ಬುಧವಾರ, ಜೂನ್ 23, 2021
30 °C

ರಷ್ಯಾ ಸೇರಲು ಕ್ರಿಮಿಯಾ ಸನ್ನದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಸಿಂಫೆರೊಪಾಲ್‌ (ಐಎಎನ್‌ಎಸ್‌): ತಾನೀಗ ಉಕ್ರೇನ್‌ ಭಾಗವಾಗಿಲ್ಲ ಎಂದು ಸೋಮವಾರ ಸ್ಪಷ್ಟಪಡಿಸಿರುವ ಕ್ರಿಮಿಯಾ, ಶೀಘ್ರದಲ್ಲೇ ರಷ್ಯಾ ಜತೆ ಸೇರಿಕೊಳ್ಳುವು­ದಾಗಿ ತಿಳಿಸಿದೆ.

 

ರಷ್ಯಾ­ದೊಂದಿಗೆ ಸೇರಲು ಕ್ರಿಮಿಯಾ­ದಲ್ಲಿ ಭಾನು­ವಾರ ನಡೆದ ಜನಮತಗಣನೆ­ಯಲ್ಲಿ  ಕ್ರಿಮಿಯಾ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಬಹುಮತ ಸಿಕ್ಕಿರುವು­ದ­ರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

 

ಆದರೆ, ಸ್ವಾಯತ್ತ ರಾಷ್ಟ್ರವಾಗಿ ರೂಪುಗೊಂಡಿರುವ ಕ್ರಿಮಿಯಾ ನಡೆಗೆ ಅಮೆರಿಕ ಸೇರಿದಂತೆ ಇತರ ಪಾಶ್ಚಾತ್ಯ ಮಿತ್ರರಾಷ್ಟ್ರಗಳು ವಿರೋಧ ವ್ಯಕ್ತ­ಪಡಿಸಿದ್ದು, ಕ್ರಿಮಿಯಾ ನಡೆ ಕಾನೂನು­ಬಾಹಿರ ಎಂದು ಅಭಿಪ್ರಾಯ­ಪಟ್ಟಿವೆ.

 

ಸೋಮವಾರ ಪ್ರಕಟಗೊಂಡ ಜನ­ಮತ­ಗಣನೆಯ ಫಲಿತಾಂಶದಲ್ಲಿ ಶೇಕಡಾ 96.6ರಷ್ಟು ಕ್ರಿಮಿಯಾದ­ವರು ರಷ್ಯಾ­ದೊಂದಿಗೆ ಸೇರಲು ಬಯಸಿ­ದ್ದಾರೆ. ಸ್ವತಂತ್ರ ರಾಷ್ಟ್ರವಾಗಿ ರೂಪು­ಗೊಂಡ ಸಂತ­ಸ­­ದಲ್ಲಿ  ಸೋಮವಾರ ಸಿಂಫೆರೊ­ಪಾಲ್‌ ಮತ್ತು ಸೆವಾಸ್ಟೊ­ಪೋಲ್‌­ನಲ್ಲಿ­ರುವ ಕ್ರಿಮಿಯ­ನ್ನರು ಸಂಭ್ರಮಾಚರಣೆ ಮಾಡಿದರು  ಎಂದು ಅಲ್ಲಿನ ಮಾಧ್ಯಮ­ಗಳು ವರದಿ ಮಾಡಿವೆ.

 

ಜನಮತಗಣನೆಯ ಫಲಿತಾಂಶ ಉಕ್ರೇ­ನಿನ ಸಂವಿಧಾನಕ್ಕೆ ವಿರೋಧ­ವಾಗಿದೆ ಹಾಗೂ ಕಾನೂನು ಬಾಹಿರ­ವಾಗಿದೆ ಎಂದು ಅಮೆರಿಕ ಮತ್ತು ಅದರ ಪಾಶ್ಚಾತ್ಯ ಮಿತ್ರ ರಾಷ್ಟ್ರಕೂಟಗಳು ಹೇಳಿವೆ.

 

ಅಂತರರಾಷ್ಟ್ರೀಯ ಕಾನೂನು ಪ್ರಕಾರ, ಕ್ರಿಮಿಯಾದ ನಡೆ ಸರಿಯಾ­ಗಿದ್ದು, ಕ್ರಿಮಿ­ಯ­ನ್ನರ ಜನಮತಗಣನೆ­ಯನ್ನು ರಷ್ಯಾ ಗೌರವಿಸುತ್ತದೆ ಎಂದು ಪುಟಿನ್‌ ಸಮರ್ಥಿ­ಸಿಕೊಂಡಿದ್ದಾರೆ. 

 

ಉಕ್ರೇನ್‌ನ ಆಗ್ನೇಯ ಮತ್ತು ವಾಯವ್ಯ ಪ್ರದೇಶ­ಗಳಲ್ಲಿ ಪರಿಸ್ಥಿತಿ ಉಲ್ಬಣಗೊಂಡಿರುವ ಕುರಿತು ಪುಟಿನ್ ಕಾಳಜಿ ವ್ಯಕ್ತಪಡಿಸಿದರು. ಉಕ್ರೇನ್‌ನಲ್ಲಿ ಮತ್ತೆ ಸ್ಥಿರತೆ ಸ್ಥಾಪಿಸುವ ಕುರಿತು ಪುಟಿನ್‌ ಹಾಗೂ ಬರಾಕ್‌ ಒಬಾಮ ಇಬ್ಬರೂ ಒಮ್ಮತದ ತೀರ್ಮಾನಕ್ಕೆ ಬಂದರು ಎನ್ನಲಾಗಿದೆ. ಈ ನಡುವೆ ರಷ್ಯಾ ಜತೆ ಅಮೆರಿಕ ಸೇನೆ ಹಾಗೂ ವ್ಯಾಪಾರ ವಿನಿಮಯವನ್ನು ರದ್ದುಗೊಳಿಸಿದ್ದು, ವೀಸಾ ಸೌಲಭ್ಯವನ್ನು ಕೂಡಾ ನಿಷೇಧಿ­ಸಿದೆ. 

 

ರಷ್ಯಾ ಉಕ್ರೇನಿನ ಆಯ್ಕೆಯನ್ನು ಗೌರವಿಸಬೇಕು ಎಂದು ಈ ಹಿಂದೆ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್‌ ಹೇಳಿದ್ದರು ಎಂದು ಪುಟಿನ್ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜರ್ಮನ್‌ ಸರ್ಕಾರದ ವಕ್ತಾರ, ರಷ್ಯಾ ಮತ್ತು ಉಕ್ರೇನ್ ನಡುವೆ ತುರ್ತಾಗಿ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.

 

 ಮಾಸ್ಕೊದ ಸೇನಾ ಪಡೆಗಳನ್ನು ರಷ್ಯಾ ವಾಪಸ್ ಕರೆಸಿಕೊಳ್ಳಬೇಕು ಹಾಗೂ ಕ್ರಿಮಿಯಾ ಹಾಗೂ ಉಕ್ರೇನ್‌ ಬಿಕ್ಕಟ್ಟು ಪರಿಹಾರಕ್ಕೆ ಅಂತರರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು ಎಂದು ಜರ್ಮನಿಯ ಏಂಜೆಲಾ ಮರ್ಕೆಲ್‌ ಅಭಿಪ್ರಾಯಪಟ್ಟಿದ್ದಾರೆ.ರಷ್ಯಾಕ್ಕೆ ಬರಾಕ್ ಒಬಾಮ ಎಚ್ಚರಿಕೆ

ಕ್ರಿಮಿಯಾದ ಜನಮತಗಣನೆಯನ್ನು ಅಮೆರಿಕ ಮಾನ್ಯ ಮಾಡುವುದಿಲ್ಲ ಹಾಗೂ ರಷ್ಯಾದ ವಿರುದ್ಧ ದಿಗ್ಬಂಧನ ಹಾಕುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಎಚ್ಚರಿಕೆ ನೀಡಿದ್ದಾರೆ.

 


ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ­ಯಲ್ಲಿ ಮಾತ­ನಾಡಿದ ಒಬಾಮ,  ಕ್ರಿಮಿಯಾ ವಿಷಯದಲ್ಲಿ ರಷ್ಯಾದ ಸೇನೆ ನಡೆಸಿರುವ ಹಸ್ತಕ್ಷೇಪದ ಕುರಿತು ಅಸಮಾಧಾನ ವ್ಯಕ್ತಪಡಿ­ಸಿದ್ದು, ಜನಮತಗಣನೆ ಉಕ್ರೇನಿನ ಸ್ವಾಯತ್ತತೆಗೆ ಧಕ್ಕೆ ತಂದಿದೆ.  ಎಂದು ಶ್ವೇತ­ಭವನದ ಮೂಲಗಳು ತಿಳಿಸಿವೆ. ಆದರೆ, ಒಬಾಮ ಅವರ ಮಾತನ್ನು ಪುಟಿನ್‌ ನಿರಾಕರಿಸಿ­ದ್ದಾರೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.