ಬುಧವಾರ, ಜೂನ್ 23, 2021
30 °C

ರಸ್ತೆಗೆ ಬಂದ ಜಿಂಕೆ ಗಾಬರಿಯಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ರಾಷ್ಟ್ರೀಯ ಹೆದ್ದಾರಿ ನಾಲ್ಕರ ಸಮೀಪದಲ್ಲಿರುವ ಗಾಜಲದಿನ್ನೆ ಅರಣ್ಯ ಪ್ರದೇಶದಿಂದ ನಗರವನ್ನು ಪ್ರವೇಶಿಸಿದ ಜಿಂಕೆಯೊಂದು ಗಾಯಗೊಂಡು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.ಬೆಳಿಗ್ಗೆ 9ರ ವೇಳೆಗೆ ನಗರದ ಹೊರವಲಯದ ಟೇಕಲ್ ರಸ್ತೆಯ ಮೂಲಕ ಪಿಸಿ ಬಡಾವಣೆಯನ್ನು ಪ್ರವೇಶಿಸಿದ ಜಿಂಕೆಯು ಚಿನ್ಮಯ ವಿದ್ಯಾಲಯದ ಮೂಲಕ ಕಠಾರಿಪಾಳ್ಯವನ್ನು ಪ್ರವೇಶಿಸಿತ್ತು. ಆ ವೇಳೆಗೆ ಅತಿಯಾಗಿ ಬೆದರಿ ಗಾಯಗೊಂಡಿದ್ದ ಜಿಂಕೆ ಕಠಾರಿಪಾಳ್ಯದ ಮುಖ್ಯರಸ್ತೆಯಲ್ಲಿ ಶಂಕರನಾಯಕ್ ಕ್ಲಿನಿಕ್ ಎದುರಿನ ಮನೆಯೊಂದನ್ನು ಪ್ರವೇಶಿಸಿತು.ನಂತರ ಮಾಹಿತಿ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಮಲ್ಲಯ್ಯ ಮತ್ತು ಹನುಮಂತಪ್ಪ ಸ್ಥಳಕ್ಕೆ ಬಂದರು. ಅವರ ಜೊತೆಯಲ್ಲಿ ನಗರಸಭೆ ಸದಸ್ಯ ಎಸ್.ಆರ್.ಮುರಳಿಗೌಡ ಸೇರಿದಂತೆ ಕೆಲವರು ಜಿಂಕೆಯನ್ನು ಆಟೋರಿಕ್ಷಾದಲ್ಲಿ ಸಾಗಿಸಿ ಪಶುವೈದ್ಯ ಆಸ್ಪತ್ರೆಗೆ ಕರೆತಂದರು. ಅಲ್ಲಿನ ಸಿಬ್ಬಂದಿ ನೀಡಿದ ಔಷಧಕ್ಕೆ ಸ್ಪಂದಿಸದೆ ಜಿಂಕೆ ಮೃತಪಟ್ಟಿತು.ಗಾಯಗೊಂಡ ಜಿಂಕೆಯ ಬಗ್ಗೆ ಮಾಹಿತಿ ನೀಡಿದರೂ ಸಕಾಲಕ್ಕೆ ಪಶುವೈದ್ಯರು ಬಾರದೆ ಚಿಕಿತ್ಸೆ ದೊರಕದ ಹಿನ್ನೆಲೆಯಲ್ಲಿ ಜಿಂಕೆ ಮೃತಪಟ್ಟಿದೆ ಎಂದು ಆರೋಪಿಸಿ ಮುರಳಿಗೌಡ ಮತ್ತಿತರರು ಕೆಲಹೊತ್ತು ಆಸ್ಪತ್ರೆಯಲ್ಲೆ ಧರಣಿ ನಡೆಸಿದರು.

ವಿದ್ಯುತ್ ವ್ಯತ್ಯಯ

ಕೋಲಾರ: ನಗರದಲ್ಲಿ ವಿದ್ಯುತ್ ಸರಬರಾಜು ಅಭಿವೃದ್ಧಿ ಸಲುವಾಗಿ ವಿದ್ಯುತ್ ಮಾರ್ಗಗಳನ್ನು ಉನ್ನತಿಗೇರಿಸಲು ಕೆಲಸ ಶುರುವಾಗಿದೆ.ಹೀಗಾಗಿ ಮಾ.6ರಂದು ನಗರದ ಬಂಗಾರಪೇಟೆ ವೃತ್ತದ ಆಸುಪಾಸು, ಧರ್ಮರಾಯನಗರ, ಆರ್.ಟಿ.ಓ. ಕಚೇರಿ, ಬೆಮೆಲ್ ಲೇ ಔಟ್, ಕೋಗಿಲೆಹಳ್ಳಿ ಮತ್ತು ಬಸವನತ್ತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಮಾ.7ರಂದು  ಕೋಲಾರಮ್ಮ ಟೆಂಪಲ್, ಬೃಂದಾವನ ಸರ್ಕಲ್, ಗಲ್‌ಪೇಟೆ, ಹಳೆ ಬಸ್‌ಸ್ಟ್ಯಾಂಡ್, ಅಮ್ಮವಾರಿಪೇಟೆ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.