ಬುಧವಾರ, ಜೂನ್ 16, 2021
22 °C

ರಸ್ತೆ ತೆರವು ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಪಟ್ಟಣದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಪಾದಚಾರಿ ರಸ್ತೆ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ನಿರ್ಮಾಣವನ್ನು ಪುರಸಭೆ ವತಿಯಿಂದ ಮಂಗಳವಾರ ಧ್ವಂಸ ಮಾಡಲಾಯಿತು.ಮೊದಲು ಅಂಗಡಿ ಎದುರು ನಿರ್ಮಿಸಲಾಗಿದ್ದ ಚಪ್ಪರ ಕಿತ್ತು ಹಾಕಲಾಯಿತು. ನಂತರ ಜೆಸಿಬಿ ಯಂತ್ರದಿಂದ ಪಾದಚಾರಿ ರಸ್ತೆ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ ಮೆಟ್ಟಿಲು, ಚಪ್ಪಡಿ ಹಾಸು, ಸಿಮೆಂಟ್ ಹಾಸು ಹಾಗೂ ನೀರಿಗಾಗಿ ನಿರ್ಮಿಸಲಾಗಿದ್ದ ತೊಟ್ಟಿ ಕಿತ್ತುಹಾಕಲಾಯಿತು.ಕಾರ್ಯಾಚಾರಣೆಯಲ್ಲಿ ಪುರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಭಾಗವಹಿಸಿದ್ದವು. ಕಾರ್ಯಾಚರಣೆ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಮುಖ್ಯಾಧಿಕಾರಿ ಕೆ.ಜಗದೀಶ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಾದ ಸಿ.ಎಂ.ನಾಗರಾಜ್, ಜೆ.ಜಗದೀಶ್, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಲಿಂಗಯ್ಯ, ಸಬ್    ಇನ್ಸ್‌ಪೆಕ್ಟರ್ ಡಿ.ಆರ್.ಪ್ರಕಾಶ್ ಉಪಸ್ಥಿತರಿದ್ದರು.ಅಂಗಡಿ ಮುಂದೆ ತಾತ್ಕಾಲಿಕ ನಿರ್ಮಾಣ ನಿರ್ಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದುದರಿಂದ ಪಾದಚಾರಿ ಹಾಗೂ ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ನಾಗರಿಕರಿಗೆ ಆಗುತ್ತಿದ್ದ ತೊಂದರೆ ಗಮನಿಸಿದ ಪುರಸಭೆ ಕೆಲವು ದಿನಗಳ ಹಿಂದೆ ತಾತ್ಕಾಲಿಕ ನಿರ್ಮಾಣ ತೆಗೆಯುವಂತೆ ಸೂಚಿಸಿತ್ತು. ಆದರೆ ಅದಕ್ಕೆ ತೃಪ್ತಿಕರ ಪ್ರತಿಕ್ರಿಯೆ ಕಂಡು ಬರದ ಪರಿಣಾಮ ಫುಟ್‌ಪಾತ್ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಯಿತು ಎಂದು ಪುರಸಭೆ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.