ಭಾನುವಾರ, ಆಗಸ್ಟ್ 1, 2021
21 °C

ರಷ್ಯನ್ ರಾಮಾಯಣಕ್ಕೆ ಸುವರ್ಣದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ, (ಪಿಟಿಐ): ಭಾರತದ ಮಹಾಕಾವ್ಯ ರಾಮಾಯಣದ ರಷ್ಯನ್ ರೂಪಾಂತರದ ರಂಗ ಪ್ರದರ್ಶನ ಆರಂಭವಾಗಿ 50 ವರ್ಷ ಸಂದಿರುವ ಈ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಆಚರಿಸಿದ ರಷ್ಯಾ, ರಾಮಲೀಲಾ ಪ್ರದರ್ಶಿಸಿದ ಹಿರಿಯ ಕಲಾವಿದನನ್ನು ಸನ್ಮಾನಿಸಿತು. ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿದ್ದ ‘ದಿ ಪೆರೇಡ್ ಆಫ್ ರಷ್ಯನ್-ಇಂಡಿಯನ್ ಹೆರಿಟೇಜ್’ ಸುವರ್ಣ ಮಹೋತ್ಸವವನ್ನು ಇಲ್ಲಿನ ಮಕ್ಕಳ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.ರಾಮಾಯಣದಲ್ಲಿನ ರಾಮನ ಪಾತ್ರವನ್ನು ಅಭಿನಯಿಸುತ್ತಿದ್ದ ಏಕೈಕ ಕಲಾವಿದ ಗೆನ್ನಡಿ ಮಿಕ್‌ಹೇಲೊವಿಚ್ ಪೆಕ್ನಿಕೋವ್, ಭಾರತದ ಪ್ರಧಾನಿ ನೆಹರೂ ಅವರು ತಮ್ಮ ಪ್ರದರ್ಶನವನ್ನು ನೋಡಲು ಖುದ್ದಾಗಿ ಆಗಮಿಸಿದ್ದ ಸಂದರ್ಭವನ್ನು ನೆನೆದರು.ಸುಮಾರು 50 ವರ್ಷಗಳ ಹಿಂದೆ, 1960ರಲ್ಲಿ ರಾಮಾಯಣದಂತಹ ಕೃತಿಯನ್ನು ರೂಪಾಂತರಿಸಿ ರಂಗದಲ್ಲಿ ಪ್ರಯೋಗಿಸಿದ ಕೀರ್ತಿ ರಷ್ಯಾದ್ದು ಎಂದು ಸಾಂಸ್ಕೃತಿಕ ಖಾತೆ ಉಪಸಚಿವ ಆ್ಯಂಡ್ರಿ ಬಸಿಜಿನ್ ಬಣ್ಣಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.