ಗುರುವಾರ , ಜೂಲೈ 2, 2020
22 °C

ರಸಗೊಬ್ಬರ ಹಂಚಿಕೆ ಸಮಸ್ಯೆ; ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸಗೊಬ್ಬರ ಹಂಚಿಕೆ ಸಮಸ್ಯೆ; ತನಿಖೆಗೆ ಆದೇಶ

ಮಡಿಕೇರಿ: ಕೊಡಗು ಜಿಲ್ಲೆಗೆ ಕಳೆದ ಬಾರಿಗಿಂತ ಈ ವರ್ಷ ಅಧಿಕ ರಸಗೊಬ್ಬರ ಪೂರೈಕೆ ಯಾಗಿದ್ದರೂ ಹಂಚಿಕೆಯಲ್ಲಿ ಕೊರತೆ ಉಂಟಾ ಗಲು ಕಾರಣವೇನು ಎನ್ನುವುದರ ಬಗ್ಗೆ ಪತ್ತೆ ಹಚ್ಚಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಬಬ್ಬೀರ ಸರಸ್ವತಿ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಆದೇಶ ನೀಡಿದರು.ನಗರದ ಕೋಟೆ ಹಳೇ ವಿಧಾನಸ ಭಾಂಗ ಣದಲ್ಲಿ ಬುಧವಾರ ನಡೆದ ರಸಗೊಬ್ಬರ ಹಂಚಿಕೆ ಕುರಿತ ಕಾರ್ಯಾಗಾರದಲ್ಲಿ ಅವರು ಈ ಆದೇಶ ನೀಡಿದರು. ಮುಂಗಾರು ಮಳೆ ಆರಂಭವಾಗಿದ್ದು, ಎಲ್ಲೆಡೆ ಕೃಷಿ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಹಲವೆಡೆ ಸಮರ್ಪಕವಾಗಿ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿಲ್ಲ ಎಂದು ಹಲವು ರೈತರು ದೂರಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಗಾರ ವನ್ನು ಆಯೋಜಿಸಲಾಗಿತ್ತು. ಜಿಲ್ಲೆಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆಯಾಗಿದ್ದರೂ ರಸಗೊಬ್ಬರ ಮತ್ತು ಬಿತ್ತನೆ ಬೀಜ ಪೂರೈಕೆಯಲ್ಲೇನಾದರೂ ಲೋಪ ದೋಷಗಳು ನಡೆದಿವೆಯೇ ಎಂಬುದನ್ನು ತನಿಖೆ ನಡೆಸಿ, ವರದಿ ನೀಡುವಂತೆ ಜಿ.ಪಂ. ಅಧ್ಯಕ್ಷರು ಸೂಚನೆ ನೀಡಿದ್ದಾರೆ.ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಾಂಡ್ ಗಣಪತಿ ಮತ್ತು ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ನ ಪ್ರತಿನಿಧಿಗಳಾದ ಬಿ.ಡಿ. ಮಂಜುನಾಥ್, ಪಾಂಡಂಡ ನರೇಶ್ ಮತ್ತಿತ ರರು ಸಭೆಯಲ್ಲಿ ಜಿಲ್ಲೆಗೆ ಬಂದಿರುವ ರಸ ಗೊಬ್ಬರದ ಕುರಿತು ಅಧಿಕಾರಿಗಳು ನೀಡಿರುವ ಅಂಕಿ ಅಂಶದ ಕುರಿತು ಸಂಶಯ ವ್ಯಕ್ತ ಪಡಿಸಿದರು.ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಅವರು ರಾಸಾಯನಿಕಗಳ ಮೇಲೆ ಅತಿಯಾದ ಅವಲಂಬನೆಯಾಗುತ್ತಿರುವುದರಿಂದ ಹಾಗೂ ಉತ್ಪಾದನೆಯಲ್ಲಿನ ಕುಸಿತದಿಂದ ಎಲ್ಲೆಡೆ ರಸಗೊಬ್ಬರದ ಕೊರತೆ ಉಂಟಾಗುತ್ತಿದೆ. ಜಿಲ್ಲೆಗೆ ಸಾಕಷ್ಟು ಗೊಬ್ಬರ ಪೂರೈಕೆಯಾಗಿದೆಯಾದರೂ ಸದ್ಯಕ್ಕೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸಲು ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು.ಕೃಷಿ ಇಲಾಖೆ ಅಧಿಕಾರಿಗಳು ಜಿಲ್ಲೆಯಾದ್ಯಂತ ವ್ಯಾಪಕ ಪ್ರವಾಸ ಮಾಡಿ ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿರುವ ಬಗ್ಗೆ ತನಿಖೆ ನಡೆಸಿ ನಾಲ್ಕು ದಿನಗಳೊಳಗೆ ವರದಿ ಸಲ್ಲಿಸುವಂತೆ ರವಿ ಕುಶಾಲಪ್ಪ ಅವರು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸಿ.ಕೆ.ದೇವದಾಸ್ ಅವರಿಗೆ ಸೂಚನೆ ನೀಡಿದರು. ಇದೇ ರೀತಿ ಬಿತ್ತನೆ ಬೀಜ ವಿತರಣೆ ವೇಳೆ ಆರ್.ಟಿ.ಸಿಗೆ ರೈತರನ್ನು ಒತ್ತಾಯ ಪಡಿಸದೆ ಗ್ರಾಮ ಪಂಚಾಯ್ತಿ ಅಥವಾ ಸ್ಥಳೀಯ ಕೃಷಿ ಸಹಾಯಕರ ಮೂಲಕ ಪೂರೈಸುವಂತೆ ಸೂಚನೆ ನೀಡಿದರು.ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕರಾದ ಬೆಲ್ಲು ಸೋಮಯ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ರಸಗೊಬ್ಬರದ ಸಮಸ್ಯೆ ತಲೆದೋರಲು ಕಾರಣಗಳೇನೆಂಬುದರ ಬಗ್ಗೆ ಸವಿವರವಾಗಿ ಸಭೆಗೆ ಮಾಹಿತಿ ನೀಡಿದರು.ಕುಶಾಲನಗರ ರಾಜ್ಯ ಸಹಕಾರ ಮಹಾಮಂಡಲ ಶಾಖೆಯ ವ್ಯವಸ್ಥಾಪಕರಾದ ಚಿನ್ನಪ್ಪ ಅವರು ರಸಗೊಬ್ಬರ ಎತ್ತುವಳಿಯ ಬದಲಾಗುತ್ತಿರುವ ತಾಂತ್ರಿಕ ಸಮಸ್ಯೆಗಳು ವಿ.ಎಸ್.ಎಸ್.ಎನ್.ಗಳು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ  ವಿವರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾಂಡ್ ಗಣಪತಿ, ಭಾರತೀಶ್, ಬೊಳ್ಳಮ್ಮ ನಾಣಯ್ಯ, ಮಣಿನಂಜಪ್ಪ, ಬಿ.ಡಿ. ನಂಜಪ್ಪ, ಕಕ್ಕಬ್ಬೆ ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಪಾಂಡಂಡ ನರೇಶ್, ತಳೂರು ಕಿಶೋರ್, ಬಾಲಚಂದ್ರ ಕಳಗಿ, ಹಂಡ್ಲಿ ವಿ.ಎಸ್.ಎಸ್, ಎನ್‌ನ ವಿನೂತ್ ಶಂಕರ್ ಮತ್ತಿತರರು ಈಗಾಗಲೇ ಮಳೆ ಪ್ರಾರಂಭ ವಾಗಿದ್ದು ಇನ್ನು ಮುಂದೆ ಗೊಬ್ಬರ ಬಂದರೆ ಅಗತ್ಯವಿಲ್ಲ. ಇಂತಹ ಸಭೆಗಳನ್ನು  ಏಪ್ರಿಲ್-ಮೇ ತಿಂಗಳಿನಲ್ಲೇ ನಡೆಸಬೇಕು. ಮುಂದಿನ ವರ್ಷವಾದರೂ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ ಎಂದು ಒತ್ತಾಯಿಸಿದರು.ಗೊಬ್ಬರದ ಜೊತೆಗೆ ಇತರ ಜೈವಿಕ ಪದಾರ್ಥಗಳನ್ನು ಸೇರ್ಪಡೆ ಮಾಡಿ ಮಾರಾಟ ಮಾಡುತ್ತಿರುವುದು ರೈತರಿಗೆ ಹೊರೆಯಾಗುತ್ತಿದೆ. ಇದನ್ನು ಸ್ಥಗಿತಗೊಳಿಸಬೇಕೆಂದು ಅವರು ಒತ್ತಾಯಿಸಿದರು.ಗೊಬ್ಬರ ಪೂರೈಕೆ ಸಂಸ್ಥೆಗಳ ಪ್ರತಿನಿಧಿಗಳಾದ ಆರ್.ಸಿ.ಎಫ್‌ನ ತಿಮ್ಮಯ್ಯ ಇಫ್ಕೋದ ರಘು, ಎಂ.ಸಿ.ಎಫ್.ನ ನವೀನ್, ಕ್ರ್ರಿಕ್ಬೋದ ರಾಜು, ಫ್ಯಾಕ್ ಸಂಸ್ಥೆಯ ಕೆ.ಆರ್.ರಾಂ, ಐ.ಪಿ.ಎಲ್,ನ ದುದಾನಿ, ಟಿ.ಎಫ್, ಸಿ.ಎಲ್.ನ ಪ್ರಕಾಶ್ ಹಾಗೂ ಸೋಮೇಶ್ವರ ಫರ್ಟಿ ಲೆ ಜರ್ಸ್‌ ಕಂಪನಿಯ ಜಯಶಂಕರ ಗೌಡ, ಜುವಾರಿ ಶರತ್ ಬಾಬು ಮತ್ತಿತರರು ಸಭೆಯಲ್ಲಿ ಹಾಜರಿದ್ದರು.ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಬ್ಬೀರ ಸರಸ್ವತಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎನ್. ಕೃಷ್ಣಪ್ಪ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ವೆಂಕಟಸ್ವಾಮಿ, ಕೊಡಗು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಚೋಟು ಕಾವೇರಪ್ಪ, ಕಾಫಿ ಮಂಡಳಿಯ ಉಪ ನಿರ್ದೇಶಕರಾದ ರಟ್ಟಗೇರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೃಷಿ ಇಲಾಖೆಯ ಲತಾ ಪ್ರಕಾಶ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕರಾದ ಗಿರೀಶ್ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.