ಭಾನುವಾರ, ಜೂನ್ 20, 2021
28 °C

ರಸ್ತೆ ಮಧ್ಯದ ಧಾರ್ಮಿಕ ಕಟ್ಟಡ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನಗರದ ಮುಖ್ಯ ರಸ್ತೆಮಧ್ಯ ಬರುವ ಧಾರ್ಮಿಕ ಸ್ಥಳಗಳನ್ನು ತೆರವುಗೊಳಿಸಲು ಆದೇಶ ಹೊರಡಿಸಿದ್ದರಿಂದ ಪಟ್ಟಣದ ಶಿವಾಜಿ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನ ವರೆಗಿನ ರಸ್ತೆ ಮಧ್ಯದ ಧಾರ್ಮಿಕ ಕಟ್ಟಡಗಳನ್ನು ಶನಿವಾರ ಮಧ್ಯರಾತ್ರಿಯಿದ ಭಾನುವಾರ ಮಧ್ಯಾಹ್ನ ವರೆಗೆ ಬಸವಕಲ್ಯಾಣ ಸಹಾಯಕ ಆಯುಕ್ತ ಎಚ್.ಪ್ರಸನ್ನಕುಮಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಧ್ಯ ಹತ್ತಾರು ಬುಲ್ಡೊಜರ್‌ಗಳಿಂದ ತೆರವುಗೊಳಿಸಲಾಯಿತು.ಶಿವಾಜಿ ವೃತ್ತ ಪ್ರವೇಶದಲ್ಲಿ ಇರುವ ಅಶುರ್‌ಖಾನಾ, ಮಸೀದಿ ಕಟ್ಟಡ, ಹಳೆಯ ಪುರಸಭೆ ಕಚೇರಿ ಕಟ್ಟಡ (ಸರಾಯಿ), ಬಸವೇಶ್ವರ ವೃತ್ತದ ಪಕ್ಕದ ಬಾಜಾರ ಬಸವಣ್ಣ ದೇವಸ್ಥಾನ, ಪರ್ವತ ಮಲ್ಲಣ್ಣ ದೇವಸ್ಥಾನ, ಪುಟಾಣಿ ಓಣಿಯ ಚಿದ್ರಿ ನಿವಾದ ಎದುರಿಗೆ ಇರುವ ನಾಗಣ್ಣ ಕಟ್ಟೆ, ಮತ್ತು ಡಾ.ಅಂಬೇಡ್ಕರ ವೃತ್ತದಿಂದ ವಾಂಜ್ರಿ ವರೆಗಿನ ರಸ್ತೆ ಮಧ್ಯ ಬರುವ ಜುನಿಯರ್ ಕಾಲೇಜು ಪಕ್ಕದ ಹನುಮಂತ ದೇವಸ್ಥಾನ, ಉದ್ಯಾನವನ ಪಕ್ಕದ ನಾಗಣ್ಣ ಕಟ್ಟೆ, ಬೈಪಾಸ್ ರಸ್ತೆಯಲ್ಲಿನ ಹನುಮಂತ ದೇವಸ್ಥಾನ, ದಂತಮಹಾವಿದ್ಯಾಲಯ ಎದುರಿನ ನಾಗಣ್ಣಕಟ್ಟೆ, ಹೇಮರೆಡ್ಡಿ ಮಲ್ಲಮ್ಮಕಟ್ಟೆ ಮೊದಲಾದವುಗಳನ್ನು ತೆರವುಗೊಳಿಸಲಾಯಿತು.ಶನಿವಾರ ಮಧ್ಯರಾತ್ರಿಯಿಂದ ತೆರವು ಕಾರ್ಯಾಚರಣೆ ಕೈಗೊಳ್ಳುವ ಹಿನ್ನೆಲೆಯಲ್ಲಿ ಡಿ.ಆರ್. ಪೊಲೀಸ್ ಸೇರಿದಂತೆ ಜಿಲ್ಲೆಯ ವಿವಿದೆಢೆಯಿಂದ ಭಾರೀ ಸಂಖ್ಯೆಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ತೆರವು ಕಾರ್ಯಾಚರಣೆಗಾಗಿ 12ಕ್ಕೂ ಅಧಿಕ ಬುಲ್ಡೊಜರ್ ಬಳಕೆ ಮಾಡಿದ್ದರಿಂದ ಕಾರ್ಯಚರಣೆ ತೀವ್ರಗತಿಯಲ್ಲಿ ನಡೆಯಿತು.ತಹಸೀಲ್ದಾರ ಸಿ.ಲಕ್ಷ್ಮಣರಾವ, ಡಿ.ವೈ.ಎಸ್ಪಿ ಅಂಬಣ್ಣ ಚಿಪ್ಪಾರ, ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಂ.ಸತೀಶ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಮತ್ತು ಸಬ್ ಇನ್‌ಸ್ಪೆಕ್ಟರ ಮಲ್ಲಿಕಾರ್ಜುನ ಬಂಡೆ,

ಖಾಜಾ ಹುಸೇನ್, ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ, ಶಾಂತಲಿಂಗ ದೇಸಾಯಿ, ಅಲ್ಲದೇ ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಗಳಾದ ಬಿ.ಎಸ್.ಪಾಟೀಲ, ಶಿವರಾಜ ಮದಕಟ್ಟಿ ಮೊದಲಾದವರು ರಾತ್ರಿ ಇಡೀ ಕಾರ್ಯಚರಣೆಯಲ್ಲಿ ಇದ್ದು ಸಹಕರಿಸಿದರು. ಪ್ರೊಬೇಷ್ನರಿ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ, ಎ.ಎಸ್.ಐ ಶಾಮರಾವ ನೂರಾರು ಸಂಖ್ಯೆ ಪೊಲೀಸರು ಬಂದೋಬಸ್ತನಲ್ಲಿ ಇದ್ದರು.ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ತಹಸೀಲ್ದಾರ ಸಿ.ಲಕ್ಷ್ಮಣರಾವ ಮಾರ್ಚ 15ರಂದು ಸರ್ವ ಧರ್ಮಿಯರು ಮತ್ತು ಧಾರ್ಮಿಕ ಸ್ಥಳಗಳ ಮುಖಂಡರ ಸಭೆ ನಡೆಸಿದ ಸಂದರ್ಭದಲ್ಲಿ, ಎಲ್ಲರೂ ಪಕ್ಷ

ಮತ್ತು ಜಾತಿಬೇಧ ಮರೆತು ಸಮ್ಮತಿ ಸೂಚಿಸಿದ್ದರು. ನಂತರ ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನ ವರೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ನೆರವೇರಿತು.ಕೆಲವು ಧಾರ್ಮಿಕ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆ ನಡೆಸುವಾಗ ತಾರತಮ್ಯ ಆಗಬಹುದು ಎಂದು ನಿರೀಕ್ಷಿಸಿದ್ದ ನಗರದ ನಿವಾಸಿಗಳು, ಅದರ್ಲ್ಲಲೂ ವಿಶೇಷವಾಗಿ ಭಾರೀ ಸಂಖ್ಯೆಯ ಯುವಕರು ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡುಬಂತು. ಮುಂದೆ ಡಾ.ಅಂಬೇಡ್ಕರ ವೃತ್ತದಿಂದ ಶಿವಪೂರ ಮಾರ್ಗವಾಗಿ ಹಳೆ ರಾಷ್ಟ್ರೀಯ ಹೆದ್ದಾರಿ ವರೆಗೆ ನಡೆಯಲಿರುವ ತೆರವು ಕಾರ್ಯಾಚರಣೆ ಕುರಿತು ಇಲ್ಲಿನ ವಿವಿಧ ಸಮುದಾಯ ಯುವಕರು ಭಾರೀ ಕುತೂಹಲ ಹೊಂದಿದ್ದಾರೆ.ತೆರವು ಕಾರ್ಯಾಚರಣೆ ಬಳಸಲಾದ ಹತ್ತಾರು ಬುಲ್ಡೊಜರಗಳು ಮುಖ್ಯ ರಸ್ತೆಯಲ್ಲಿ ಅಡ್ಡಾಡುತ್ತಿದ್ದಾಗ  ಡೈನಾಸೋರ್ ಮಾದರಿಯಲ್ಲೇ ದಾಳಿ ನಡೆಸುತ್ತಿದ್ದ ಭಾಸ ನೆರೆದ ಸಾರ್ವಜನಿಕರಿಗೆ ಆಯಿತು. ಅಧಿಕಾರಿಗಳು ಮತ್ತು ಸಾರ್ವಜನಿಕರು ರಾತ್ರಿಯಿಂದ ಬೆಳಿಗ್ಗೆ ವರೆಗೆ ಬೀದಿಯಲ್ಲಿ ಅಲೆದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.