ರಸ್ತೆ ದುರಸ್ತಿಗೆ ಆಗ್ರಹ

7

ರಸ್ತೆ ದುರಸ್ತಿಗೆ ಆಗ್ರಹ

Published:
Updated:

ಸಂತೇಮರಹಳ್ಳಿ: ಸಮೀಪದ ಮಂಗಲ ಗ್ರಾಮದಿಂದ ಸಪ್ಪಯ್ಯನಪುರಕ್ಕೆ ಹೋಗುವ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಮಂಗಲ-ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ಸುಮಾರು 3ಕಿ.ಮೀ. ಉದ್ದವಿದೆ. ಇದರಲ್ಲಿ ಒಂದೂವರೆ ಕಿ.ಮೀ.ವರೆಗೆ ಮಾತ್ರ ಡಾಂಬರು ಹಾಕಲಾಗಿದೆ. ಉಳಿದ ರಸ್ತೆಗೆ ಡಾಂಬರು ಹಾಕಿಲ್ಲ. ಇದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.ವಾಹನಗಳ ಓಡಾಟದಿಂದ ಜಲ್ಲಿಕಲ್ಲು ಮೇಲೆದ್ದಿವೆ. ರೈತರು ತಮ್ಮ ಜಮೀನುಗಳಿಗೆ ಈ ರಸ್ತೆಯಲ್ಲಿ ಸಂಚರಿಸಬೇಕಿದೆ. ಎತ್ತಿನಗಾಡಿ ಹಾಗೂ ಸರಕು ಸಾಗಣೆ ಆಟೋಗಳು ಹೆಚ್ಚಾಗಿ ಓಡಾಡುತ್ತವೆ. ಮಳೆಗಾಲದ ವೇಳೆ ಗುಂಡಿಗಳಲ್ಲಿ ನೀರು ತುಂಬಿ ಕೊಳ್ಳುತ್ತದೆ. ಆಗ ಸಂಚರಿಸುವುದು ಕಷ್ಟ. ಕೂಡಲೇ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮಕೈ ಗೊಂಡು ರಸ್ತೆ ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry