ಶನಿವಾರ, ಮೇ 15, 2021
26 °C

ರಸಗೊಬ್ಬರ ದುರ್ಬಳಕೆ ತಡೆಯಲು ಪಾಸ್‌ಬುಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಕ್ಕೇರಿ: ರಾಜ್ಯದಲ್ಲಿ ರಾಸಾಯನಿಕ ಗೊಬ್ಬರದ ದುರುಪಯೋಗ ತಡೆಯಲು ಮುಂದಿನ ವರ್ಷದಿಂದ `ಪಾಸ್ ಬುಕ್~ ವ್ಯವಸ್ಥೆ ಜಾರಿಗೊಳಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಕೃಷಿ ಸಚಿವ ಉಮೇಶ ಕತ್ತಿ ಅವರು ಶನಿವಾರ ಇಲ್ಲಿ ಹೇಳಿದರು.ರಾಜ್ಯದಲ್ಲಿ ಗೊಬ್ಬರದ ಬಳಕೆ ಶೇ 10ರಷ್ಟು ಹೆಚ್ಚಾಗಿರುವುದು ಮೂರು ವರ್ಷಗಳ ಕಾಲ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ. ಜೊತೆಗೆ ಅದರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ರಾಸಾಯನಿಕ ಗೊಬ್ಬರವನ್ನು ಅನವಶ್ಯಕವಾಗಿ ಸಂಗ್ರಹಿಸಿಡುವ ಮತ್ತು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದನ್ನು ತಪ್ಪಿಸಲು ವಿಚಕ್ಷಕ ದಳ ರಚಿಸಲಾಗಿದೆ. ಆದರೂ ಅದನ್ನು ತಡೆಯಲು ಸಾಧ್ಯವಾಗಿಲ್ಲ.ಹೀಗಾಗಿ ಮುಂದಿನ ವರ್ಷದಿಂದ, ರೈತರು ಹೊಂದಿರುವ ಜಮೀನು, ಅವರು ಬೆಳೆಯುವ ಬೆಳೆ ಮತ್ತು ಅದಕ್ಕೆ ಬೇಕಾಗುವ ಗೊಬ್ಬರದ ಪ್ರಮಾಣ ಆಧರಿಸಿ ಪಾಸ್‌ಬುಕ್ ನೀಡಿ `ಕೋಟಾ~ ಪ್ರಕಾರ ಗೊಬ್ಬರ ವಿತರಿಸುವ ಉದ್ದೇಶವಿದೆ. ರೈತರಿಗೆ ರಸಗೊಬ್ಬರದ ಪಾಸ್ ಬುಕ್ ವಿತರಣೆ ಕುರಿತು ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮೊದಲ ಸುತ್ತಿನ ಮಾತುಕತೆ ಮುಗಿದಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.