ರಸ್ತೆಗೆ ಗಿಡ ನೆಟ್ಟು ಪ್ರತಿಭಟನೆ

7

ರಸ್ತೆಗೆ ಗಿಡ ನೆಟ್ಟು ಪ್ರತಿಭಟನೆ

Published:
Updated:

ತೋವಿನಕೆರೆ: ರಸ್ತೆ ಗಿಡ ನೆಟ್ಟು ದುರಸ್ತಿಗೆ ಆಗ್ರಹಿಸಿದ ಘಟನೆ ಮಧುಗಿರಿ ತಾಲ್ಲೂಕು ಗೊಬಲಗುಟ್ಟೆಯಲ್ಲಿ ಬುಧವಾರ ನಡೆಯಿತು.ತೋವಿನಕೆರೆ- ಕೈಮರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯನ್ನು ಶೀಘ್ರ ಸರಿಪಡಿಸಬೇಕು. ಇಲ್ಲದ್ದಿದರೆ ರಸ್ತೆ­ಯಲ್ಲಿ ವಾಹನ ಸಂಚಾರ ನಿಲ್ಲಿಸಿ ಪ್ರತಿಭಟಿಸಲಾಗುತ್ತದೆ ಎಂದು ಸರ್ವ ಪ್ರದೇಶ ಸಮನಾಭಿವೃದ್ಧಿ ಚಿಂತನಾ ವೇದಿಕೆಯ ಅಧ್ಯಕ್ಷ ಎ.ಸಿ.ರಂಗಸ್ವಾಮಿ ತಿಳಿಸಿದ್ದಾರೆ.ಅನೇಕ ವರ್ಷಗಳಿಂದ ರಸ್ತೆ ದುರಸ್ತಿ ಕಾರ್ಯ ನಡೆದಿಲ್ಲ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಹಲವು ಉದಾಹರಣೆಗಳಿವೆ. ಬಸ್‌ನಲ್ಲಿ ಪ್ರಯಾಣಿಸುವ ಅನೇಕರ ಬೆನ್ನು ಮೂಳೆ ಮುರಿದಿದೆ ಎಂದು ದೂರಿದರು.ಈ ರಸ್ತೆ ದುರಸ್ತಿಯಾದರೆ, ತುಮಕೂರಿನಿಂದ ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹಳ್ಳಿಗಳಿಗೆ ಪ್ರಯಾಣಿಸಲು ಹತ್ತಿರದ ದಾರಿಯಾಗಿರುತ್ತದೆ. ಈ ವಿಚಾರವನ್ನು ಅಧಿಕಾರಿಗಳು ಗಮನಿಸಬೇಕು ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry