ಮಂಗಳವಾರ, ಜೂನ್ 22, 2021
29 °C

ರಸ್ತೆ ಅಪಘಾತ ತಡೆಗಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿವೇಗ, ಮದ್ಯಪಾನ ಮಾಡಿ ಚಾಲನೆ, ಚಾಲನೆ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸುವ ಉದ್ಧಟತನ ಮೊದಲಾದ ಸಂಚಾರ ನಿಯಮಗಳ ಉಲ್ಲಂಘನೆಗೆ ಈಗಿರುವ ದಂಡವನ್ನು ಐದರಿಂದ ಹತ್ತು ಪಟ್ಟು ಹೆಚ್ಚಿಸುವುದಕ್ಕೆ ಮತ್ತು ಕೆಲವು ಉಲ್ಲಂಘನೆಗಳಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಅವಕಾಶ ಇರುವ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.

 

ಸಂಚಾರ ನಿಯಮಗಳ ಉಲ್ಲಂಘನೆಯನ್ನು ಹೀಗೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಕೇಂದ್ರದ ಈ ಕ್ರಮ ಸ್ವಾಗತಾರ್ಹ. ರಸ್ತೆ ಅಪಘಾತಗಳ ಹೆಚ್ಚಳಕ್ಕೆ ಇಂಥ ಉಲ್ಲಂಘನೆಗಳೇ ಕಾರಣವಾಗಿರುವುದರಿಂದ ಕಠಿಣ ಶಿಕ್ಷಾ ಕ್ರಮಗಳು ಸುರಕ್ಷಿತ ರಸ್ತೆ ಸಂಚಾರಕ್ಕೆ ಅಗತ್ಯವೇ ಆಗಿವೆ.ಅಮಲಿನಲ್ಲಿ ವಾಹನ ಓಡಿಸುವಾಗ ಸಿಕ್ಕಿಬಿದ್ದ ಚಾಲಕರಿಗೆ ದಂಡ ಮತ್ತು ಜೈಲು ಶಿಕ್ಷೆ ನೀಡುವುದಕ್ಕೆ ಈಗಿರುವ ಕಾಯ್ದೆಯಲ್ಲಿಯೇ ಅವಕಾಶವಿದ್ದರೂ ಅವರಿಗೆ ದಂಡ ಹಾಕಿ, ಎಚ್ಚರಿಕೆ ನೀಡಿ ಬಿಟ್ಟು ಕಳಿಸುವ ಪರಿಪಾಠ ರೂಢಿಯಲ್ಲಿದೆ. ಇಂಥ `ಉದಾರ ನೀತಿ~ ಪ್ರಯೋಜನ ನೀಡಿಲ್ಲ.ರಸ್ತೆ ಅಪಘಾತಗಳ ಸಂಖ್ಯೆಯೂ ಕಡಿಮೆ ಆಗಿಲ್ಲ. ದಂಡದ ಪ್ರಮಾಣ ಹೆಚ್ಚಿಸಿ, ಜೈಲು ಶಿಕ್ಷೆಗೂ ಆಸ್ಪದ ಮಾಡಿಕೊಂಡಿರುವುದು ವಾಹನ ಚಾಲನೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುವಂತೆ ಮಾಡಿದೆ. ಸಂಚಾರ ನಿಯಮಗಳನ್ನು ಹೆಚ್ಚು ಬಾರಿ ಉಲ್ಲಂಘಿಸಿದರೆ ಚಾಲನಾ ಪರವಾನಗಿಯನ್ನು ಕಳೆದುಕೊಳ್ಳುವ ಸ್ಥಿತಿಯೂ ಚಾಲಕರಿಗೆ ಎಚ್ಚರಿಕೆಯನ್ನು ಮೂಡಿಸಬಲ್ಲದು.ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದರೆ ಸಾಲದು. ಅವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ವ್ಯವಸ್ಥೆಯನ್ನೂ ಮಾಡಬೇಕು. ಈಗ ಅಸ್ತಿತ್ವದಲ್ಲಿರುವ ಸಾಮಾನ್ಯ ಸಂಚಾರ ನಿಯಮಗಳೂ ಸರಿಯಾಗಿ ಪಾಲನೆ ಆಗುತ್ತಿಲ್ಲ. ಅನೇಕರು ಲೈಸನ್ಸ್ ಇಲ್ಲದೆ ವಾಹನ ಓಡಿಸುತ್ತಾರೆ.ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿ ಯಾವ ನಿಯಮಗಳೂ ಇಲ್ಲ. ಸಾರಿಗೆ ಇಲಾಖೆಯ ಪ್ರತಿ ಹಂತದಲ್ಲೂ ಹಣ, ರಾಜಕೀಯ ಪ್ರಭಾವ ಕೆಲಸ ಮಾಡುತ್ತದೆ. ಚಾಲನಾ ಪರವಾನಗಿ ನೀಡಿಕೆಯಲ್ಲಿ ಮಧ್ಯವರ್ತಿಗಳದೇ ಹಾವಳಿ. ಚಾಲನಾ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸುಧಾರಣೆಗಳು ಆಗಬೇಕು.

 

ಕಟ್ಟುನಿಟ್ಟಿನ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರವೇ ಚಾಲನಾ ಪರವಾನಗಿ ಸಿಗುವಂತಾಗಬೇಕು. ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳನ್ನು ಪತ್ತೆ ಹಚ್ಚುವ ವ್ಯವಸ್ಥೆಯೂ ಹೆಚ್ಚು ವೈಜ್ಞಾನಿಕವಾಗಬೇಕು. ಸಂಚಾರ ನಿಯಮಗಳ ಕುರಿತಂತೆ ಮಕ್ಕಳಿಗೆ ಶಾಲಾ ಪಠ್ಯದಲ್ಲಿಯೇ ತಿಳುವಳಿಕೆ ನೀಡುವುದಕ್ಕೂ ಸರ್ಕಾರ ಗಮನ ಕೊಡಬೇಕು.ಯುವಜನರಲ್ಲಿನ ಅತಿ ವೇಗದ ಚಾಲನೆಯ ಹುಮ್ಮಸ್ಸು ಅಪಘಾತಗಳಿಗೆ ಕಾರಣವಾಗುತ್ತಿದೆ. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು. ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ತಪ್ಪಿದ್ದಲ್ಲ ಎನ್ನುವ ವಾತಾವರಣ ನಿರ್ಮಾಣವಾದರೆ ಸುರಕ್ಷಿತ ಸಂಚಾರ ವ್ಯವಸ್ಥೆ ಸಾಧ್ಯವಾಗಬಹುದು.ಅಪಘಾತಗಳಿಗೆ ಚಾಲಕರ ನಿರ್ಲಕ್ಷ್ಯದ ಜೊತೆಗೆ ರಸ್ತೆಗಳ ದುರವಸ್ಥೆಯೂ ಕಾರಣವಾಗಿರುವುದನ್ನು ಮರೆಯಬಾರದು. ರಸ್ತೆಗಳ ದುಃಸ್ಥಿತಿಗೆ ಕಾರಣರಾದವರನ್ನು ಅಪಘಾತದ ಪ್ರಕರಣಗಳಲ್ಲಿ ಹೊಣೆಗಾರರನ್ನಾಗಿಸುವುದಕ್ಕೆ ಕಾಯ್ದೆಯಲ್ಲಿ ಅವಕಾಶ ಮಾಡಿಕೊಳ್ಳುವುದು ಕೂಡ ಅಪಘಾತ ನಿಯಂತ್ರಣದಲ್ಲಿ ಅವಶ್ಯಕವಾದ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.