ರಸ್ತೆಗಳ ಅಭಿವೃದ್ಧಿಗೆ 5 ಕೋಟಿ: ನೇಮರಾಜ ನಾಯ್ಕ

7

ರಸ್ತೆಗಳ ಅಭಿವೃದ್ಧಿಗೆ 5 ಕೋಟಿ: ನೇಮರಾಜ ನಾಯ್ಕ

Published:
Updated:

ಹಗರಿಬೊಮ್ಮನಹಳ್ಳಿ: ಹಳೇ ಹಗರಿಬೊಮ್ಮನಹಳ್ಳಿ ಸಹಿತ ಪಟ್ಟಣದ ಬಸವೇಶ್ವರ ಬಜಾರ್, ರಾಮನಗರ, ಅರಳಿಹಳ್ಳಿ, ಕುರದಗಡ್ಡಿ ವ್ಯಾಪ್ತಿಯ ಎಲ್ಲ ಒಳ ರಸ್ತೆಗಳ ಅಭಿವೃದ್ಧಿಗೆ ರೂ 5 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ನೇಮರಾಜ ನಾಯ್ಕ ತಿಳಿಸಿದರು.ಶುಕ್ರವಾರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.ಈ ಹಿಂದೆ ಪಟ್ಟಣದ ರಸ್ತೆಗಳ ಪುನಶ್ವೇತನದ ನಿಟ್ಟಿನಲ್ಲಿ, ಜಿ.ಪಂ. ವತಿಯಿಂದ ರೂ 5 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವದ ಹಿನ್ನಲೆಯಲ್ಲಿ ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಮಗಾರಿಯನ್ನು ಯಾರಿಗೆ ವಹಿಸ ಬೇಕು ಎಂದು ಅಂತಿಮಗೊಳಿಸಿ ನಂತರ ಭೂಮಿ ಪೂಜೆ ನೆರವೇರಿಸುವುದಾಗಿ ಸ್ಪಷ್ಠಪಡಿಸಿದರು.ದೊಡ್ಡ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತದೆ. ಕಿರಿದಾದ ರಸ್ತೆ ಗಳನ್ನು ಸಿಸಿ ರಸ್ತೆಗಳನ್ನಾಗಿ ಮಾರ್ಪಡಿಸ ಲಾಗುತ್ತದೆ. ಇಡೀ ಪಟ್ಟಣದ ವ್ಯಾಪ್ತಿಯ ಎಲ್ಲ ಮಣ್ಣಿನ ರಸ್ತೆಗಳಿಗೆ ವಿದಾಯ ಹೇಳಲಾಗುತ್ತದೆ ಎಂದರು.ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಬಳಿ ಇರುವ ವಾಲ್ಮೀಕಿ ನಿವೇಶನದಲ್ಲಿ ನಿರ್ಮಿಸಲು ಉದ್ದೇಶಿಸ ಲಾಗಿರುವ ರೂ.2 ಕೋಟಿ ಮೊತ್ತದ ವಾಲ್ಮೀಕಿ ಸಮುದಾಯ ಭವನಕ್ಕೆ ಮೊದಲ ಹಂತದಲ್ಲಿ ರೂ.1 ಕೋಟಿ ಅನುದಾನ ಲಭ್ಯವಾಗಿದೆ. ವಾಲ್ಮೀಕಿ ಸಮಾಜದ ಮುಖಂಡರೊಡನೆ ಚರ್ಚಿಸಿ ಭೂಮಿಪೂಜೆಗೆ ದಿನಾಂಕ ನಿಗದಿ ಮಾಡುವುದಾಗಿ ವಿವರಿಸಿದರು.ಕೆಚ್ಚಿನಬಂಡಿ ರಸ್ತೆಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯ ಭವನಕ್ಕೆ ಶೀಘ್ರ ರೂ.2.5 ಕೋಟಿ ಅನುದಾನ ಒದಗಿಸಿ, ಪಟ್ಟಣ ದಲ್ಲಿ ನಡೆಯಲಿರುವ ಮುಂದಿನ ವರ್ಷದ ಪಂಚಮಸಾಲಿ ಜಗದ್ಗುರುಗಳ 5ನೇ ಪೀಠಾರೋಹಣದ ಮಹೋತ್ಸವ ಮೊದಲು ಸಮುದಾಯ ಭವನದ ಉದ್ಘಾಟನೆ ನೆರವೇರಿಸುವ ಆಶಯ ಹೊಂದಲಾಗಿದೆ ಎಂದರು.ಎಪಿಎಂಸಿ ಅಧ್ಯಕ್ಷ ರೋಹಿತ್, ತಾ.ಪಂ.ಮಾಜಿ ಅಧ್ಯಕ್ಷ ಪಿ.ಸೂರ್ಯ ಬಾಬು, ಗ್ರಾ.ಪಂ. ಸದಸ್ಯರಾದ ಯು.ಕೆ. ಕೊಟ್ರೇಶ್, ಕನಕಪ್ಪ, ಮುಖಂಡರಾದ ಬೇವಿನಹಳ್ಳಿ ಶ್ರೀನಿವಾಸ್, ಸಿ.ಎಚ್. ಸಿದ್ಧರಾಜು, ಸೈಯದ್ ಇರ್ಫಾನ್, ಖಲೀಲ್ ಸಾಬ್, ಬಿ.ಜಿ. ಬಡಿಗೇರ್, ಬಶೀರ್ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry