ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ

7

ರಷ್ಯ: ಲಂಚ ಪಡೆದ ಪೊಲೀಸರಿಗೆ ಲಂಚದ 200 ಪಟ್ಟು ದಂಡ

Published:
Updated:

 

ಮಾಸ್ಕೊ (ಐಎಎನ್ ಎಸ್/ಆರ್ ಐ ಎ ನೋವಸ್ಟಿ): ಅಕ್ರಮ ಜೂಜಾಟ ಕೇಂದ್ರವನ್ನು ಮುಚ್ಚಿಸದಿರುವುದಕ್ಕೆ ಅದರ ಮಾಲಿಕನಿಂದ 7000 (230 ಡಾಲರ್) ರೂಬೆಲ್ ಲಂಚ ಪಡೆದಿದ್ದ ಇಬ್ಬರು ಪೊಲೀಸರಿಗೆ ದಶಲಕ್ಷ ರೂಬೆಲ್ ದಂಡ ವಿಧಿಸಲಾಗಿದೆ.

ಸರ್ವೊಪೋಲ್ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟದ ಕೇಂದ್ರವನ್ನು ಮುಚ್ಚದಿರಲು ಅದರ ಮಾಲಿಕನಿಂದ ಲಂಚ ಪಡೆದಿದ್ದ ಈ ಪೊಲೀಸರು ಆ ಅಕ್ರಮ ಜೂಜಾಟದ ಕೇಂದ್ರವು 2009ರಲ್ಲಿ ಸುಮಾರು ತಿಂಗಳು ಕಾಲ ನಡೆಯಲು ಅವಕಾಶ ಕಲ್ಪಿಸಿದ್ದರು ಎಂದು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.

ಈ ಇಬ್ಬರು ತಪ್ಪಿತಸ್ಥ ಪೊಲೀಸರಿಗೆ ತಲಾ 1.43 ದಶಲಕ್ಷ ರೂಬೆಲ್ (47,000 ಡಾಲರ್) ದಂಡ ವಿಧಿಸಲಾಗಿದೆ. ಇದು ಅವರು ಪಡೆದಿದ್ದ ಲಂಚದ 200 ಪಟ್ಟು ಹೆಚ್ಚಿನ ಪ್ರಮಾಣದ ಹಣ. ಅವರಿಗೆ ಇನ್ನು ಮೂರು ವರ್ಷಗಳ ವರೆಗೆ ಪೊಲೀಸ್ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸದಂತೆ ನಿರ್ಬಂಧ ಹೇರಲಾಗಿದೆ.

ಕಳೆದ 2011ರಲ್ಲಿ  ಕ್ರೆಮ್ಲಿನ್ ನಲ್ಲಿ  ಭ್ರಷ್ಟಾಚಾರ ನಿಗ್ರಹಿಸುವ ಕ್ರಮವಾಗಿ, ಭ್ರಷ್ಟ ಅಧಿಕಾರಿಗಳಿಗೆ ಅವರು ಪಡೆದ ಲಂಚದ ಹಣಕ್ಕೆ ಅಪಾರ ಪ್ರಮಾಣದಲ್ಲಿ ದಂಡ ವಿಧಿಸಬೇಕೆಂಬ ಕಾನೂನು ರಚಿಸಲಾಗಿತ್ತು. ಕಳೆದ ವರ್ಷ ತಾತರಸ್ತಾನ್ ನಲ್ಲಿನ ಜಿಲ್ಲೆಯ ಅಧಿಕಾರಿಯೊಬ್ಬರು 5 ದಶಲಕ್ಷ ರೂಬೆಲ್ ಪಡೆದಿದ್ದಕ್ಕಾಗಿ 300 ರೂಬೆಲ್ (10 ದಶಲಕ್ಷ ಡಾಲರ್) ದಂಡ ವಿಧಿಸಲಾಗಿತ್ತು. ಅದು ಇತ್ತಿಚೆಗೆ ವಿಧಿಸಿದ ದಂಡದ ಪ್ರಮಾಣದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ದಂಡ ಎಂದು ಹೇಳಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry