ಬುಧವಾರ, ಜೂನ್ 16, 2021
21 °C

ರಷ್ಯಾ–ಉಕ್ರೇನ್‌ ಯುದ್ಧ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌ (ಎಎಫ್‌ಪಿ/ಐಎಎನ್‌ಎಸ್‌):  ಕ್ರಿಮಿ­­­ಯಾವನ್ನು ನಿಯಂತ್ರಣಕ್ಕೆ ತೆಗೆದು­ಕೊಂಡಿರುವ ರಷ್ಯಾದ ಮೇಲೆ ನಾವು ಯುದ್ಧ ಸಾರುವುದಿಲ್ಲ ಎಂದು ಉಕ್ರೇನ್‌ ಹಂಗಾಮಿ ಅಧ್ಯಕ್ಷ ಒಲೆಕ್ಸಾಂಡ್ರಾ ಟರ್ಚಿ­ನೋವ್‌ ಹೇಳಿದ್ದಾರೆ. ಈ ನಡುವೆ, ಉಕ್ರೇನ್‌ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್‌ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ಶ್ವೇತಭವನದಲ್ಲಿ ಭೇಟಿಯಾಗಿ, ರಷ್ಯಾ ಅತಿ­ಕ್ರಮಣದ ವಿರುದ್ಧ ನೆರವು ನೀಡಲು ಕೋರಿದ್ದಾರೆ.ಸ್ವಾಯತ್ತ ಕ್ರಿಮಿಯಾ ಗಣರಾಜ್ಯ ರಚ­ನೆಗೆ ಸಂಬಂಧಿಸಿದಂತೆ ನಡೆಯುವ ಜನ­ಮತ-ಗಣನೆ ‘ಕಪಟ ನಾಟಕ’ ಇದರ ಫಲಿ­ತಾಂಶ ರಷ್ಯಾದಲ್ಲಿ ನಿರ್ಧಾರವಾಗು­ತ್ತದೆ ಎಂದು ಟರ್ಚಿನೋವ್‌ ಟೀಕಿಸಿದ್ದಾರೆ. ‘ಕ್ರಿಮಿಯಾದ ಮೇಲೆ ನಾವು ಸೇನಾ ಕಾರ್ಯಾಚರಣೆ ನಡೆಸು­ವುದಿಲ್ಲ. ಈಗ ಕ್ರಿಮಿಯಾವು ರಷ್ಯಾ ಸೇನೆಯ ನಿಯಂತ್ರ­ಣ­ದಲ್ಲಿದೆ. ಅದು ರಷ್ಯಾ ಸೇರುವುದಕ್ಕೆ ಸಂಬಂಧಿಸಿ­ದಂತೆ ಈ ತಿಂಗಳ 16ರಂದು ಜನಮತಗಣನೆ ನಡೆಯಲಿದೆ’ ಎಂದರು.‘ಈ ಜನಮತ ಗಣನೆ ಕ್ರಿಮಿಯಾದಲ್ಲಿ ನಡೆಯುವುದಿಲ್ಲ. ಇದು ನಡೆಯುವುದು ಕ್ರೆಮ್‌ಲಿನ್‌ ಕಚೇರಿಯಲ್ಲಿ. ‘ಜನಮತ­ಗಣನೆ ಎನ್ನುವುದು ಒಂದು ಕಪಟ ನಾಟಕ. ಕ್ರಿಮಿಯಾದ ಜನರು ಇದನ್ನು ವಿರೋಧಿಸಲಿದ್ದಾರೆ’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.ಸಂವಿಧಾನ ವಿರೋಧ

ಸ್ವಾಯತ್ತ ಕ್ರಿಮಿಯಾ ಗಣ­ರಾಜ್ಯ ರಚಿ­ಸುವ ಬಗ್ಗೆ ಜನ­ಮತಗಣನೆ ನಡೆ­ಸುವುದು ಉ್ರಕೇನ್‌ ಸಂವಿಧಾನ ಉಲ್ಲಂಘಿಸಿದಂತೆ ಎಂದು ಐರೋಪ್ಯ ಒಕ್ಕೂಟದ ರಕ್ಷಣಾ ಮತ್ತು ಸಹಕಾರ ಸಂಘಟನೆ ಅಧ್ಯಕ್ಷ  ಡಿಡಿಯರ್‌ ಬುರ್ಖಲ್ತೆರ್‌ ಹೇಳಿದ್ದಾರೆ.ಸಾರ್ವಭೌಮತ್ವ ಕಾಪಾಡಿ

ತನ್ನ ಸಾರ್ವ­ಭೌಮತ್ವ ಕಾಪಾಡಲು ರಾಜಕೀಯ, ರಾಜ­ತಾಂತ್ರಿಕ, ಆರ್ಥಿಕ ಮತ್ತು ಸೇನೆ ಸೇರಿದಂತೆ ಸಾಧ್ಯವಿರುವ ಎಲ್ಲ ಕ್ರಮ­ಗಳನ್ನು ಅನುಸರಿಸಬೇಕು ಎಂದು  ಬ್ರಿಟನ್‌ ಮತ್ತು ಅಮೆರಿಕಾಕ್ಕೆ ಉಕ್ರೇನ್‌ ಮನವಿ ಮಾಡಿದೆ.

ಒಬಾಮಾ –ಅರ್ಸೆನಿ ಮಾತುಕತೆ

ವಾಷಿಂಗ್ಟನ್‌ (ಎಪಿ): ಇನ್ನೊಂದು ಪ್ರಮುಖ ರಾಜತಾಂತ್ರಿಕ ಬೆಳವ­ಣಿಗೆ­ಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ಉ್ರಕೇನ್‌ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್‌ ಅವರಿಗೆ ಬುಧ­ವಾರ  ಶ್ವೇತಭವನದಲ್ಲಿ ಔತಣ ಕೂಟ ಏರ್ಪಡಿಸಿದ್ದರು. ಉಕ್ರೇನ್‌ ಸರ್ಕಾರ ಗಟ್ಟಿ­ಗೊಳಿಸುವ ನಿಟ್ಟಿ­ನಲ್ಲಿ ಪಶ್ಚಿಮ ದೇಶಗಳ ಸಹ­ಕಾರ ಬಲ­­ಗೊಳಿಸುವ ಬಗ್ಗೆ ಈ ಉನ್ನತ ಸಭೆ­ಯಲ್ಲಿ ನಾಯಕರು ಚರ್ಚೆ ನಡೆಸಿದರು.

ದಾಳಿ ಪ್ರಯತ್ನ ನಿಲ್ಲಿಸಲು ಮನವಿ

ಸ್ಟ್ರಾಸ್‌ಬರ್ಗ್‌, ಫ್ರಾನ್ಸ್‌ (ಎಎಫ್‌ಪಿ): ಕ್ರಿಮಿಯಾ ಸ್ವಾಧೀನಕ್ಕೆ ರಷ್ಯಾ ನಡೆ­ಸುತ್ತಿ­ರುವ ಎಲ್ಲ ಪ್ರಯತ್ನ­ಗಳನ್ನು ನಿಲ್ಲಿಸಬೇಕು ಎಂದು ಏಳು ಅಭಿವೃದ್ಧಿ (ಜಿ–7) ರಾಷ್ಟ್ರ­ಗಳು ಒತ್ತಾಯಿಸಿರುವುದಾಗಿ ಐರೋಪ್ಯ ಆಯೋಗ ಅಧ್ಯಕ್ಷ ಜೋಸ್‌ ಮ್ಯಾನು­ಯೆಲ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.