ಬುಧವಾರ, ಅಕ್ಟೋಬರ್ 23, 2019
23 °C

ರಸ್ತೆಯಲ್ಲೇ ಅವಳಿ ಮಕ್ಕಳ ಜನನ: ತಾಯಿ ಸಾವು

Published:
Updated:

ಕೋಲ್ಕತ್ತ (ಪಿಟಿಐ): ತುಂಬು ಗರ್ಭಿಣಿಯೊಬ್ಬಳಿಗೆ ಎರಡು ಸರ್ಕಾರಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ್ದರಿಂದ ಮಹಿಳೆ ಪಾದಚಾರಿ ಮಾರ್ಗದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ ದಾರುಣ ಘಟನೆ ಇಲ್ಲಿ ನಡೆದಿದೆ.ಆರೋಗ್ಯ ಕಾರ್ಡ್ ಇದ್ದರೂ ಗುರುವಾರ ರಾತ್ರಿ ಎರಡು ಸರ್ಕಾರಿ ಆಸ್ಪತ್ರೆ ಸಿಬ್ಬಂದಿ, 40 ವರ್ಷದ ಗರ್ಭಿಣಿ ಮಹಿಳೆಗೆ ಪ್ರವೇಶ ನಿರಾಕರಿಸಿ ಕ್ರೌರ್ಯ ಮೆರೆದಿದ್ದಾರೆ.ಮೊದಲಿಗೆ ಚಿತ್ತರಂಜನ್ ಸೇವಾಸದನ ಆಸ್ಪತ್ರೆಗೆ ಹೋದಾಗ ಪ್ರವೇಶ ನಿರಾಕರಿಸಲಾಯಿತು. ಅಸ್ಪತ್ರೆಯಿಂದ ಹೊರಗೆ ಬಂದು ದಾರಿ ಬದಿಯಲ್ಲೇ ಮೊದಲ ಮಗುವಿಗೆ ಜನ್ಮ ನೀಡಿದಳು. ನಂತರ ಪತಿಯ ಸಹಾಯದಿಂದ ಶಂಭುನಾಥ ಪಂಡಿತ್ ಆಸ್ಪತ್ರೆಗೆ ತೆರಳಿದಳು. ಅಲ್ಲಿಯೂ ಪ್ರವೇಶ ನಿರಾಕರಿಸಲಾಯಿತು.

 

ಹೊರಗಡೆ ಬಂದು ರಸ್ತೆ ಬದಿಯಲ್ಲೇ ಎರಡನೇ ಮಗುವಿಗೆ ಜನ್ಮ ನೀಡಿ ಮಹಿಳೆ ಕೊನೆಯುಸಿರೆಳೆದಳು. ಈ ಅಮಾನವೀಯ ಘಟನೆಯ ಬಗ್ಗೆ ಪಶ್ಚಿಮಬಂಗಾಳ ಸರ್ಕಾರವು ತನಿಖೆಗೆ ಆದೇಶಿಸಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)