ರಸಾಯನಶಾಸ್ತ್ರ: ಇಬ್ಬರಿಗೆ ನೊಬೆಲ್

7

ರಸಾಯನಶಾಸ್ತ್ರ: ಇಬ್ಬರಿಗೆ ನೊಬೆಲ್

Published:
Updated:
ರಸಾಯನಶಾಸ್ತ್ರ: ಇಬ್ಬರಿಗೆ ನೊಬೆಲ್

ಸ್ಟಾಕ್‌ಹೋಮ್ (ಎಪಿ):  ಅಮೆರಿಕದ ಇಬ್ಬರು ವಿಜ್ಞಾನಿಗಳು 2012ನೇ ಸಾಲಿನ ರಸಾಯನ ಶಾಸ್ತ್ರ ವಿಭಾಗದ ನೊಬೆಲ್ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.ರಾಬರ್ಟ್ ಲೆಫ್ಕೊವಿಟ್ಜ್ ಮತ್ತು ಬ್ರಿಯಾನ್ ಕೊಬಿಲ್ಕ ನೊಬೆಲ್ ಪುರಸ್ಕೃತ ರಸಾಯನಶಾಸ್ತ್ರ ವಿಜ್ಞಾನಿಗಳು.ಇಬ್ಬರು ವಿಜ್ಞಾನಿಗಳು ನಡೆಸಿದ `ಮಾನವ ದೇಹದೊಳಗಿನ ಕೋಶಗಳು ಬಾಹ್ಯ ಸಂಜ್ಞೆಗಳಿಗೆ ಪ್ರತಿಕ್ರಿಯಿಸಲು ನೆರವಾಗುವ ಪ್ರೊಟಿನ್~ಗಳ ಕುರಿತ ಅಧ್ಯಯನವನ್ನು ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ತಿಳಿಸಿದೆ.ರಾಬರ್ಟ್ ಮತ್ತು ಬ್ರಿಯಾನ್ ಅಧ್ಯಯನ ನಡೆಸಿರುವ ಪ್ರೊಟಿನ್‌ಗಳನ್ನು `ಸಂಜ್ಞೆ ಪರಿವರ್ತಕ ಜೋಡಿ ಜಿ-ಪ್ರೊಟಿನ್~(ಜಿ-ಪ್ರೊಟಿನ್-ಕಪಲ್ಡ್ ರಿಸೆಪ್ಟರ್ಸ್‌)ಎಂದು ಕರೆಯುತ್ತಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳೂ ಇದೇ `ಸಂಜ್ಞೆ ಪರಿವರ್ತಕಗಳ ಮೇಲೆ ಕಾರ್ಯ ನಿರ್ವಹಿಸುತ್ತವೆ ಎಂದು ರಾಯಲ್ ಅಕಾಡೆಮಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry