ರಸಗೊಬ್ಬರಕ್ಕೆ ಪರದಾಟ

7

ರಸಗೊಬ್ಬರಕ್ಕೆ ಪರದಾಟ

Published:
Updated:

ಚನ್ನಪಟ್ಟಣ: ಒಂದು ವಾರದಿಂದ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಬೇಡಿಕೆಯಷ್ಟು ಯೂರಿಯಾ ಗೊಬ್ಬರ ದೊರೆಯದಂತಾಗಿದೆ. ಇದರಿಂದಾಗಿ ರೈತರು ಯೂರಿಯಾ ರಸಗೊಬ್ಬರ ಪಡೆಯಲು ಪರದಾಡುವಂತಾಗಿದೆ.ಪಟ್ಟಣದ ಹಾಪ್‌ಕಾಮ್ಸ ರಸಗೊಬ್ಬರ ಮಳಿಗೆಯಲ್ಲಿ ಯೂರಿಯಾ ರಸಗೊಬ್ಬರ ಪಡೆಯಲು ರೈತರು ಗುರುವಾರ ಬೆಳಿಗ್ಗೆಯಿಂದಲೇ ಸರದಿಸಾಲಿನಲ್ಲಿ ನಿಂತು ಕಾಯುವ ಪರಿಸ್ಥಿತಿ ಉಂಟಾಯಿತು. ಮಳಿಗೆಯಲ್ಲಿ ರಸಗೊಬ್ಬರ ಸಂಗ್ರಹ ಇಲ್ಲದ ಕಾರಣ ರೈತರು ಕಾದುಕಾದು ಬೇಸತ್ತರು. ಮಧ್ಯ್ಯಾಹ್ನದ ವೇಳೆಗೆ ಗೊಬ್ಬರ ದಾಸ್ತಾನು ಬಂದ ಕೂಡಲೇ ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ರೈತರು ಪರದಾಟದಲ್ಲೇ ಸರತಿ ಸಾಲಿನಲ್ಲಿ ನಿಂತು ಯೂರಿಯಾ ಪಡೆದುಕೊಂಡರು.ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಗೊಬ್ಬರ ಪಡೆಯಲು ಬೆಳಿಗ್ಗೆ 8 ಗಂಟೆಯಿಂದಲೇ ಹಾಪ್‌ಕಾಮ್ಸ ಮಳಿಗೆಗಳ ಮುಂದೆ ಜಾಮಯಿಸಿದ್ದರು. ಆದರೆ ರಸಗೊಬ್ಬರ ಮಳಿಗೆಯವರು ಮಾತ್ರ ಮಧ್ಯಾಹ್ನ ಯೂರಿಯ ಬರುವುದಾಗಿ ತಿಳಿಸಿ, ರೈತರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry