ಬುಧವಾರ, ಜೂನ್ 16, 2021
25 °C

ರಸಗೊಬ್ಬರ: ರೈತರಿಗೆ ಕಾರ್ಡ್ ವಿತರಣೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ತಾಲ್ಲೂಕಿನ ರೈತರಿಗೆ ಸಮರ್ಪಕ ರಸಗೊಬ್ಬರ ವಿತರಿಸಲು ಅನುಕೂಲವಾಗುವಂತೆ ಹಾವೇರಿ ಜಿಲ್ಲೆ ಮಾದರಿಯಲ್ಲಿ ಕಾರ್ಡ್ ವಿತರಿಸಲು ನಿರ್ಧರಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಹನುಮಯ್ಯ ತಿಳಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಂಗಮ್ಮ ಅಧ್ಯಕ್ಷತೆಯಲ್ಲಿ ಮಂಗಳವಾರ  ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.ಕಂದಾಯ ಇಲಾ ಖೆಯಿಂದ ರೈತರ ಪಟ್ಟಿ ಪಡೆಯಲಾಗು ವುದು. ಈಗಾಗಲೇ ಜಿಲ್ಲೆಯಲ್ಲಿ 27 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.ತಾ.ಪಂ. ಮಾಜಿ ಅಧ್ಯಕ್ಷೆ ವಿಜಯಶಿವಲಿಂಗಪ್ಪ ಮಾತನಾಡಿ, ಎಂ. ಶಿವರ, ಬಿದರೆ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಮಕ್ಕಳು ಪ್ರಾಣ ಭಯದಲ್ಲಿ ಪಾಠಕೇಳ ಬೇಕಿದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬಾಗೂರು ಕಾಲೋನಿ, ಸಾಸಲುಪುರ ಕೊಪ್ಪಲು, ಜುಟ್ಟನಹಳ್ಳಿ ಬೋರೆ, ಕೋಡಿಹಳ್ಳಿ ಹಾಗೂ ಪಟ್ಟಣದಲ್ಲಿರುವ ಹೌಸಿಂಗ್ ಬೋರ್ಡ್‌ನಲ್ಲಿ  ಅಂಗನ ವಾಡಿ ಕೇಂದ್ರವನ್ನು ಏಪ್ರಿಲ್‌ನಲ್ಲಿ ಆರಂಭಿಸಲಾಗುವುದು ಎಂದು ಸಿಡಿಪಿಓ ಗಂಗಪ್ಪಗೌಡ ಸಭೆಯ ಗಮನಕ್ಕೆ ತಂದರು.ಮೂಕಿಕೆರೆ, ಮಸಕನಹಳ್ಳಿ ಗ್ರಾಮ ದಲ್ಲಿ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿವೆ. ಅಕ್ಕನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರು ಸೌಲಭ್ಯಕ್ಕಾಗಿ ವಿದ್ಯುತ್ ಪರಿವರ್ತಕ ಅಳವಡಿಸಿ ಎಂದು ಮನವಿ ಮಾಡಿದರೆ. ಹಣ ಕಟ್ಟಬೇಕು ಎನ್ನುತ್ತಾರೆ ಅಧಿಕಾರಿಗಳು. ಅಲ್ಲಿಯವ ರೆಗೆ ಜನತೆ ನೀರು ಕುಡಿಯಬಾರದೇ ಎಂದು ಸದಸ್ಯ ಪ್ರಭಾಕರ್, ಪ್ರಶ್ನಿಸಿದರು.ಇದಕ್ಕೆ ಧನಿಗೂಡಿಸಿದ ಸದಸ್ಯ ಮಂಜೇಗೌಡ, ಪೂಮಡಿಹಳ್ಳಿ ಗ್ರಾಮ ದಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಪರಿವರ್ತಕ ಅಳವಡಿಸಿ ಎಂದು 6 ತಿಂಗಳಿಂದ ಮನವಿ ಮಾಡಿದರೂ ಅದಕ್ಕೆ ಮಹತ್ವ ನೀಡಿಲ್ಲ.  ವಿದ್ಯುತ್ ಗುತ್ತಿಗೆದಾ ರರ ಜೊತೆ ಶಾಮೀಲಾಗಿರುವ ಶಾಖಾ ಧಿಕಾರಿಗಳು ಸಮರ್ಪಕ ಕೆಲಸ ಮಾಡು ತ್ತಿಲ್ಲ. ಟಿ.ಸಿ. ಅಳವಡಿಸಲು  ರೈತರು 10-15 ಸಾವಿರ ರೂ. ಖರ್ಚು ಮಾಡ ಬೇಕಿದೆ. ಹಣಕೊಟ್ಟು ಕಾಯುವಂತಾ ಗಿದೆ ಎಂದು ಆರೋಪ ಮಾಡಿದರು. ಸೆಸ್ಕ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ.ಸಿ. ನವೀನ್ ಮಾತನಾಡಿ, ಅಂದಾಜು ಪಟ್ಟಿ ನಾವೇ ತಯಾರಿಸುತ್ತೇವೆ. ಆ ರೀತಿ ದುರುಪಯೋಗ ಆಗುವುದಿಲ್ಲ ಎಂದರು.ಕಾಂತರಾಜಪುರದಲ್ಲಿ ಕಾಮಗಾರಿ ಅಪೂರ್ಣಗೊಂಡ `ರಾಜೀವ್‌ಗಾಂಧಿ ಸೇವಾ ಕೇಂದ್ರ~ವನ್ನು ತರಾತುರಿಯಲ್ಲಿ ಉದ್ಘಾಟಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಸದಸ್ಯ ಮಂಜೇಗೌಡ, ತಾಲ್ಲೂಕಿನ ವಿವಿಧೆಡೆ ನಡೆಯುವ ಸರ್ಕಾರಿ ಸಮಾರಂಭಕ್ಕೆ ಆಯಾ ವ್ಯಾಪ್ತಿಯ ಸದಸ್ಯರನ್ನು ಆಹ್ವಾನಿಸು ತ್ತಿಲ್ಲ ಎಂದು ದೂರಿದರು.ತಾಲ್ಲೂಕನ್ನು ಬರಗಾಲಪೀಡಿತ ಪ್ರದೇಶ ಎಂದು ಘೋಷಿಸಿರುವುದರಿಂದ ಏಪ್ರಿಲ್, ಮೇ ತಿಂಗಳಲ್ಲಿಯೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು ಎಂದು ಅಕ್ಷರ ದಾಸೋಹ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು.ಅಧ್ಯಕ್ಷೆ ರಂಗಮ್ಮ, ಉಪಾಧ್ಯಕ್ಷ ಮಂಜೇಗೌಡ, ಸದಸ್ಯರಾದ  ಎಚ್. ಎಸ್.ರವಿಕುಮಾರ್, ಜಿ. ರವೀಶ್,  ಕೆ.ಎನ್. ಗಂಗಾಧರ್, ತಾ.ಪಂ. ಇಓ ಕೆ.ಬಿ. ನಿಂಗರಾಜಪ್ಪ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.