ರಸವತ್ತಾದ ಘರ್ಷಣೆ

7

ರಸವತ್ತಾದ ಘರ್ಷಣೆ

Published:
Updated:

ಹದಿನೈದು ವರ್ಷಗಳ ನಂತರ ನಟಿ ಮಾಲಾಶ್ರೀ ತಮ್ಮ ಹೋಮ್ ಬ್ಯಾನರ್ ಹೊರತುಪಡಿಸಿ ಬೇರೆ ಬ್ಯಾನರ್‌ನಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. ಅದು ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ. ಹೆಸರು `ಘರ್ಷಣೆ~. ಅದನ್ನು ನಿರ್ಮಾಪಕ ಶಂಕರೇಗೌಡ ನಿರ್ಮಿಸುತ್ತಿದ್ದಾರೆ.ಹೊರ ಬ್ಯಾನರ್‌ನ ಚಿತ್ರಗಳನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳದ ಮಾಲಾಶ್ರೀ ಅವರು ತಮ್ಮ ಚಿತ್ರವನ್ನು ಒಪ್ಪಿಕೊಳ್ಳಲು ಕಾರಣ, ಗ್ರ್ಯಾಂಡ್ ಆದ ಕತೆ ಎಂಬುದು ದಯಾಳ್ ಅವರ ಅಭಿಪ್ರಾಯ.ಕತೆ ರಚಿಸಿಕೊಂಡು ಮೂರು ತಿಂಗಳಿಂದ ಮಾಲಾಶ್ರೀ ಅವರನ್ನು ಒಪ್ಪಿಸುವುದರಲ್ಲಿ ದಯಾಳ್ ನಿರತರಾಗಿದ್ದರಂತೆ. ಕೊನೆಗೂ ಅವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿ ಚಿತ್ರವನ್ನು ಆರಂಭಿಸುತ್ತಿದ್ದಾರೆ. ಇದರೊಂದಿಗೆ `ಒಂದು ರೂಪಾಯಲ್ಲಿ ಎರಡು ಪ್ರೀತಿ~ ಸಿನಿಮಾವನ್ನೂ ನಿಭಾಯಿಸುತ್ತಿದ್ದಾರೆ.`ಪ್ರಾಯೋಗಿಕ ಸಿನಿಮಾ ಮಾಡಬೇಕು. ಬ್ರಿಡ್ಜ್ ಸಿನಿಮಾ ಮಾಡಬೇಕು ಎಂಬ ನನ್ನ ಮಾತುಗಳನ್ನೆಲ್ಲಾ ಪಕ್ಕಕ್ಕಿಟ್ಟು ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡಲು ಹೊರಟಿರುವೆ. ಅದೇ `ಘರ್ಷಣೆ~ ಸಿನಿಮಾ~ ಎಂದರು ದಯಾಳ್. ಚಿತ್ರದ ಕತೆ ಅವರದೇ.`ಆಕ್ಷನ್, ಕ್ರೈಮ್, ಥ್ರಿಲ್ಲಿಂಗ್ ಈ ಮೂರು ಅಂಶ ಸಿನಿಮಾದ ಹೈಲೈಟ್. ಅವುಗಳನ್ನು ಹದವಾಗಿ ಬೆರೆಸಿ ಮಾಸ್ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸಿರುವೆ. ಪ್ರೇಕ್ಷಕರಿಗೆ ನಾವು ಹೊಸದೇನನ್ನು ಕೊಡಬಹುದು ಎಂಬುದನ್ನು ವಿಶ್ಲೇಷಣೆ ಮಾಡಿ ಸಿನಿಮಾವನ್ನು ರೂಪಿಸುವ ಸಿದ್ಧತೆ ನಡೆಸಿದ್ದೇನೆ~ ಎಂದರು.`ಹೀರೋಗಳ ಡೇಟ್ ಕಾಯುತ್ತಾ ಕುಳಿತರೆ ಸಿನಿಮಾ ಆರಂಭವಾಗಲು ಆರು ತಿಂಗಳಿಂದ ಒಂದು ವರ್ಷ ಬೇಕು. ಹಾಗಾಗಿ, ಕನ್ನಡದಲ್ಲಿ ನಾಯಕರಿಗೆ ಸಮನಾದ ಮಾರ್ಕೆಟ್ ಯಾರಿಗಿದೆ? ಎಂದು ಸಮೀಕ್ಷೆ ಮಾಡಿದಾಗ ಅಂಥ ಏಕೈಕ ನಾಯಕಿ ಮಾಲಾಶ್ರೀ ಎಂಬುದು ತಿಳಿಯಿತು.ಅದಕ್ಕೆ ಅವರಿಗೆ ತಕ್ಕಂತಹ ಕತೆಯನ್ನು ರೂಪಿಸಿರುವೆ~ ಎಂದು ಮಾಲಾಶ್ರೀ ಅವರನ್ನು ಆಯ್ಕೆ ಮಾಡಿದ ಹಿಂದಿನ ಗುಟ್ಟನ್ನು ದಯಾಳ್ ರಟ್ಟು ಮಾಡಿದರು.`ಮಾಲಾಶ್ರೀ ಅವರು ಈಗಾಗಲೇ ಫಿಟ್ ಮತ್ತು ಎನರ್ಜೆಟಿಕ್ ಆಗಿರುವುದರಿಂದ ಅವರಿಗೆ ತಮ್ಮ ಚಿತ್ರಕ್ಕಾಗಿ ಹೆಚ್ಚುವರಿ ತರಬೇತಿಯ ಅಗತ್ಯ ಇರುವುದಿಲ್ಲ~ ಎನ್ನುವುದು ದಯಾಳ್ ಅನಿಸಿಕೆ. ಅಂದಹಾಗೆ, `ಘರ್ಷಣೆ~ಯಲ್ಲಿ ಮಾಲಾಶ್ರೀ ಅವರದು ಪೊಲೀಸ್ ಅಧಿಕಾರಿಯ ಪಾತ್ರ.`ಮಾಲಾಶ್ರೀ ಅವರು ಕ್ರೈಮ್ ಬ್ರ್ಯಾಂಚ್ ಪೊಲೀಸ್ ಆಫೀಸರ್ ಆಗಿರುತ್ತಾರೆ. ಆದರೆ ಪೊಲೀಸ್ ಸಮವಸ್ತ್ರ ತೊಡುವುದಿಲ್ಲ. ಚಿತ್ರವಿಡೀ ಆಸಕ್ತಿಕರ ತನಿಖೆಗಳನ್ನು ನಡೆಸುತ್ತಾರೆ.ಒಟ್ಟಾರೆ ಸಿನಿಮಾ ತುಂಬಾ ಕುತೂಹಲಕರವಾಗಿದೆ. ನನ್ನ ಪ್ರಕಾರ ಇದೊಂದು ಸೆನ್ಸಿಬಲ್ ಎಂಟರ್‌ಟೈನ್‌ಮೆಂಟ್. ಎರಡು ಹಾಡು. ನಾಲ್ಕು ಫೈಟ್ ಚಿತ್ರದಲ್ಲಿವೆ~ ಎಂದು ದಯಾಳ್ ಹೇಳಿದರು.`ಮಾಮೂಲಿ ಕತೆ ಇದರಲ್ಲಿ ಇಲ್ಲ. ಹೊಸದನ್ನು ಹೇಳಲು ಹೊರಟಿದ್ದೇನೆ. ಬಜೆಟ್ ಕೂಡ ದೊಡ್ಡದು. ಮೂರರಿಂದ ಮೂರೂವರೆ ಕೋಟಿ ಖರ್ಚು ಬೀಳಲಿದೆ~ ಎಂದರು.ಸುಚೀಂದ್ರ ಪ್ರಸಾದ್, ಪವಿತ್ರಾ ಲೋಕೇಶ್, ಆಶಿಶ್ ವಿದ್ಯಾರ್ಥಿ `ಘರ್ಷಣೆ~ಯ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry