ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

7

ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

Published:
Updated:

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಮೊದಲ ಹಂತದಲ್ಲಿ ಕೈಗೊಳ್ಳ ಲಾಗಿರುವ 4.80 ಕೋಟಿ ರೂಪಾ ಯಿಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಗಳನ್ನು ಶಾಸಕ ಟಿ.ವೆಂಕಟರಮಣಯ್ಯ ಬುಧವಾರ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಪರ್ತಕರ್ತ ರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಸಕ್ಕರೆಗೊಲ್ಲಹಳ್ಳಿ ವ್ಯಾಪ್ತಿಯ ಟೆರ್ರಾ ಫರ್ಮದಲ್ಲಿ ಈಗಾಗಲೇ ಕಸ ತಂದು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ  ಟೆರ್ರಾಫರ್ಮದ ುತ್ತಲಿನ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಮೊದಲ ಹಂತದಲ್ಲಿ 4.80 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆಗಳಿಗೆ ಡಾಂಬರು ಹಾಕುವ ಮೂಲಕ ಅಭಿವೃದ್ಧಿ ಗೊಳಿಸಲಾಗುತ್ತಿದೆ ಎಂದರು.ಎರಡನೇ ಹಂತದಲ್ಲಿ ಸಕ್ಕರೆಗೊಲ್ಲ ಹಳ್ಳಿ, ಖಾಲಿಪಾಳ್ಯ, ಕಾಮನ ಅಗ್ರಹಾರ ಗ್ರಾಮಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಆರಂಭಿಸಲಾ ಗುವುದು. ಕಾಮನ ಅಗ್ರಹಾರ ಗ್ರಾಮದಲ್ಲಿ ಆರೋಗ್ಯ ಕೇಂದ್ರ ಹಾಗೂ ಚಿಕ್ಕಮಂಕಲಾಳ ಗ್ರಾಮದಲ್ಲಿ ಪಶು ಚಿಕಿತ್ಸಾ ಆಸ್ಪತ್ರೆ ಪ್ರಾರಂಭವಾಗಲಿವೆ. ಸಕ್ಕರೆಗೊಲ್ಲಹಳ್ಳಿಯಲ್ಲಿ ಸರ್ಕಾರಿ ಪ್ರೌಢ ಶಾಲೆಗೆ ಹೋಗುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.ಬಿಬಿಎಂಪಿ ಎಂಜಿನಿಯರ್‌ ಭೀಮೇಶ್‌, ರಾಘವೇಂದ್ರ, ಕಾಂಗ್ರೆಸ್‌ ಮುಖಂಡ ಎಂ.ಗೋವಿಂದರಾಜ್‌, ಜಿಲ್ಲಾ ಹಿಂದುಳಿದ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಸ್‌.ರಾಜ್‌ಕುಮಾರ್‌, ಯುವ ಕಾಂಗ್ರೆಸ್‌ ಸಮಿತಿ ತಾಲ್ಲೂಕು ಉಪಾ ಧ್ಯಕ್ಷ ವೆಂಕಟರಾಮ್‌, ಬೆಳವಂಗಲ ಮಹೇಶ್‌, ಗ್ರಾ.ಪಂ.ಮಾಜಿ ಅಧ್ಯಕ್ಷ ವೀರಕ್ಯಾತಪ್ಪ ಮತ್ತಿತರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry