ಬುಧವಾರ, ಜನವರಿ 29, 2020
26 °C

ರಷ್ಯಾ ರಾಜತಾಂತ್ರಿಕರ ವಿರುದ್ಧ ಯಾಕೆ ಕ್ರಮ ಇಲ್ಲ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ರಷ್ಯಾದ ಹಲವು ರಾಯಭಾರಿಗಳು ಅಮೆರಿಕ ಸರ್ಕಾರದ ಪ್ರಯೋಜನಕಾರಿ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದರೂ, ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ಸಿಗ, ಪ್ರತಿಷ್ಠಿತ ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಎಡ್‌ ರಾಯ್ಸಿ ಅಮೆರಿಕದ ವಿದೇಶಾಂಗ ಖಾತೆ ಕಾರ್ಯದರ್ಶಿ ಜಾನ್‌ ಕೆರಿ ಅವರನ್ನು ಪ್ರಶ್ನಿಸಿದ್ದಾರೆ.ಈ ಸಂಬಂಧ ಕೆರಿ ಅವರಿಗೆ ಖಾರವಾಗಿ ಪತ್ರ ಬರೆದಿರುವ ರಾಯ್ಸಿ, ಒಂದು ಡಜನ್‌ಗೂ ಹೆಚ್ಚು ರಷ್ಯಾ ರಾಯಭಾರಿಗಳು ಹಾಗೂ ಅವರ ಅವಲಂಬಿತರು ಅಮೆರಿಕದಲ್ಲಿದ್ದ ಅವಧಿಯಲ್ಲಿ ವೈದ್ಯಕೀಯ ನೆರವಿನ ಯೋಜನೆಯನ್ನು ದುರ್ಬಳಕೆ ಮಾಡಿ ಕೊಂಡಿದ್ದಾರೆ ಎಂದು ದೂರಿದ್ದಾರೆ.

ಪ್ರತಿಕ್ರಿಯಿಸಿ (+)