ರಸ್ತೆ ತಡೆ: ಸ್ಪೀಕರ್ ವಾಹನಕ್ಕೆ ಅಡ್ಡಿ

7

ರಸ್ತೆ ತಡೆ: ಸ್ಪೀಕರ್ ವಾಹನಕ್ಕೆ ಅಡ್ಡಿ

Published:
Updated:
ರಸ್ತೆ ತಡೆ: ಸ್ಪೀಕರ್ ವಾಹನಕ್ಕೆ ಅಡ್ಡಿ

ಶ್ರೀರಂಗಪಟ್ಟಣ: ಮಂಡ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಸರ್ಕಾರ ಈ ಹಿಂದೆ ಘೋಷಿಸಿರುವಂತೆ ಕೂಡಲೇ ರೂ.5 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಅಗ್ರಹಿಸಿ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

 

ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ರಾಜ್ಯ ವಿಧಾನಸಭೆ ಸ್ಪೀಕರ್ ಬೋಪಯ್ಯ ಅವರು ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದರು. ಪ್ರತಿಭಟನಾಕಾರರು ವಾಹನಗಳ ಸಂಚಾರಕ್ಕೆ ತಡೆಯೊಡ್ಡಿದ ಹಿನ್ನೆಲೆಯಲ್ಲಿ ಸ್ಪೀಕರ್ ಅವರ ವಾಹನ ಕೂಡ ರಸ್ತೆಯಲ್ಲಿ ನಿಲ್ಲಬೇಕಾಯಿತು. ಸ್ಪೀಕರ್ ಅವರ ಬೆಂಗಾವಲು ಪಡೆ ವಾಹನ ಮುಂದೆ ಬಿಡುವಂತೆ ಮಾಡಿಕೊಂಡ ಮನವಿಗೂ ಪ್ರತಿಭಟನಾಕಾರರು ಒಪ್ಪದ ಕಾರಣ ಇತರ ವಾಹನಗಳ ಸಾಲಿನಲ್ಲಿ ಸ್ಪೀಕರ್ ಅವರ ವಾಹನ ಕೂಡ ನಿಲ್ಲುವಂತಾಯಿತು.

 

ಈ ಹಿಂದೆ ಮಂಡ್ಯಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಮಂಡ್ಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ರೂ.5 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. 5 ತಿಂಗಳಾದರೂ ಹಣ ನೀಡದೆ ವಿಳಂಬ ಧೋರಣೆ ಅನುಸರಿಸಿದ್ದಾರೆ ಎಂದು ದಸಂಸ ಮುಖಂಡ ಕುಬೇರಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ನಂದೀಶ್‌ಕುಮಾರ್ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry