ಬುಧವಾರ, ನವೆಂಬರ್ 13, 2019
19 °C

ರಷ್ಯಾ: ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರಿ ಹಣ

Published:
Updated:

ಮಾಸ್ಕೊ (ಎಎಫ್‌ಪಿ): ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರ ಎಂಬ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದಕ್ಕಾಗಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಈ ಕ್ಷೇತ್ರದಲ್ಲಿ 5000 ಕೋಟಿ ಡಾಲರ್ (ರೂ.27.5 ಲಕ್ಷ ಕೋಟಿ) ಮೊತ್ತದ ಯೋಜನೆಯನ್ನು ಶುಕ್ರವಾರ ಘೋಷಿಸಿದ್ದಾರೆ.ಈ ಯೋಜನೆಯಲ್ಲಿ ಅತ್ಯಾಧುನಿಕ ಕಾಸ್ಮೊಡ್ರೋಮ್ (ಗಗನನೌಕೆಗಳ ಉಡಾವಣಾ ಕಟ್ಟೆ) ನಿರ್ಮಾಣ ಕಾರ್ಯಕ್ರಮವೂ ಸೇರಿದೆ. ಈ ದಶಕದ ಅಂತ್ಯದ ವೇಳೆಗೆ ಇದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ.ವಿಶ್ವದಲ್ಲಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ತೆರಳುವ ಮೂಲಕ ಐರೋಪ್ಯ ಒಕ್ಕೂಟದ ಯೂರಿ ಗಗಾರಿನ್ ಅವರು ಇತಿಹಾಸ ಸೃಷ್ಟಿಸಿದ 52 ವರ್ಷಗಳ ಬಳಿಕ ರಷ್ಯಾ ಸರ್ಕಾರ ಅಂತರಿಕ್ಷ ಕ್ಷೇತ್ರಕ್ಕೆ ಭಾರಿ ಮೊತ್ತದ ಹಣ ವಿನಿಯೋಗಿಸಲು ನಿರ್ಧರಿಸಿದೆ.

ಪ್ರತಿಕ್ರಿಯಿಸಿ (+)