ರಸಗೊಬ್ಬರ ಕೊರತೆ: ರೈತರ ಪರದಾಟ

ಸೋಮವಾರ, ಮೇ 20, 2019
33 °C

ರಸಗೊಬ್ಬರ ಕೊರತೆ: ರೈತರ ಪರದಾಟ

Published:
Updated:

ಗುಡಿಬಂಡೆ: ರಸಗೊಬ್ಬರದ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ತಾಲ್ಲೂಕಿ ನಾದ್ಯಂತ ರೈತರು ಆತಂಕಕ್ಕೆ ಒಳಗಾಗಿದ್ದಾರೆ.ಗೊಬ್ಬರಕ್ಕಾಗಿ ಪರದಾಡುತ್ತಿರುವ ರೈತರು ಚೀಲ ಹಿಡಿದು ಊರೂರು ಅಲೆಯುತ್ತಿದ್ದಾರೆ.`ಪ್ರತಿವರ್ಷ ಬಿತ್ತನೆಗೆ ಸರಿಯಾಗಿ ವಿವಿಧ  ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಟಿಎಪಿಸಿ ಎಂಎಸ್‌ಗೆ ಬೇಡಿಕೆಗೆ ಅನುಗುಣವಾಗಿ ಪೂರೈಸಿಲ್ಲ. ಇದರಿಂದ ಸಮಸ್ಯೆ ಉಲ್ಪಣಗೊಳ್ಳಲು ಕಾರಣ ಎಂದು ಖಾಸಗಿ ವ್ಯಾಪಾರಸ್ಥರು ಸಬೂಬು ಹೇಳುತ್ತಿದ್ದಾರೆ~ ಎನ್ನುತ್ತಾರೆ ಜಿಲ್ಲಾ ಹಾಲು ಒಕ್ಕೂಟದ ಮಾಜಿ ನಿರ್ದೇಶಕ ರೈತ ಮುಖಂಡ ಕೆ.ಅಶ್ವತ್ಥರೆಡ್ಡಿ.`ಯಾವುದೇ ಸಬ್ಸಿಡಿ ಸಾಲ ನಮಗೆ ದೊರೆತಿಲ್ಲ. ಕೃಷಿ ಉಪಕರಣ ಹಾಗೂ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವುದಕ್ಕೆ ಕೃಷಿ ಇಲಾಖೆ ವಿಫಲವಾಗಿದೆ.ರೈತರಿಗೆ ಅತ್ಯಗತ್ಯವಾದ ಯೂರಿಯಾ ಪೂರೈಕೆಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು~ ಎನ್ನುವುದು ರೈತರ ಒತ್ತಾಯ.ವ್ಯತ್ಯಯ: ಕೃಷಿ ಇಲಾಖೆಯ ನಿರ್ದೇಶನ ಹಾಗೂ ಸೂಚನೆಯಂತೆ  ದಾಸ್ತಾನು ಮಾಡಿ ಮಾರಾಟ ಮಾಡು ತ್ತಿದ್ದ ಟಿಎಪಿಸಿಎಂಎಸ್‌ಗೆ  ರಸಗೊಬ್ಬರ ವನ್ನು ಸಂಬಂಧಪಟ್ಟವರು ಪೂರೈಸಿಲ್ಲ ಎನ್ನುವುದು ರೈತರ ದೂರು.

`ರೈತರಿಗೆ ತೊಂದರೆಯಾಗದಿರಲಿ ಎಂದು ಕೆಎಸ್‌ಸಿಎಂಎಫ್‌ನಿಂದ  75 ಟನ್ ಗೊಬ್ಬರ ಖರೀದಿಸಿ ತರಲಾಗಿದೆ. ಡಿಎಪಿ, ಕಾಂಪ್ಲೆಕ್ಸ್ ಸಹ ದಾಸ್ತಾನು ಇದೆ~ ಎಂದು ಸೊಸೈಟಿ ಕಾರ್ಯದರ್ಶಿ ಕೆ.ಟಿ.ನಂಜುಂಡಪ್ಪ ತಿಳಿಸಿದರು.    

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry