ರಸ್ತೆ ಕಾಮಗಾರಿಗೆ ಆದ್ಯತೆ: ಜಿ.ಪಂ.ಸದಸ್ಯ

7

ರಸ್ತೆ ಕಾಮಗಾರಿಗೆ ಆದ್ಯತೆ: ಜಿ.ಪಂ.ಸದಸ್ಯ

Published:
Updated:

ಉಡುಪಿ: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಕಾಂಕ್ರೀಟ್ ರಸ್ತೆಯಂತಹ ಶಾಶ್ವತ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಉದ್ಯಾವರ ಜಿಲ್ಲಾ ಪಂಚಾಯಿತಿ ಸದಸ್ಯ ದಿವಾಕರ ಎ.ಕುಂದರ್ ಹೇಳಿದರು.ಅಲೆವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಂಗ್ರಪಾಡಿ ಗೋಪಾಡಿ ರಸ್ತೆ ಕಾಂಕ್ರೀಟಿಕರಣ ಕಾಮ ಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಅವರಿಗೆ ಅಭಿನಂದನಾ ಬ್ಯಾನರ್ ಅಳವಡಿಸುವುದು ಫ್ಯಾಶನ್ ಆಗಬಾರದು ಎಂದು ಅಲೆವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ್ ಕಿಣಿ ಹೇಳಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರವೀಣ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ್ ಪೂಜಾರಿ, ವನಜ ಶೆಟ್ಟಿ, ಗೋವಿಂದ ಸೇರಿಗಾರ್, ರಾಜಶ್ರೀ ಐತಪ್ಪ, ಆನಂದ, ಮೆರೂಸ್ ಹೇಮಲತಾ ಬಂಗೇರಾ, ವಿಶ್ವಪ್ರಸಾದ್ ಹೆಗ್ಡೆ, ಭಾಸ್ಕರ್ ಶೆಟ್ಟಿ, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry