ಭಾನುವಾರ, ಮಾರ್ಚ್ 7, 2021
22 °C
ನಗರದ ಸೇಡಂ ರಸ್ತೆಯಲ್ಲಿ ರಾಜಸ್ತಾನದ ಕಲಾವಿದರಿಂದ ವ್ಯಾಪಾರ ಜೋರು

ರಸ್ತೆ ಬದಿ ಆನೆ, ಕುದುರೆ, ಜಿಂಕೆ!

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ರಸ್ತೆ ಬದಿ ಆನೆ, ಕುದುರೆ, ಜಿಂಕೆ!

ಕಲಬುರ್ಗಿ: ಇಲ್ಲಿನ ಅನ್ನಪೂರ್ಣಾ ಕ್ರಾಸ್‌ನಿಂದ ಸೇಡಂ ರಸ್ತೆಯಲ್ಲಿ ಸಾಗಿದರೆ ಬಸವೇಶ್ವರ ಆಸ್ಪತ್ರೆಗೂ ಮುನ್ನ ರಸ್ತೆಯ ಬಲ ಭಾಗದಲ್ಲಿ ಆನೆ, ಕುದುರೆ ಮತ್ತು ಜಿಂಕೆಗಳನ್ನು ಕಾಣಬಹುದು!ದೂರದ ರಾಜಸ್ತಾನದ ಕಲಾವಿದರು ಮಾರಾಟಕ್ಕೆ ಇಟ್ಟಿರುವ ವಿವಿಧ ಬಗೆಯ, ಬಣ್ಣ ಬಣ್ಣದ ಪ್ರಾಣಿಗಳು ಇದೀಗ ದಾರಿಹೋಕರ ಕೇಂದ್ರ ಬಿಂದುಗಳಾಗಿವೆ. ಬೈಕ್, ಕಾರಿನಲ್ಲಿ ಸಾಗುವ ಪ್ರಯಾಣಿಕರು ಕೆಲಹೊತ್ತು ತಮ್ಮ ವಾಹನ ನಿಲ್ಲಿಸಿ, ಈ ಪ್ರಾಣಿಗಳನ್ನು ಕುತೂಹಲದಿಂದ ವೀಕ್ಷಿಸು ತ್ತಿದ್ದಾರೆ. ಅಷ್ಟೇ ಅಲ್ಲ, ತಮಗಿಷ್ಟವಾದ ಅಳತೆಯ ಪ್ರಾಣಿಗಳನ್ನು ಖರೀದಿಸುತ್ತಿದ್ದಾರೆ.ಏನಿವು ಪ್ರಾಣಿಗಳು?: ರಾಜಸ್ತಾನ ಕಲೆಗೆ ಹೆಸರುವಾಸಿ. ಅಂತೆಯೇ ಅಲ್ಲಿನ ಕಲಾವಿ ದರು ಪೋಮ್, ಕಟ್ಟಿಗೆ, ಕಬ್ಬಿಣದ ತಂತಿ, ಇಲಾಸ್ಟಿಕ್, ನವಿರು ಬಟ್ಟೆ ಮತ್ತು ಹತ್ತಿಯಿಂದ ಅನೇಕ ವಸ್ತುಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು. ಅವು ಗಳಲ್ಲಿ ಬಗೆ ಬಗೆಯ ಬಣ್ಣದ ಪ್ರಾಣಿಗಳೂ ಸೇರಿವೆ. ಕರ್ನಾಟಕದ ಚನ್ನಪಟ್ಟಣದಲ್ಲಿ ಕಟ್ಟಿಗೆಯಿಂದ ತಯಾರಿಸುವ ಬೊಂಬೆಗಳು ಹಾಗೂ ಇತರೆ ಆಟಿಕೆಗಳು ಎಷ್ಟು ಪ್ರಸಿದ್ಧವೋ ರಾಜಸ್ತಾನದ ಈ ಪ್ರಾಣಿಗಳು ಕೂಡ ಅಷ್ಟೇ ಪ್ರಸಿದ್ಧಿ ಪಡೆದಿವೆ.ಸದ್ಯ ಕಲಬುರ್ಗಿಯಲ್ಲಿ ಒಂದೇ ಸ್ಥಳದಲ್ಲಿ ಇವುಗಳನ್ನು ಮಾರಾಟಕ್ಕೆ ಇಡಲಾಗಿದೆ. ಬೆಲೆ ₹200ರಿಂದ ₹8 ಸಾವಿರ ವರೆಗೆ ಇದೆ. ಟೆಡ್ಡಿ ಬೇರ್, ಸ್ಥಳೀಯವಾಗಿ ತಯಾರಿಸಿರುವ ಪ್ರಾಣಿಗಳನ್ನು ಖರೀದಿಸಿದರೆ ಅವುಗ ಳನ್ನು ಮನೆ, ಷೋಕೇಸ್ ಅಥವಾ ಕಾರುಗಳಲ್ಲಿ ಇಡಲು ಮಾತ್ರ ಬಳಸಬ ಹುದು. ಆದರೆ, ರಾಜಸ್ತಾನದ ಕಲಾವಿ ದರು ತಯಾರಿಸಿದ ಪ್ರಾಣಿಗಳ ವಿಶೇಷ ವೆಂದರೆ ಇವುಗಳ ಮೇಲೆ ಮಕ್ಕಳು ಸೇರಿದಂತೆ ಯಾರೂ ಬೇಕಾದರೂ ಕೂರಬಹುದು. ಆದರೆ, ಪ್ರಾಣಿಗಳು ಚಲಿಸುವುದಿಲ್ಲ ಅಷ್ಟೆ!‘ರಾಜಸ್ತಾನದಲ್ಲಿ ಇದೊಂದು ರೀತಿಯಲ್ಲಿ ಗೃಹ ಉದ್ಯಮ. ಅನೇಕರು ಕರಕುಶಲ ವಸ್ತುಗಳನ್ನು ತಯಾರಿಸು ತ್ತಾರೆ. ಹೀಗೆ ತಯಾರಿಸುವ ವಿವಿಧ ಬಗೆಯ ಕಲಾಕೃತಿಗಳು ಹಾಗೂ ಪ್ರಾಣಿಗಳನ್ನು ನಾವು ಖರೀದಿಸುತ್ತೇವೆ. ಆ ಬಳಿಕ ಲಾರಿಯಲ್ಲಿ ಸುರಕ್ಷಿತವಾಗಿ ಅವುಗಳನ್ನು ಕರ್ನಾಟಕಕ್ಕೆ ತರುತ್ತೇವೆ. ಇಲ್ಲಿ ರಸ್ತೆ ಬದಿ ವ್ಯಾಪಾರ.. ಬಾಡಿಗೆ, ವಿದ್ಯುತ್ ಶುಲ್ಕ ಇರುವುದಿಲ್ಲ. ಹೀಗಾಗಿ, ತಯಾರಿಕೆ ಮತ್ತು ಸಾಗಣೆ ವೆಚ್ಚ ಕಳೆದು ನಮ್ಮ ಲಾಭವನ್ನು ನಿರ್ಧರಿಸಿ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದೇವೆ’ ಎಂದು ಕಲಾವಿದ ಸರವಣ ಖುಷಿಯಿಂದಲೇ ಹೇಳುತ್ತಾರೆ.‘15 ದಿನಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ. ಬಹುತೇಕರು ನೋಡಲೆಂದು ಬಂದು, ಖರೀದಿ ಮಾಡುತ್ತಿದ್ದಾರೆ. ದೊಡ್ಡವರಿಗಿಂತಲೂ ಚಿಕ್ಕ ಮಕ್ಕಳು ಹೆಚ್ಚು ಆಕರ್ಷಿತ ರಾಗುತ್ತಿದ್ದಾರೆ. ಬೇಸಿಗೆ ಕಳೆಯುವವರೆಗೆ ಇಲ್ಲಿಯೇ ಇರುತ್ತೇನೆ. ಪಾಲಕರು ಮಕ್ಕ ಳೊಂದಿಗೆ ಬಂದರೆ ನಮಗೆ ವ್ಯಾಪಾರ ಖಚಿತ’ ಎಂದು ನಗುತ್ತಲೇ ತಮ್ಮ ವ್ಯಾಪಾರದ ಗುಟ್ಟನ್ನು ಹಂಚಿಕೊಂಡರು.***

ವಿವಿಧ ವಸ್ತುಗಳನ್ನು ಬಳಸಿ ಪ್ರಾಣಿಗಳನ್ನು ತಯಾರಿಸುವುದು ರಾಜಸ್ತಾನದ ಸಾಂಪ್ರದಾಯಿಕ ಕಲೆಯಾಗಿದೆ. ಕಲಬುರ್ಗಿಯಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಇದೆ.

-ಶರವಣ,
ಕಲಾವಿದ, ರಾಜಸ್ತಾನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.