ರಸ್ತೆ ಒತ್ತುವರಿ ಜಾಗ ತೆರವಿಗೆ ನೋಟಿಸ್

7

ರಸ್ತೆ ಒತ್ತುವರಿ ಜಾಗ ತೆರವಿಗೆ ನೋಟಿಸ್

Published:
Updated:

ಚಿಕ್ಕಮಗಳೂರು: ರಸ್ತೆ ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿದ್ದ ಮನೆ ಮತ್ತು ಶೆಡ್‌ಗಳನ್ನು ಶುಕ್ರವಾರ ದಿಢೀರ್ ತೆರವುಗೊಳಿಸದ ನಗರಸಭೆ, ಒತ್ತು ವರಿ ದಾರರಿಗೆ ನೋಟಿಸ್ ಜಾರಿ ಮಾಡಿದೆ.ನಗರದ ಶರೀಫ್ ಗಲ್ಲಿಗೆ ಹೊಂದಿಕೊಂಡಿರುವ ಹಮಾಮ್ ರಸ್ತೆಯಲ್ಲಿ 5 ಮನೆಗಳು ಅನಧಿಕೃತವಾಗಿ ತಲೆಎತ್ತಿದ್ದು, ನಗರಸಭೆ ಅಧಿಕಾರಿಗಳು ಮತ್ತು ವಾರ್ಡ್ ಸದಸ್ಯ ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿ, ತೆರವಿಗೆ ಕ್ರಮ ಕೈಗೊಂಡರು.ಶರೀಫ್ ಗಲ್ಲಿಯಿಂದ ಜ್ಯೋತಿ ಟಾಕೀಸ್ ಮುಂಭಾಗದವರೆಗೂ 20 ಅಡಿ ಅಡ್ಡ ರಸ್ತೆ ಇತ್ತು. ಕೆಲವರು ಅಕ್ರಮವಾಗಿ ಮನೆ ನಿರ್ಮಿಸಿ ಕೊಂ ಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಶೆಡ್ ಮತ್ತು ಮನೆ, ರಸ್ತೆ ಜಾಗದಲ್ಲಿ ಬೆಳೆಸಿದ್ದ ಮರ ತೆರವು ಮಾಡಲಾಯಿತು.ಅಕ್ರಮವಾಗಿ ಕಟ್ಟಿರುವ ಮನೆ ಮಾಲೀಕರು ಕೂಡಲೆ ಮನೆಯಲಿದ್ದ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಿ, ಜಾಗ ಬಿಟ್ಟು ಕೊಡಬೇಕು. ಒಂದು ವಾರದಲ್ಲಿ ಜಾಗ ಬಿಟ್ಟು ಕೊಡದಿದ್ದಲ್ಲಿ ಜೆಸಿಬಿ ಮೂಲಕ ನೆಲಸಮ ಮಾಡುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದರು.ರಸ್ತೆ ಒತ್ತುವರಿ ಸಂಬಂಧ ಯಾವುದೆ ಒತ್ತಡಕ್ಕೂ ಮಣಿಯದೆ ನಿರ್ದಾಕ್ಷಿಣ್ಯ ತೆರವುಗೊಳಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಚರಂಡಿ ಮೇಲೆ ಗೋಡೆ ಕಟ್ಟು ವುದು, ರಸ್ತೆ ಮಧ್ಯೆ ಶೆಡ್ ನಿರ್ಮಿಸಿದರೆ ನೋಟಿಸ್ ನೀಡದೆ ನೆಲಸಮ ಮಾಡುವುದಾಗಿ ಪೌರಾಯುಕ್ತ ಎಚ್.ಜಿ.ಪ್ರಭಾಕರ್ ಎಚ್ಚರಿಕೆ ನೀಡಿದರು.ವಾರ್ಡ್ ಸದಸ್ಯ ಅಕ್ಮಲ್, ನಗರಸಭೆ ಸಿಬ್ಬಂದಿ ಆದೀಶ್, ಸುನೀಲ್, ಏಸು ಮಂಜು ಇತರರು ಕಾರ್ಯಾಚರಣೆ ಸಂದರ್ಭ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry