ಶುಕ್ರವಾರ, ಮಾರ್ಚ್ 5, 2021
16 °C
ಸರಪಾಡಿ: ಹದಗೆಟ್ಟ ಕೊಟ್ಟುಂಜ- ಗಂಡಿ ರಸ್ತೆ

ರಸ್ತೆಯನ್ನೇ ಅಗೆದ ಕಿಡಿಗೇಡಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯನ್ನೇ ಅಗೆದ ಕಿಡಿಗೇಡಿಗಳು

ಬಂಟ್ವಾಳ: ಸಮಾಜದಲ್ಲಿ ಗ್ರಾಮೀಣ ಅಥವಾ ನಗರ ರಸ್ತೆ ಹದಗೆಟ್ಟಿದೆ ಎಂದು ಆಕ್ರೋಶಗೊಂಡು ಸ್ಥಳೀಯರು ಒಟ್ಟು ಸೇರಿ ಪ್ರತಿಭಟನೆ ನಡೆಸುವುದು ಅಥವಾ ಶ್ರಮದಾನ ಮೂಲಕ ರಸ್ತೆ ದುರಸ್ತಿ ಪಡಿಸುವುದು ಸಹಜ. ಆದರೆ ಬೃಹತ್ ಗಾತ್ರದ ಲಾರಿಗಳಲ್ಲಿ ನಿರಂತರವಾಗಿ ಅಕ್ರಮ ಮತ್ತು ಸಕ್ರಮ ಮರಳು ಸಾಗಾಟವಾಗುತ್ತದೆ ಎಂದು ಆರೋಪಿಸಿ ಡಾಂಬರೀಕರಣಗೊಂಡ ಸುಂದರ ರಸ್ತೆಯನ್ನೇ ಅಗೆದು ಹಾಕಿದ ಕಿಡಿಗೇಡಿ ಕೃತ್ಯವೊಂದು ಸರಪಾಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ.ಇಲ್ಲಿನ ಸರಪಾಡಿ-ಕೊಟ್ಟುಂಜ-ಗಂಡಿ ರಸ್ತೆಯಲ್ಲಿ ಲಾರಿ ಮತ್ತು ಟಿಪ್ಪರ್ ಮೂಲಕ ವ್ಯಾಪಕವಾಗಿ ಮರಳು ಸಾಗಾಟವಾಗು ತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಮೌನವಾಗಿ ಅದನ್ನು ಬೆಂಬಲಿಸು ತ್ತಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ಸರಪಾಡಿ-ಅಜಿಲಮೊಗರು ಸಂಪರ್ಕಿಸುವ ಗಂಡಿ-ಕೊಟ್ಟುಂಜ ರಸ್ತೆ ಯು ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಸರ್ಕಾರದ 'ನಮ್ಮ ಗ್ರಾಮ ನಮ್ಮ ರಸ್ತೆ' ಯೋಜನೆಯಡಿ ಡಾಂಬರೀಕರಣ ಗೊಂಡು ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದ್ದರು. ಮಾತ್ರವಲ್ಲದೆ ಇದೇ ಮುಂದುವರಿಕಾ ರಸ್ತೆಗೆ ತೇಪೆ ಡಾಂಬ ರೀಕರಣವೂ ನಡೆದಿದ್ದು, ಈ ರಸ್ತೆಯಲ್ಲಿ ಮರಳು ಸಾಗಾಟವಾಗು ತ್ತಿರುವುದನ್ನು ಕಂಡ ಕೆಲವೊಂದು ಕಿಡಿಗೇಡಿಗಳು ರಸ್ತೆ ಯ ಒಂದು ಬದಿ ಅಗೆದು ಹಾಕಿದ್ದಾರೆ.ಅಗೆದು ಹಾಕಿದ ರಸ್ತೆಯಲ್ಲಿ ಮಳೆ ಯಿಂದಾಗಿ ಜೆಲ್ಲಿ, ಮರಳು ಕೊರೆದು ಹೋಗಿ ದಿನೇ ದಿನೇ ಹೊಂಡ ವಿಸ್ತಾರ ಗೊಂಡು ಘನ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿನ ರಿಕ್ಷಾ ಚಾಲಕರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆ ಬದಿ ಉರುಳಿ ಬೀಳುವ ಭೀತಿ ವ್ಯಕ್ತಪಡಿಸಿದ್ದಾರೆ.ಇದರಿಂದಾಗಿ ಈ ರಸ್ತೆಯನ್ನು ಶೀಘ್ರವೇ ದುರಸ್ತಿಪಡಿಸುವುದರ ಜೊತೆಗೆ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.