುತ್ತಿದೆ.

ಇಫ್ತಾರ್ ಕೂಟಕ್ಕೆ ವಿಶೇಷವಾಗಿ ಸಿದ್ಧಪಡಿಸುವ ಸಿಹಿ ತಿನಿಸುಗಳಾದ ಫಿರನಿ, ಸುರ್‌ಕುಂಬಾಗಳಿಗೆ ಬಳಸುವ

ಹೈದರಾಬಾದಿ ಶಾವಿಗೆಗೆ 60 ರೂಪಾಯಿ, ತಾಜಮಹಲ್ ಶಾವಿಗೆಗೆ ರೂ. 80 ಹಾಗೂ ಕಸ್ಟಡ್ ಪೌಡರ್‌ಗೆ 80 ರೂಪಾಯಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry