ಭಾನುವಾರ, ಮೇ 22, 2022
29 °C

ರಸ್ತೆ ಉಬ್ಬು ಸರಿಪಡಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಲ್ಲಿಗೆ ಸಮೀಪದ ಹೊಸಕುರುಬರಕುಂಟೆ ಬಳಿ ಬೆಂಗಳೂರು ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ  ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿವೆ ಎಂದು ಸಾರ್ವಜನಿಕರು ದೂರಿದ್ದಾರೆ.ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ರಸ್ತೆಯಲ್ಲಿ ಟೆಂಪೋ ಉರುಳಿ ಅನೇಕರು ಸಾವಿಗೀಡಾದ್ದರು. ಸ್ಥಳ ಪರಿಶೀಲನೆ ನಡೆಸಿದ ಇಲಾಖೆಯು ತುಂಬ ಎತ್ತರ ಇರುವ ಏಳೆಂಟು ಹಂಪ್‌ಗಳನ್ನು ಒಂದೇ ಜಾಗದಲ್ಲಿ ನಿರ್ಮಿಸಿದೆ.ಇಲಾಖೆ ನಿರ್ಮಿಸಿರುವ ಈ ಅವೈಜ್ಞಾನಿಕ ಹಂಪ್‌ಗಳ ಪರಿಣಾಮ ದ್ವಿಚಕ್ರ ವಾಹನ ಸವಾರರು ವೇಗವಾಗಿ ಬಂದು ಮುಗ್ಗರಿಸಿ ಬಿದ್ದು ಕಾಲು ಮುರಿದುಕೊಳ್ಳುತ್ತಿದ್ದಾರೆ.

 

ಲಾರಿಗಳಂತಹ ದೊಡ್ಡವಾಹನಗಳು ಹಂಪ್‌ಗಳು ಇರುವುದನ್ನು ಗಮನಿಸದೆ ಮತ್ತಷ್ಟು ವೇಗವಾಗಿ ಮುನ್ನುಗ್ಗುತ್ತಾರೆ ಹಾಗಾಗಿ ನಗರ ಪ್ರದೇಶದಲ್ಲಿರುವ ವೈಜ್ಞಾನಿಕ ರೀತಿಯ ಹಂಪ್‌ಗಳನ್ನು ಇಲ್ಲಿ ಕೂಡ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.