ಬುಧವಾರ, ಮೇ 12, 2021
25 °C

ರಸ್ತೆ ದುರಸ್ತಿಗೆ 15 ದಿನ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ತೀವ್ರ ಹದಗೆಟ್ಟಿರುವ ಕಾರವಾರ- ಶಿರವಾಡ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ನಗರದ ಅಟೋ ರಿಕ್ಷಾ ಚಾಲಕರ ಸಂಘ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿತು.ಕಾರವಾರ-ಶಿರವಾಡ ರಸ್ತೆ ಗುಂಡಿಗಳಿಂದ ತುಂಬಿದ್ದು ವಾಹನ ಸಂಚಾರ ದುಸ್ತರವಾಗಿದೆ. ಕೊಂಕಣ ರೈಲು ನಿಲ್ದಾಣ ಮತ್ತು ಶಿರವಾಡ ಕೈಗಾರಿಕಾ ಪ್ರದೇಶಕ್ಕೆ ಇದೇ ಮಾರ್ಗದಲ್ಲಿ ಹೋಗ ಬೇಕಾಗಿರುವುದರಿಂದ ಸಹಜವಾಗೇ ಈ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟನೆ ಇರುತ್ತದೆ.ಈ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದಿರುವು ದರಿಂದ ಸಾರ್ವಜನಿಕರು ಸೇರಿದಂತೆ ವಾಹನ ಸವಾ ರರು, ರಿಕ್ಷಾ ಚಾಲಕರು ತೊಂದರೆ ಅನುಭವಿಸ ಬೇಕಾಗಿದೆ. ದಿನಕಳೆದಂತೆ ಗುಂಡಿಗಳ ಆಳ, ಅಗಲ ಜಾಸ್ತಿಯಾಗುತ್ತಿದ್ದು ದುಡಿದ ಹಣವನ್ನು ರಿಪೇರಿಗೆ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಿಕ್ಷಾ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತಪ್ಪಿಸಲು ಹೋಗಿ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವು ದರಿಂದ ಅಪಘಾತಗಳು ನಡೆದು ಅನೇಕರು ಗಾಯ ಗೊಂಡಿದ್ದಾರೆ. ಹೀಗೆ ಪದೇಪದೇ ಅಪಘಾತಗಳು ನಡೆಯುತ್ತಿದ್ದರೂ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಹದಗೆಟ್ಟಿರುವ ಕಾರವಾರ-ಶಿರವಾಡ ರಸ್ತೆಯನ್ನು ಹದಿನೈದು ದಿನಗಳಲ್ಲಿ ದುರಸ್ತಿ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಅಟೊ ರಿಕ್ಷಾ ಚಾಲಕರು ಎಚ್ಚರಿಕೆ ನೀಡಿದ್ದಾರೆ. ಚಾಲಕರ ಸಂಘದ ಅಧ್ಯಕ್ಷ ದಿಲೀಪ ಅರ್ಗೇಕರ್, ಉಪಾಧ್ಯಕ್ಷ ಸುಭಾಷ ಗುನಗಿ, ಕಾರ್ಯದರ್ಶಿ ಸತೀಶ ಅರ್ಗೇಕರ್, ಪ್ರದೀಪ ಕೇಣಿ, ಕೋಶಾಧ್ಯಕ್ಷ ಸಂದೇಶ ಆಚಾರಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.