ರಸ್ತೆ ಅಭಿವೃದ್ಧಿಗೆ ರೂ79 ಕೋಟಿ ಬಿಡುಗಡೆ

7

ರಸ್ತೆ ಅಭಿವೃದ್ಧಿಗೆ ರೂ79 ಕೋಟಿ ಬಿಡುಗಡೆ

Published:
Updated:

ಅರಸೀಕೆರೆ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ರೂ. 79 ಕೋಟಿ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿವೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಸೋಮವಾರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕೇರಳಾಪುರ ರಸ್ತೆ, ಬಾಗೇಶಪುರದಿಂದ ಜೆಸಿಪುರ, ಡಿ.ಎಂ. ಕುರ್ಕೆ- ಮಾಡಾಳು ಮಾರ್ಗವಾಗಿ ಹುಳಿಯಾರು ರಸ್ತೆ ಡಾಂಬರೀಕರಣಕ್ಕೆ ರೂ. 23 ಕೋಟಿ, ಅರಸೀಕೆರೆ- ಮೈಸೂರು ರಸ್ತೆಯ ಚನ್ನರಾ ಯಪಟ್ಟಣ ಗಡಿಯಿಂದ ಅರಸೀಕೆರೆ ವರೆಗಿನ ರಸ್ತೆ ಡಾಂಬರೀಕರಣಕ್ಕೆ ರೂ.15 ಕೋಟಿ, 50- 54 ಓಆರ್‌ಎಫ್ ಯೋಜನೆಯಡಿ ಬೆಂಡೇಕೆರೆ- ಗರುಡ ನಗಿರಿ ರಸ್ತೆಯಿಂದ ಕುರುಬರಹಳ್ಳಿ-ಸುಂಕದಹಳ್ಳಿ ರಸ್ತೆ ಅಭಿವೃದ್ಧಿಗೆ ರೂ.1.50 ಕೋಟಿ, ನಿಟ್ಟೂರು- ಬಾಗೇಶಪುರ- ಗಂಡಸಿ ರಸ್ತೆಗೆ 2 ಕೋಟಿ, ಡಿ.ಎಂ. ಕುರ್ಕೆ- ಕಲ್ಲುಸಾದರ ಹಳ್ಳಿ ರಸ್ತೆಗೆ 1.50 ಕೋಟಿ, ಕಣಕಟ್ಟೆ- ಕ್ಯಾತನಹಳ್ಳಿ- ಕಾಮಸಮುದ್ರ ರಸ್ತೆಗೆ 2 ಕೋಟಿ ಅನುದಾಗ ಬಿಡುಗಡೆ ಆಗಿದೆ.ಅದೇ ರೀತಿ, ಯರಿಗೇನಹಳ್ಳಿ- ಶಶಿವಾಳ ರಸ್ತೆಗೆ 1.50 ಕೋಟಿ, ಚಿಕ್ಕನಾಯಕನಹಳ್ಳಿ ಗಡಿಯಿಂದ ಕಣಕಟ್ಟೆ ಸೇರುವ ರಸ್ತೆಗೆ 1 ಕೋಟಿ, ಬಿ.ಎಚ್. ರಸ್ತೆಯಿಂದ ಬಂಡೀಹಳ್ಳಿ ಮಾರ್ಗವಾಗಿ ಶಂಕರೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಗೆ 50 ಲಕ್ಷ, ಎ.ಸಿ ರಸ್ತೆಯಿಂದ ಸಿಂಗೇನಹಳ್ಳಿ- ಚನ್ನಾಪುರ ರಸ್ತೆಗೆ 1.50 ಕೋಟಿ, ಹುಲ್ಲೇನಹಳ್ಳಿಯಿಂದ ಹಬ್ಬಘಟ್ಟ ರಸ್ತೆಗೆ 90 ಲಕ್ಷ, ಬಾಳೇನಹಳ್ಳಿ- ಬೆಳಗುಂಬ ರಸ್ತೆಗೆ 50 ಲಕ್ಷ, ಜ್ಯೋತಿ ಮಲ್ಲಾಪುರದಿಂದತಳಲೂರು- ಕೊಪ್ಪಲು ರಸ್ತೆಗೆ ರೂ. 50 ಲಕ್ಷ, ಅರಸೀಕೆರೆ- ಹುಳಿಯಾರು ರಸ್ತೆಯಿಂದ ಬಿಳಿಕಲ್ ರಂಗನಾಥ ಸ್ವಾಮಿ ದೇವಾಲಯದ ರಸ್ತೆ 50 ಲಕ್ಷ, ಬಾಣಾವರ ಗ್ರಾಮ ಪಂಚಾಯಿತಿ ಪರಿಮಿತಿಯ ಕಾಂಕ್ರಿಟ್ ರಸ್ತೆಗೆ 2 ಕೋಟಿ, ತಿಪ್ಪಾಘಟ್ಟ- ಗೊಲ್ಲರಹಟ್ಟಿ ರಸ್ತೆಗೆ 15 ಲಕ್ಷ, ಶಾನೇಗೆರೆ- ಕೋಡಿಹಳ್ಳಿ ರಸ್ತೆ 15 ಲಕ್ಷ, ಬೆಂಡೇ ಕೆರೆ- ಕುರುವಂಕ- ತಾಂಡ್ಯ ರಸ್ತೆಗೆ 20 ಲಕ್ಷ, ಕಾಡಯ್ಯನ ಕೊಪ್ಪಲ ರಸ್ತೆಗೆ 15ಲಕ್ಷ, ಯಡವನಹಳ್ಳಿ- ಸಂಕಲಾಪುರ ರಸ್ತೆಗೆ 15 ಲಕ್ಷ, ಬಸವನಹಳ್ಳಿ- ಸರ್ವೆಕೊಪ್ಪಲು ರಸ್ತೆಗೆ 10 ಲಕ್ಷ, ವೆಂಕಟಾಪುರ- ಕುರುಬರಹಳ್ಳಿ-ಸುಂಕದಹಳ್ಳಿರಸ್ತೆಗೆ 1.50 ಕೋಟಿ, ದುಮ್ಮೇನಹಳ್ಳಿ- ದಾಸೀಹಳ್ಳಿ- ಕೊನೆಹಳ್ಳಿ ರಸ್ತೆಗೆ 1.50 ಕೋಟಿ, ಹಿರಿಯಾಳು ರಸ್ತೆಗೆ 50 ಲಕ್ಷ, ನಾಗರಹಳ್ಳಿ- ಕುಡುಕುಂದಿ ರಸ್ತೆಗೆ 1.50 ಕೋಟಿ, ಗುತ್ತಿನಕೆರೆ- ಹೆಬ್ಬಾರನಹಳ್ಳಿ ರಸ್ತೆಗೆ 90 ಲಕ್ಷ, ಬಾಳೇನಹಳ್ಳಿ- ಬೆಳಗುಂಬ ರಸ್ತೆಗೆ 50 ಲಕ್ಷ, ಹೆಗ್ಗಟ್ಟ ರಸ್ತೆಗೆ 1 ಕೋಟಿ, ಜ್ಯೋತಿಮಲ್ಲಾಪುರ- ಟಿ. ಕೋಡಿ ಹಳ್ಳಿ ರಸ್ತೆಗೆ 50 ಲಕ್ಷ, ಚಿಕ್ಕಯರಗನಾಳು- ದೊಡ್ಡಯರಗನಾಳು ರಸ್ತೆಗೆ 2 ಕೋಟಿ, ಮಾರಶೆಟ್ಟಿ ಹಳ್ಳಿ-ಮಂಗಳಾಪುರ ರಸ್ತೆಗೆ 1.50 ಕೋಟಿ, ಪಡುವನಹಳ್ಳಿ- ಕಸುವನಹಳ್ಳಿ ರಸ್ತೆಗೆ 50 ಲಕ್ಷ, ಬೋರನಕೊಪ್ಪಲು- ಹಾರನಹಳ್ಳಿ, ವಿಠಲಾಪುರ ರಸ್ತೆಗೆ 75 ಲಕ್ಷ, ಜೇನುಕಲ್ ಸಿದ್ದಾಪುರದಿಂದ ನೀರಗುಂದ ರಸ್ತೆಗೆ 75 ಲಕ್ಷ, ಅರಸೀಕೆರೆ- ಬೈರನಾಯ ಕನಹಳ್ಳಿ- ಗರುಡನಗಿರಿ ರಸ್ತೆಗೆ 50 ಲಕ್ಷ, ನರಸೀಪುರ- ಜನ್ನಾವರ ರಸ್ತೆಗೆ 25 ಲಕ್ಷ, ಮೇಳೇನಹಳ್ಳಿ- ಗೊಲ್ಲರಹಟ್ಟಿ ರಸ್ತೆಗೆ 20 ಲಕ್ಷ, ಚಿಕ್ಕಹಲ್ಕೂರು- ಗೊಲ್ಲರಹಟ್ಟಿ ರಸ್ತೆಗೆ 15 ಲಕ್ಷ ಬಿಡುಗಡೆ ಆಗಿದೆ ಎಂದರು. ನಬಾರ್ಡ್ ಯೋಜನೆಯಡಿ ಕೊಟ್ಟೂರು ಬಸವೇಶ್ವರ ಬೆಟ್ಟದ ರಸ್ತೆಗೆ 25 ಲಕ್ಷ, ಚಿಕ್ಕ ಬಾಣಾವರ ರಸ್ತೆ 15 ಲಕ್ಷ, ಪ್ರಥಮ ದರ್ಜೆ ಕಾಲೇಜು ರಸ್ತೆಗೆ 25 ಲಕ್ಷ, ಬಸವೇಶ್ವರ ನಗರ ರಸ್ತೆಗೆ 20 ಲಕ್ಷ,ಕೆಂಗುರಬರಹಟ್ಟಿ- ಹಂಗುರಬರಹಟ್ಟಿ ರಸ್ತೆ 20 ಲಕ್ಷ, ಗುಡ್ಡೇನಹಳ್ಳಿ ರಸ್ತೆ 20 ಲಕ್ಷ ಚಿಕ್ಕಯರಗನಾಳು ರಸ್ತೆಯಿಂದ ಚನ್ನರಾಯಪಟ್ಟಣ ರಸ್ತೆ ವರೆಗೆ 30 ಲಕ್ಷ, ಬಿ.ಎಚ್. ರಸ್ತೆಯಿಂದ ಮೈಲನಹಳ್ಳಿ ಕೊಪ್ಪಲು ರಸ್ತೆಗೆ 30ಲಕ್ಷ ಅನುದಾನ ಸರ್ಕಾರ ನೀಡಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿಳಿಚೌಡಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಹನುಮೇಗೌಡ, ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry