ರಷ್ಯಾ-ಪೋಲೆಂಡ್ ಅಭಿಮಾನಿಗಳ ಹೊಡೆದಾಟ

7

ರಷ್ಯಾ-ಪೋಲೆಂಡ್ ಅಭಿಮಾನಿಗಳ ಹೊಡೆದಾಟ

Published:
Updated:
ರಷ್ಯಾ-ಪೋಲೆಂಡ್ ಅಭಿಮಾನಿಗಳ ಹೊಡೆದಾಟ

ವಾರ್ಸಾ (ರಾಯಿಟರ್ಸ್): ರಷ್ಯಾ ಹಾಗೂ ಪೋಲೆಂಡ್ ತಂಡಗಳ ನಡುವಣ ಪಂದ್ಯ ಆರಂಭಕ್ಕೆ ಮುನ್ನವೇ ಉಭಯ ದೇಶಗಳ ಅಭಿಮಾನಿಗಳು ಪರಸ್ಪರ ಹಲ್ಲೆ ನಡೆಸಿದರು.ಮುಸುಕು ಹಾಕಿಕೊಂಡಿದ್ದ ಕೆಲ ಯುವಕರು ಇನ್ನೊಂದು ಗುಂಪಿನ ಮೇಲೆ ಬಾಟಲಿಗಳು ಹಾಗೂ ಕಲ್ಲುಗಳನ್ನು ಎಸೆದರು. ಪೊಲೀಸರು ರಬ್ಬರ್‌ನ ಗುಂಡುಗಳನ್ನು ಹಾರಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.ಈ ಗಲಾಟೆಯಲ್ಲಿ ಹಲವು ಮಂದಿ ಗಾಯಗೊಂಡರು. ಹಾಗಾಗಿ ಪಂದ್ಯ ಮುಗಿದ ತುಂಬಾ ಹೊತ್ತಿನವರೆಗೆ ರಷ್ಯಾ ಪ್ರೇಕ್ಷಕರಿಗೆ ಕ್ರೀಡಾಂಗಣದಿಂದ ಹೊರಹೋಗಲು ಅವಕಾಶ ನೀಡಿರಲಿಲ್ಲ. ಗಲಾಟೆಗೆ ಕಾರಣರಾದ ನೂರಾರು ಮಂದಿಯನ್ನು ಬಂಧಿಸಲಾಗಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry