ಶನಿವಾರ, ಜನವರಿ 18, 2020
19 °C

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹದೇವಪುರ: ಸುಮಾರು ಹತ್ತು ವರ್ಷಗಳಿಂದಲೂ ಡಾಂಬರೀಕರಣಗೊಳ್ಳದೆ ಹದಗೆಟ್ಟಿದ್ದ ಮಹದೇವಪುರ ಸಮೀಪದ ಹೂಡಿ ವಾರ್ಡ್ ವ್ಯಾಪ್ತಿಯ ಬೆಳತ್ತೂರು ಕಾಲೋನಿಯ ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಪಾಲಿಕೆ ಸದಸ್ಯ  ಬಿ.ಎ. ಬಸವರಾಜು ಚಾಲನೆ ನೀಡಿದರು.ಆನಂತರ ಮಾತನಾಡಿದ ಅವರು, `ಈಗಾಗಲೇ ಬೆಳತ್ತೂರು ಗ್ರಾಮದಲ್ಲಿ ಕೆಲ ಅಡ್ಡ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಸದ್ಯ ಪಾಲಿಕೆಯ ನನ್ನ ಸದಸ್ಯತ್ವದ ಅನುದಾನದಲ್ಲಿ ರಸ್ತೆಗಳನ್ನು ಡಾಂಬರೀಕರಣಗೊಳಿಸುವ ಕೆಲಸ ಆರಂಭಗೊಂಡಿದೆ~ ಎಂದರು.`ಗ್ರಾಮದ ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಗ್ರಾಮದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸಿರುವ ಹಿನ್ನೆಲೆಯಲ್ಲಿ ನೀರಿನ ಅಭಾವ ದೂರವಾಗಿದೆ~ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಅನೇಕ ಮುಖಂಡರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)