ಗುರುವಾರ , ಮೇ 13, 2021
24 °C

ರಸ್ತೆ ಕಾಮಗಾರಿ ಕಳಪೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೋವಿನಕೆರೆ: ರಸ್ತೆ ಕಾಮಗಾರಿಗೆ ಅನುಮೋದನೆ ಆಗಿರುವಷ್ಟು ದಪ್ಪದಲ್ಲಿ ಜಲ್ಲಿ ಹಾಕದೆ ಡಾಂಬರು ಹಾಕುತ್ತಿರುವುದನ್ನು ವಿರೋಧಿಸಿದ ಗ್ರಾಮಸ್ಥರ ಜತೆ ಗ್ರಾಮ ಪಂಚಾಯಿತಿ ಸದಸ್ಯ ಸಹ ಪ್ರತಿಭಟಿಸಿದ ಘಟನೆ ಮಂಗಳವಾರ ಶಂಭೋನಹಳ್ಳಿಯಲ್ಲಿ ನಡೆದಿದೆ.ತೋವಿನಕೆರೆ ಸಮೀಪದ ಕುರಂಕೋಟೆ ಗ್ರಾ.ಪಂ. ವ್ಯಾಪ್ತಿಯ ಶಂಭೋನಹಳ್ಳಿಯಿಂದ ಗೇಟ್‌ನವರೆಗೆ ಜಲ್ಲಿ ಹಾಕಿ ಡಾಂಬರು ಹಾಕಲು ಗುತ್ತಿಗೆದಾರರೊಬ್ಬರಿಗೆ ವಹಿಸಲಾಗಿತ್ತು. ಅವರು ಜಲ್ಲಿ ಸೂಚಿಸಿದ ಪ್ರಮಾಣದಲ್ಲಿ ಹಾಕದೆ ಮಣ್ಣನ್ನು ಹೆಚ್ಚಾಗಿ ಉಪಯೋಗಿಸಿ ರಸ್ತೆ ನಿರ್ಮಿಸಿದ್ದರು.ಕೆಲವು ತಿಂಗಳು ಕಳೆದ ನಂತರ ಹಾಕಿದ್ದ ಜಲ್ಲಿ ವಾಹನ ಓಡಾಟದಿಂದ ಎದ್ದು ಹೋಗಿದೆ. ಈಗ ದಿಢೀರಾಗಿ ಡಾಂಬರು ಹಾಕುವ ಕೆಲಸಗಾರರನ್ನು ಕರೆದುಕೊಂಡು ಬಂದು ಮಣ್ಣಿನಿಂದ ಕೂಡಿರುವ ರಸ್ತೆಗೆ ಡಾಂಬರು ಹಾಕುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಪ್ಪ ತಿಳಿಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್‌ಗೆ ವಿಷಯ ತಿಳಿಸಿದರೆ ಅವರು ಜನರ ಮಾತಿಗೆ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರು ಕೈಗೆ ಸಿಗುವುದಿಲ್ಲ. ಕೆಲಸಗಾರರು ಮಾತ್ರ ಸಿಗುತ್ತಾರೆ. ಈ ಕಳಪೆ ಕಾಮಗಾರಿ ಬೇಡವೆಂದರೂ ನಿಲ್ಲಿಸದೆ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.