ರಸ್ತೆ ದಾಟುತ್ತಿದ್ದ ವೃದ್ಧನಿಗೆ ಪೊಲೀಸ್ ಜೀಪ್ ಡಿಕ್ಕಿ: ಸಾವು

7

ರಸ್ತೆ ದಾಟುತ್ತಿದ್ದ ವೃದ್ಧನಿಗೆ ಪೊಲೀಸ್ ಜೀಪ್ ಡಿಕ್ಕಿ: ಸಾವು

Published:
Updated:

ನಂಜನಗೂಡು: ರಸ್ತೆ ದಾಟುತ್ತಿದ್ದ ವೃದ್ಧನಿಗೆ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ನಂಜನಗೂಡು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಾಂಡವಪುರ ಬಳಿ ಸೋಮವಾರ ಸಂಜೆ ಸಂಭವಿಸಿದೆ.

ಘಟನೆಯಿಂದ ಉದ್ರಿಕ್ತರಾದ ಜನರು ರಸ್ತೆ ತಡೆ ನಡೆಸಿದ ಹಿನ್ನೆಲೆ ಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ  2 ಕಿ.ಮೀ. ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹೊಸಹಳ್ಳಿ ಗ್ರಾಮದ ವೀರಪ್ಪಗೌಡ (60) ಮೃತಪಟ್ಟವರು. ಚಿಕಿತ್ಸೆ ಸಂಬಂಧ ಮೈಸೂರಿಗೆ ಆಗಮಿಸಿದ್ದ ಇವರು ಅಳಿಯ ಸತೀಶ್ ಜತೆ ನಂಜನಗೂಡಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗ ಮಧ್ಯೆ ಸಂಜೆ 7 ಗಂಟೆಯಲ್ಲಿ ಬಸ್ ನಿಲ್ಲಿಸಲು ಕೋರಿ ಪ್ರಕೃತಿ ಕರೆಗೆ ಹೋಗಿದ್ದರು. ಮತ್ತೆ ಬಸ್‌ನತ್ತ ಬರುವಾಗ ಮೈಸೂರು ಕಡೆಯಿಂದ ಚಾಮರಾಜ ನಗರ ಕಡೆ ಹೊರಟಿದ್ದ ಪೊಲೀಸ್ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಅಳಿಯ ತಿಳಿಸಿದ್ದಾರೆ.

ಡಿಕ್ಕಿ ಹೊಡೆದ ಜೀಪ್ ನಿಲ್ಲಿಸದೇ ಹೋರಟು ಹೋಯಿತು. ರಸ್ತೆಯಲ್ಲಿ ಶವ ಬಿದ್ದಿತ್ತು. ವಿಷಯ ತಿಳಿದ ಮೃತನ ಸಂಬಂಧಿಕರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಉನ್ನತ ಅಧಿಕಾರಿಗಳು ಮೃತರ ಸಂಬಂಧಿಕರ ಮನವೊಲಿಸಿ ಮಾತುಕತೆಗೆ ನಂಜನಗೂಡು ಡಿವೈಎಸ್‌ಪಿ ಕಚೇರಿಗೆ ಕರೆದೊಯ್ದರು. ನಂತರ ರಾತ್ರಿ 8.30ರ ಸುಮಾರಿಗೆ ಸಂಚಾರ ಸುಗಮಗೊಂಡಿತು. ಪೊಲೀಸ್ ಜೀಪ್‌ನ್ನು ವಶಕ್ಕೆ ಪಡೆದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry