ಬುಧವಾರ, ಮೇ 25, 2022
31 °C

ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಪುರಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಗ್ಗಾವಿ: ಅವ್ಯವಸ್ಥೆ ಆಗರವಾದ ಪೇಟೆ ಮುಖ್ಯ ರಸ್ತೆ ಎಂಬ ಶೀರ್ಷಿಕೆಯಲ್ಲಿ ಜೂ.18ರಂದು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟನೆವಾ ಗಿರುವ ಹಿನ್ನೆಲೆಯಲ್ಲಿ ಪುರಸಭೆ ಆಡಳಿತ ವರ್ಗ ಹಾಗೂ ಅಧಿಕಾರಿಗಳು ಎಚ್ಚತ್ತು ಗೊಂಡು  ರಸ್ತೆ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಿರುವದು ಸಾರ್ವಜನಿಕ ವಲಯದಲ್ಲಿ ಸಂತಸ ಮೂಡಿಸಿದೆ.ತಾಲ್ಲೂಕಿನ ಬಂಕಾಪುರ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಪೇಟೆಯ ಮುಖ್ಯ ರಸ್ತೆ ಕಾಮಗಾರಿ ಅವ್ಯವಸ್ಥೆ ಆಗರದಿಂದ ಹದಗೆಟ್ಟು ಇಲ್ಲಿನ       ರಸ್ತೆ ಮೇಲೆ ಅನೇಕ ಅಪಘಾತಗಳು ಸಂಭವಿ ಸುತ್ತಿವೆ. ಪುರಸಭೆಗೆ ಸರ್ಕಾರ ಈ ರಸ್ತೆ ಕಾಮಗಾರಿ ಸುಮಾರು ಒಂದು ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡಿದೆ.

ಹೀಗಾಗಿ ಹಾವೇರಿ ನಿರ್ಮಿತ ಕೇಂದ್ರದವರು ಪಟ್ಟಣದ ರೇಣುಕಾ ಚಿತ್ರಮಂದಿರದಿಂದ ಹಾವೇರಿ ಮುಖ್ಯ ರಸ್ತೆಯವರೆಗೆ ನಿರ್ಮಿಸಿರುವ ಕಾಂಕ್ರೆಟ್ ರಸ್ತೆ ಸಂಪೂರ್ಣ ಅವೈಜ್ಞಾನಿಕ ಕಾಮ ಗಾರಿ ಹಮ್ಮಿಕೊಂಡಿರುವ ಕಾರಣ ನಿತ್ಯ ನೂರಾರು ಜನರು ತೊಂದರೆ ಅನುಭವಿ ಸುವಂತಾಗಿದೆ.ರಸ್ತೆಯನ್ನು 2 ಅಡಿ ಕೆಳಗಿಳಿಸಿ ಕಾಮಗಾರಿ ಹಮ್ಮಿಕೊಳ್ಳ ಬೇಕೆಂದು ಇಲ್ಲಿನ ನೂರಾರು ನಾಗರಿಕರು ಆಡಳಿತ ಮಂಡಳಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಂಗಳ ವಾರ ಮನವಿ ಅರ್ಪಿಸಿ ವಿನಂತಿಸಿದ್ದರು

 ಮನವಿಗೆ ಸ್ಪಂದಿಸಿ ರಸ್ತೆ ಕಾಮಗಾರಿ ಕೈಗೊಂಡಿರುವದಕ್ಕೆ  ಸಮಾಜ ಸೇವಕ ಶಿವು ಅಂಗಡಿ  ಹಾಗೂ ಇಲ್ಲಿನ ನೂರಾರು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.