ರಸ್ತೆ ಅಪಘಾತ: 40 ಮಂದಿ ಸಾವು

7

ರಸ್ತೆ ಅಪಘಾತ: 40 ಮಂದಿ ಸಾವು

Published:
Updated:

ಟೆಹ್ರಾನ್ (ಐಎಎನ್‌ಎಸ್): ಉತ್ತರ ಇರಾನ್‌ನಲ್ಲಿ ಎರಡು ಬಸ್‌ಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಐಎಸ್ಎನ್ ಸುದ್ದಿಸಂಸ್ಥೆ ಮಂಗಳವಾರ ವರದಿ ಮಾಡಿದೆ.

 

ಟೆಹ್ರಾನ್-ಕೋಮ್ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಎರಡು ಪ್ರಯಾಣಿಕ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ ಹಾಗೂ ಬಳಿಕ ಬೆಂಕಿ ಹೊತ್ತಿಕೊಂಡಿದೆ ಎಂದು ಇರಾನ್ ರೆಡ್ ಕ್ರೆಸಂಟ್ ಸೊಸೈಟಿ ಮುಖ್ಯಸ್ಥ ಮಹ್ಮೌದ ಮೊಜಾಫ್ಪರ್  ತಿಳಿಸಿದ್ದಾರೆ.

`ಅಪಘಾತದಲ್ಲಿ ಸುಮಾರು 40 ಮಂದಿ ಸಾವನ್ನಪ್ಪಿದ್ದು, 36 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದೂ ಮೊಜಾಫ್ಪರ್ ತಿಳಿಸಿದ್ದಾರೆ.

ಇಲ್ಲಿನ ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಪ್ರತಿವರ್ಷ ಅಪಘಾತದಲ್ಲಿ ಸುಮಾರು 20 ಸಾವಿರ ಮಂದಿ ಸಾವನ್ನಪ್ಪುತ್ತಾರೆ. ಜೊತೆಗೆ 2 ಲಕ್ಷ  ಜನರು ಗಾಯಗೊಳ್ಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry