ರಸ್ತೆ ಬೇಡ, ಕುಡಿಯಲು ನೀರು ಕೊಡಿ'

7

ರಸ್ತೆ ಬೇಡ, ಕುಡಿಯಲು ನೀರು ಕೊಡಿ'

Published:
Updated:

ಚಿಂಚೋಳಿ: ಸಿ.ಸಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲು ತಾಲ್ಲೂಕಿನ ಹೂವಿನಭಾವಿ (ಹುಲಿ ನಾಯಕ) ತಾಂಡಾಕ್ಕೆ ತೆರಳಿದ ಶಾಸಕ ಸುನೀಲ ವಲ್ಯ್‌ಪುರಗೆ ತಾಂಡಾವಾಸಿಗಳು ಸಿ.ಸಿ ರಸ್ತೆ ಬೇಡ ನಮಗೆ ಕುಡಿಯಲು ನೀರು ಕೊಡಿ ಎಂದು ಒತ್ತಾಯಿಸಿದ ಘಟನೆ ಮಂಗಳವಾರ ನಡೆದಿದೆ.ಎಸ್‌ಸಿಪಿ ಯೋಜನೆ ಅಡಿಯಲ್ಲಿ 2 ಲಕ್ಷ ರೂ.ಗಳ ಸಿಮೆಂಟ್ ರಸ್ತೆ ಕಾಮಗಾರಿಗೆ ಅಡಿಗಲ್ಲು ಹಾಕಿದ ನಂತರ ಸಭೆಯಲ್ಲಿ ತಾಂಡಾವಾಸಿಗಳ ಪರವಾಗಿ ಮಾತನಾಡಿದ ತಾರಾಸಿಂಗ್ ನಮಗೆ ರಸ್ತೆಗಿಂತಲೂ ಕುಡಿವ ನೀರಿನ ಅಗತ್ಯವಿದೆ ಎಂದರು.ನೀವು ನಮ್ಮ ತಾಂಡಾಕ್ಕೆ ಆಗಮಿಸಿ ಹಣ  ಮಂಜೂರು ಮಾಡಿದ್ದೀರಿ ನಮಗೆ ಖುಷಿಯಿದೆ ಆದರೆ ಸಿಮೆಂಟ್ ರಸ್ತೆ ಇಲ್ಲದಿದ್ದರೂ ನಮಗೆ ತೊಂದರೆಯಿಲ್ಲ. ನಾವು ಹೇಳಿಕೇಳಿ ಶ್ರಮಜೀವಿಗಳು. ಕಷ್ಟಪಟ್ಟು ದುಡಿದು ತಿನ್ನುತ್ತೇವೆ. ನೀವು ನಮಗೆ ನೀರು ಕೊಡಿ ಎಂದು ವಿನಂತಿಸಿದರು.ನಂತರ ಮಾತನಾಡಿದ ಶಾಸಕ ಸುನೀಲ ವಲ್ಯ್‌ಪುರ ನಿಮ್ಮ ನೋವು ಭಾವನೆ ನನಗೆ ಅರ್ಥವಾಗುತ್ತದೆ. ನಿಮ್ಮ ಸಮಸ್ಯೆ ಅರಿತು ತಾಂಡಾಕ್ಕೆ ಕುಡಿವ ನೀರು ಪೂರೈಸಲು ಕೊಳವೆ ಬಾವಿಯನ್ನು 500 ಅಡಿ ಆಳದವರೆಗೆ ಕೊರೆದರೂ ನೀರು ಲಭಿಸಿಲ್ಲ ಹೀಗಾಗಿ ನೀವು ವಂತಿಗೆ ಹಣ ಭರಿಸಲು ಸಿದ್ಧರಾಗಿ ನಾನು ಜಲ ನಿರ್ಮಲ ಯೋಜನೆ ಅಡಿಯಲ್ಲಿ 2 ಕೋಟಿಗಿಂತಲೂ ಅಧಿಕ ಹಣ ಮಂಜೂರು ಮಾಡಿಸಿ ಶುದ್ಧ ಕುಡಿವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿ ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿಯಾದ ಯೋಜನೆಗಳನ್ನು ವಿವರಿಸಿದರು.ಜಗನ್ನಾಥರೆಡ್ಡಿ ಹೂವಿನಭಾವಿ ಮತ್ತು ಅಕ್ರಂ ಪಟೇಲ್ ತಾಡಪಳ್ಳಿ ಮಾತನಾಡಿ ಸುನೀಲ ವಲ್ಯ್‌ಪುರ ಒಬ್ಬ ಅಭಿವೃದ್ಧಿ ಮನೋಧರ್ಮದ ಶಾಸಕರು ಇಂತಹ ಶಾಸಕರು ಪಡೆದ ಚಿಂಚೋಳಿ ಕ್ಷೇತ್ರದಲ್ಲಿ ರಸ್ತೆ, ಕುಡಿವ ನೀರು ಹಾಗೂ ಮೂಲಸೌಕರ್ಯ ಕೆಲಸಗಳು ಹಳ್ಳಿ ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆದಿವೆ ಎಂದು ಶ್ಲಾಘಿ ಸಿದರು. ಪಸ್ತಪೂರ ಗ್ರಾ.ಪಂ. ಅಧ್ಯಕ್ಷ ಶರಣಪ್ಪ ನಾಟಿಕಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ಭವಾನಿಸಿಂಗ್ ರಾಠೋಡ್, ಉಪಾಧ್ಯಕ್ಷ ಸಂತೋಷ ಯಲಕಪಳ್ಳಿ, ತಾಲ್ಲೂಕು ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಮರಾವ್ ಪಾಟೀಲ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮಹೇಂದ್ರಕರ್, ಸಹಯಕ ಎಂಜಿನಿಯರ್ ಗಿರಿರಾಜ ಸಜ್ಜನ್ ಮುಂತಾದವರು ವೇದಿಕೆಯಲ್ಲಿದ್ದರು. ವೀರಣ್ಣ ಜಾಬಶೆಟ್ಟಿ             ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry