`ರಸವಿನ್ಯಾಸ': ವಾರ್ಷಿಕೋತ್ಸವಕ್ಕೆ ಹೊಸ ಅರ್ಥ

7

`ರಸವಿನ್ಯಾಸ': ವಾರ್ಷಿಕೋತ್ಸವಕ್ಕೆ ಹೊಸ ಅರ್ಥ

Published:
Updated:
`ರಸವಿನ್ಯಾಸ': ವಾರ್ಷಿಕೋತ್ಸವಕ್ಕೆ ಹೊಸ ಅರ್ಥ

ಶಾಲಾ ವಾರ್ಷಿಕೋತ್ಸವೆಂದರೆ ಅಲ್ಲಿ ಕಣ್ಮನ ತಣಿಸುವಷ್ಟು ಮನರಂಜನಾ ಕಾರ್ಯಕ್ರಮಗಳಿರುತ್ತವೆ. ಹಾಡು, ನೃತ್ಯ, ನಾಟಕ ಹೀಗೆ ಕಲೆಯ ಅನೇಕ ಪ್ರಕಾರಗಳು ವಿದ್ಯಾರ್ಥಿಗಳು ಹಾಗೂ ಪ್ರೇಕ್ಷಕರನ್ನು ರಂಜಿಸುತ್ತವೆ. ಸಾಮಾನ್ಯವಾಗಿ ಎಲ್ಲ ಶಾಲೆಗಳ ವಾರ್ಷಿಕೋತ್ಸವ ಇವುಗಳಿಗಿಂತ ಭಿನ್ನವೇನೂ ಅಲ್ಲ. ಆದರೆ, ಸುಬ್ರಹ್ಮಣ್ಯ ನಗರದಲ್ಲಿರುವ ಈಸ್ಟ್‌ವೆಸ್ಟ್ ಪಬ್ಲಿಕ್ ಶಾಲೆ ತನ್ನ ವಾರ್ಷಿಕೋತ್ಸವ ಸಮಾರಂಭಕ್ಕೆ ವಿಭಿನ್ನತೆಯ ಸ್ಪರ್ಶ ನೀಡಿತು.ಸಮಾಜವನ್ನು ಬಾಧಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಅರಿವನ್ನು ಹೆಚ್ಚಿಸುವ ಮತ್ತು ಅವುಗಳ ಕುರಿತು ಮಕ್ಕಳನ್ನು ಸಂವೇದನಾಶೀಲರನ್ನಾಗಿಸುವ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ವಾರ್ಷಿಕೋತ್ಸವ ಆಚರಿಸಿತು.

`ರಸವಿನ್ಯಾಸ' ಎಂಬ ಶೀರ್ಷಿಕೆಯ ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಶಿಕ್ಷಕರ ಮುಂದೆ ವಿದ್ಯಾರ್ಥಿಗಳು ಪ್ರದರ್ಶನ ನೀಡಿದರು. ವಿದ್ಯಾರ್ಥಿಗಳ ಆಲೋಚನೆಯನ್ನು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ವೀಕ್ಷಿಸಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಗಿನ ಕಾರ್ಯಕ್ರಮ `ಸೃಷ್ಟಿ'. ಇದು ಕೀಟನೃತ್ಯ, ನಿಸರ್ಗ ನೃತ್ಯ, ಆದಿವಾಸಿ ನೃತ್ಯ, ಜಾನಪದ ನೃತ್ಯ ಮತ್ತು ಹೂವಿನ ನೃತ್ಯ ರೂಪಕವನ್ನು ಒಳಗೊಂಡಿತ್ತು. ಸಂಜೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮಲ್ಲಿರುವ ಎಲ್ಲ ಕೌಶಲಗಳನ್ನೂ ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಕಳೆಗಟ್ಟಿಸಿದರು.`ನಮ್ಮ ಶಾಲೆಯ ವಿದ್ಯಾರ್ಥಿಗಳು ಅವರ ಪ್ರತಿಭೆಯನ್ನು ವಿಭಿನ್ನವಾಗಿ ಪ್ರದರ್ಶಿಸಬೇಕೆನ್ನುವುದು ನಮ್ಮ ಬಯಕೆ. ಆದ್ದರಿಂದ ಈ ಕಾರ್ಯಕ್ರಮವನ್ನು ಪರಿಸರ, ಲಿಂಗ ತಾರತಮ್ಯ, ಹೆಣ್ಣುಶಿಶು ಹತ್ಯೆ ಮತ್ತು ಭ್ರೂಣಹತ್ಯೆ, ಮೊಬೈಲ್ ಫೋನ್ ಬಳಕೆಯಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು, ತ್ಯಾಜ್ಯ ನಿರ್ವಹಣೆ ಮತ್ತಿತರೆ ಸಮಸ್ಯೆಗಳ ಕುರಿತು ಅರಿವು ಹೆಚ್ಚಿಸುವ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ವಿದ್ಯಾರ್ಥಿಗಳು ಕೂಡ ಈ ಬಗೆಯ ಅರ್ಥಪೂರ್ಣ ಕಾರ್ಯಕ್ರಮವನ್ನು ಆನಂದಿಸಿದರು' ಎಂದು ಸುಬ್ರಮಣ್ಯನಗರ ಈಸ್ಟ್‌ವೆಸ್ಟ್ ಪಬ್ಲಿಕ್ ಸ್ಕೂಲ್‌ನ ಕಾರ್ಯದರ್ಶಿ ರಶ್ಮಿ ಕಿರಣ್ ಸಂತಸ ವ್ಯಕ್ತಪಡಿಸಿದರು.ಭೀಭತ್ಸ, ಸಮಕಾಲೀನ ನೃತ್ಯ, ಹೆಣ್ಣು ಭ್ರೂಣಹತ್ಯೆಯ ವಿಷಯಗಳನ್ನು ಒಳಗೊಂಡ ನೃತ್ಯಗಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಬಾಲ ಕಾರ್ಮಿಕ ಪದ್ಧತಿಯನ್ನು ನಿರಾಕರಿಸುವ `ಕರುಣಾ' ಕೂಡ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.ರಸವಿನ್ಯಾಸದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪೋಷಕರು ಹಾಗೂ ಅವರ ಮಿತ್ರವರ್ಗದ ನೂರಾರು ಮಂದಿ ಭಾಗವಹಿಸಿದ್ದರು. ವರ್ಷಪೂರ್ತಿ ನಡೆದ ವಿವಿಧ ಚಟುವಟಿಕೆಗಳ ವಿಜೇತರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry