ರಸ್ತೆ ಅಪಘಾತ: ಮೂವರ ಸಾವು

7

ರಸ್ತೆ ಅಪಘಾತ: ಮೂವರ ಸಾವು

Published:
Updated:

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಆಂಧ್ರಪ್ರದೇಶದ ಮೆಹಬೂಬ್ ನಗರದ ಬೂತ್‌ಪುರ ಮಂಡಲ್ ಹತ್ತಿರ ಬುಧವಾರ ಬೆಳಿಗ್ಗೆ  ಮಹೀಂದ್ರ ವಾಹನ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಚಳ್ಳಕೆರೆಯ ಮೂವರು ಸ್ಥಳದಲ್ಲೇ ಮೃತಪಟ್ಟು ಇತರ ಮೂವರು ಗಾಯಗೊಂಡಿದ್ದಾರೆ.ಮೃತರನ್ನು  ವಾಹನ ಚಾಲಕ ದುರ್ಗಾವರದ ಶಿವರಾಜ್ (23), ಚಳ್ಳಕೆರೆ ಪಟ್ಟಣದ  ಮೇಘನಾ ಜ್ಯುವೆಲರ್ಸ್‌ ಮಾಲೀಕ ಸೂರನಹಳ್ಳಿ ಜಗದೀಶ್ ಅವರ ಪುತ್ರ ಆಕಾಶ್ (9) ಮತ್ತು ಓಂ ಜ್ಯುವೆಲರ್ಸ್‌ನ ಮಾಲೀಕ ಅಬ್ಬಾಸ್ ಪವಾರ್ ಅವರ ಪುತ್ರಿ ಅಶ್ವಿನಿ ಪವಾರ್ (12) ಎಂದು ಗುರುತಿಸಲಾಗಿದೆ. ಇವರೆಲ್ಲ ಹೈದರಾಬಾದ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry