ರಸಗೊಬ್ಬರ ಮಾರಾಟಗಾರರ ಸಭೆ

7

ರಸಗೊಬ್ಬರ ಮಾರಾಟಗಾರರ ಸಭೆ

Published:
Updated:

ಹೊಸಕೋಟೆ: ತಾಲ್ಲೂಕಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಭೆ ಸಹಾಯಕ ಕೃಷಿ ನಿರ್ದೇಶಕ ಎ.ಎಸ್.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.`ರೈತರಿಗೆ ಅನ್ಯಾಯವಾಗದಂತೆ ಮಾರಾಟಗಾರರು ವಿವಿಧ ಕಾಯ್ದೆ, ನಿಯಮಗಳ ಅನುಸಾರವಾಗಿಯೇ ವ್ಯವಹಾರ ನಡೆಸಬೇಕು. ಯಾವುದೇ ಕಾರಣಕ್ಕೂ ಅನಧಿಕೃತ ವಸ್ತುಗಳನ್ನು ಮಾರಾಟ ಮಾಡದಂತೆ ಎಚ್ಚರ ವಹಿಸಬೇಕು' ಎಂದು ಅವರು ಸೂಚಿಸಿದರು.ನಿಯಮ ಉಲ್ಲಂಘಿಸಿದಲ್ಲಿ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ರೈತರೂ ಕೃಷಿ ಪರಿಕರಗಳನ್ನು ಖರೀದಿಸುವಾಗ ತಪ್ಪದೆ ರಶೀದಿ ಪಡೆಯುವಂತೆಯೂ ನೀಡದಿದ್ದಲ್ಲಿ ಕೃಷಿ ಇಲಾಖೆಗೆ ದೂರು ನೀಡುವಂತೆಯೂ ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry