ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

7

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

Published:
Updated:

ನೆಲಮಂಗಲ: ಅರಿಶಿನಕುಂಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಪಂಚಾಯತಿಯನ್ನಾಗಿ ಮಾಡಲಾಗುವುದು ಎಂದು ಜಿ.ಪಂ. ಸದಸ್ಯ ಬಿ.ಎಂ.ಎಲ್.ಕೃಷ್ಣಪ್ಪ ತಿಳಿಸಿದರು. ಅರಿಶಿನಕುಂಟೆಯ ಆದರ್ಶ ನಗರದ ಗೆಜ್ಜಗದಹಳ್ಳಿ ರಸ್ತೆಗೆ ರೂ. 8 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.ಜಿ.ಪಂ. ಸದಸ್ಯ ಎಂ.ಎನ್.ರಾಮ್, ಗ್ರಾ.ಪಂ. ಅಧ್ಯಕ್ಷೆ ಶುಭ ಕಾಂತರಾಜು, ಮಾಜಿ ಅಧ್ಯಕ್ಷ ಟಿ.ತಿಮ್ಮರಾಯಪ್ಪ, ತಾ.ಪಂ. ಸದಸ್ಯ ಸುರೇಂದ್ರ, ನೀಲಕಂಠ, ಕನ್ನಡ ಸೇನೆ ಅಧ್ಯಕ್ಷ ಎನ್.ಗಣೇಶ್, ಮುಖಂಡರಾದ ಮುನಿರಾಮಯ್ಯ, ಸಿದ್ದಲಿಂಗೇಗೌಡ, ಅಶೋಕ್, ನಾರಾಯಣ್ ಮುಂತಾದವರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry