ಗುರುವಾರ , ಮೇ 19, 2022
25 °C

ರಸ್ತೆ ಉಬ್ಬು ಬೇಕು

ಬಿ.ಕೆ. ಗೋವಿಂದರಾಜು Updated:

ಅಕ್ಷರ ಗಾತ್ರ : | |

ಈ ಹಿಂದೆ `ಕುಂದುಕೊರತೆ~ ವಿಭಾಗದಲ್ಲಿ `ರಸ್ತೆ ಅಗೆತ, ವಸಂತನಗರದ ಗೋಳು~ ಎಂಬ ಶೀರ್ಷಿಕೆಯಡಿ ಇಲ್ಲಿನ ಸಮಸ್ಯೆ ಹೇಳಿಕೊಂಡಿದ್ದೆವು.ಈ ಮನವಿಗೆ ಮೇಯರ್ ಅವರು ಕೂಡಲೇ ಸ್ಪಂದಿಸಿ, ಜಸ್ಮಾ ಭವನ್ ರಸ್ತೆ ಹಾಗೂ ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆಗಳ ಡಾಂಬರೀಕರಣ ಕಾರ್ಯವನ್ನು ತ್ವರಿತವಾಗಿ ಕೈಗೊಂಡಿದ್ದಾರೆ. ಅವರಿಗೆ ನಮ್ಮ ಧನ್ಯವಾದಗಳು.ಮಿಲ್ಲರ್ಸ್‌ ಟ್ಯಾಂಕ್ ಬಂಡ್ ರಸ್ತೆಯು ಇಳಿಜಾರಿನಿಂದ ಕೂಡಿದ್ದು, ದಕ್ಷಿಣ ದಿಕ್ಕಿನಿಂದ ಉತ್ತರದತ್ತ ವಾಹನಗಳು ಅತಿ ವೇಗವಾಗಿ ಚಲಿಸುತ್ತಿರುತ್ತವೆ. ಇದರಿಂದ ಅಪಘಾತದ ಸಂಭವ ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟಲು ಈ ರಸ್ತೆಯಲ್ಲಿ ಕನಿಷ್ಠ ಎರಡು ಕಡೆ ರಸ್ತೆ ಉಬ್ಬನ್ನು ನಿರ್ಮಿಸುವುದು ಅಗತ್ಯವಾಗಿದೆ.

 ಈ ಬಗ್ಗೆ ಸಂಬಂಧಿಸಿದವರು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೋರಿಕೊಳ್ಳುತ್ತೇನೆ.ಹಾಗೆಯೇ ಈ ರಸ್ತೆಯ ಚಾಮುಂಡೇಶ್ವರಿ ಸ್ಟುಡಿಯೋದ ಮುಂದೆ ಸಾಕಷ್ಟು ಕಾರುಗಳು ನಿಲುಗಡೆ (ಪಾರ್ಕಿಂಗ್) ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಪಾದಚಾರಿಗಳ ಓಡಾಡುವಿಕೆಗೆ ತೀರಾ ತೊಂದರೆಯಾಗಿರುತ್ತದೆ. ಆದ್ದರಿಂದ ಈ ರಸ್ತೆಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಬೇಕು.ಜತೆಗೆ ರಸ್ತೆಯ ಇಕ್ಕೆಲಗಳಲ್ಲಿ ಇರುವ ಪಾದಚಾರಿ ಮಾರ್ಗವು (ಫುಟ್‌ಪಾತ್) ಓಡಾಡಲು ಸಾಧ್ಯವಾಗದಷ್ಟು ಹದಗೆಟ್ಟಿದ್ದು, ಕೇವಲ ನಾಮಕಾವಸ್ಥೆ ಉಳಿದುಕೊಂಡಿದೆ. ಸಂಬಂಧಿಸಿದ ಇಲಾಖೆ ಈ ಫುಟ್‌ಪಾತ್ ದುರಸ್ತಿ ಕೈಗೊಂಡು, ಪಾದಚಾರಿಗಳು ಸುಗಮವಾಗಿ ಓಡಾಡಲು ಅನುವು ಮಾಡಿಕೊಡಲು ವಿನಂತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.