ಶನಿವಾರ, ಜೂನ್ 19, 2021
27 °C

ರಸ್ತೆ ಉಬ್ಬು ಸುರಕ್ಷತೆಗೋ! ಅಪಘಾತಕ್ಕೋ!

ಕೆ.ಎಂ. ಹೇಮಂತಕುಮಾರ್‌ ಬೆಂಗಳೂರು. Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಸದನದಲ್ಲಿ ವಿರೋಧ ­ಪಕ್ಷದ ಸದಸ್ಯರು ರಸ್ತೆಯ ಉಬ್ಬುಗಳಿಗೆ ರೇಡಿಯಂ ಪಟ್ಟೆ­ಗಳನ್ನು ಬಳಿಯಲು ಆಗ್ರ­ಹಿಸಿರುವುದು  ಸಮ­ಯೋಚಿತ. ಸಂಚಾರದಲ್ಲಿ ಸುರಕ್ಷತೆ ಕಾಪಾ­ಡುವ ಉದ್ದೇಶದಿಂದ ಉಬ್ಬು­ಗಳನ್ನು ನಿರ್ಮಿಸು­­ವುದೇನೋ ಸರಿ! ಆದರೆ ಯಾವುದೇ ನಿಯಮ ಪಾಲಿ­ಸದೆ, ಅವೈಜ್ಞಾ ನಿಕವಾಗಿ ಈ ಉಬ್ಬುಗಳನ್ನು ನಿರ್ಮಿಸುತ್ತಿರು ವಂತಿದೆ.ವಾಹನದಲ್ಲಿ ಸಂಚರಿಸುವಾಗದು­ತ್ತೆಂದು ಎದು­ರಾಗುವ ಈ ಉಬ್ಬುಗಳು ಯಮನ ದರ್ಶನ ಮಾಡಿಸುತ್ತಿವೆ.  ಅಪ­ಘಾತ­­ಗಳಿಗೆ ಕಾರಣವಾಗುತ್ತಿವೆ.ಸರ್ಕಾರಕ್ಕೆ ಸುರಕ್ಷಿತ  ಸಂಚಾರದ ಬಗ್ಗೆ ಕಾಳಜಿ­ಯಿದ್ದಲ್ಲಿ  ರಸ್ತೆಯ ಉಬ್ಬುಗಳಿಂದ ಸಂಭ­­ವಿ­ಸುತ್ತಿರುವ ಅಪ­ಘಾತ­­ಗಳ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಸಮೀಕ್ಷೆ ನಡೆಸಲಿ, ಬಿಳಿ ಪಟ್ಟೆಗಳು ಮಾಸಿ ಹೋಗಿ ರುವ ಉಬ್ಬುಗಳು, ಬಿಳಿ ಪಟ್ಟೆಗಳೇ ಇಲ್ಲದ ಉಬ್ಬು­ಗಳು ಮಧ್ಯವಯಸ್ಕರು, ವೃದ್ಧರಲ್ಲಿ ಬೆನ್ನುಹುರಿ ಮತ್ತು ಸೊಂಟದ ರಚನೆಗಳಲ್ಲಿ ಹಾನಿ ಮಾಡಿರುವ ನಿದರ್ಶನಗಳಿವೆ.ಎಲ್ಲಾ ರಸ್ತೆಗಳಿಗೆ ಬಿಳಿ ಹಾಗೂ  ರೇಡಿಯಂ ಪಟ್ಟೆ ಗಳನ್ನು ಬಳಿಯಲು ಕ್ರಮ ಕೈಗೊಳ್ಳಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.