ಭಾನುವಾರ, ಮೇ 16, 2021
29 °C

ರಸ್ತೆ ಅಪಘಾತ: 4 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿಯ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿರುವ ಸವದತ್ತಿ ತಾಲ್ಲೂಕಿನ ತೆನಿಕೊಳ್ಳ ಬಳಿ ಚಾಲಕನ ನಿಯಂತ್ರಣ ತಪ್ಪಿ, ಕಾರು ಮರಕ್ಕೆ ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ವಿಜಾಪುರದ ಸಯ್ಯದ್ ಖಾಲೀದ್ ರಫೀಕ್‌ಅಹ್ಮದ್ ಪೀರ್‌ಜಾದೆ (35), ಅವರ ಪತ್ನಿ ಬೀಬಿ ಕೌಸರ್(28), ಬೀಬಿ ಅಜ್ಮತ್‌ಜಹಾನ್ ಜಹಾಗೀರದಾರ (33), ಸೈಯದ್‌ಅಹ್ಮದ್ ಪೀರ್‌ಜಾದೆ (2) ಮೃತಪಟ್ಟಿದ್ದಾರೆ. ಸುಫಿಯಾನಾ (6) ಹಾಗೂ ಲುಬ್ನಾ (8) ಗಾಯ ಗೊಂಡಿದ್ದು ಚಿಕಿತ್ಸೆಗಾಗಿ ಬೆಳಗಾವಿ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಇವರು ವಿಜಾಪುರದಿಂದ ಬೆಳಗಾವಿಗೆ ಹೊರಟಿದ್ದಾಗ ಈ ದುರಂತ ಸಂಭವಿಸಿದೆ. ಸೈಯದ್ ಖಾಲೀದ್ ಅವರು ಕಾರು ಚಾಲನೆ ಮಾಡುತ್ತಿದ್ದರು.ಡಿವೈಎಸ್‌ಪಿ ಎಸ್.ಬಿ. ಪಾಟೀಲ, ಪಿಎಸ್‌ಐ ಆನಂದ ವನಕುದರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.