ಗುರುವಾರ , ಜೂಲೈ 2, 2020
23 °C

ರಷ್ಯಾದಲ್ಲಿ ವಿಮಾನ ದುರಂತ 44 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಷ್ಯಾದಲ್ಲಿ ವಿಮಾನ ದುರಂತ 44 ಮಂದಿ ಸಾವು

ಮಾಸ್ಕೋ (ಪಿಟಿಐ): ಪ್ರಯಾಣಿಕರ ವಿಮಾನವೊಂದು ಮಂಗಳವಾರ ಹೆದ್ದಾರಿಯಲ್ಲಿ ಅಪಘಾತಕ್ಕೀಡಾದ ಪರಿಣಾಮವಾಗಿ 44 ಮಂದಿ ಸಾವನ್ನಪ್ಪಿ ಇತರ 8 ಮಂದಿ ಗಾಯಗೊಂಡ ಘಟನೆ ರಷ್ಯಾದ ಉತ್ತರಭಾಗದ ಕರೇಲಿಯಾ ಪ್ರಾಂತ್ಯದಲ್ಲಿ ಸಂಭವಿಸಿದೆ.

ರಷ್ಯಾ ಏರ್ ಲೈನ್ಸ್ ಗೆ ಸೇರಿದ ವಿಮಾನವು ಮಾಸ್ಕೋದಿಂದ ಕರೇಲಿಯಾಕ್ಕೆ ಬರುತ್ತಿತ್ತು. ಪೆಟ್ರೊಡವೊಸ್ಕ್ ವಿಮಾನ ನಿಲ್ದಾಣಕ್ಕೆ 2 ಕಿ.ಮೀ. ಮೊದಲೇ ಮೋಟಾರು ವಾಹನಗಳು ಸಂಚರಿಸುವ ಹೆದ್ದಾರಿಯಲ್ಲಿ ನೆಲಕ್ಕಪ್ಪಳಿಸಿದ ವಿಮಾನ ವೇಳೆ ಭಾರಿ ಪ್ರಮಾಣದ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡು ಉರಿಯಿತು. ಈ ದುರಂತದಲ್ಲಿ 44 ಮಂದಿ ಸಾವನ್ನಪ್ಪಿ, ಇತರೆ 8 ಮಂದಿ ಗಾಯಗೊಂಡರು.

ವಿಮಾನ ಕೆಳಗಿಳಿಯಲು ಬರುತ್ತಿದ್ದ ಈ ವೇಳೆಯಲ್ಲಿ ಪ್ರತಿಕೂಲ ವಾತಾವರಣವಿದ್ದು, ದಟ್ಟ ಮಂಜು ಹಾಗೂ ಮಳೆಯೂ ಬೀಳುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.