ಮಂಗಳವಾರ, ಮಾರ್ಚ್ 9, 2021
23 °C
ರೋಗ ಹರಡುವ ಭೀತಿಯಲ್ಲಿ ಜನರು: ಆತಂಕ

ರಸ್ತೆ ಮೇಲೆ ನೀರು:ಸಂಚಾರ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಮೇಲೆ ನೀರು:ಸಂಚಾರ ಅಸ್ತವ್ಯಸ್ತ

ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿಯ ಜತ್ತಿ ಕಾಲೊನಿ ಸಮೀಪ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದೆ.ಹಟ್ಟಿ ಗ್ರಾಮ ಮತ್ತು ಹಟ್ಟಿ ಕ್ಯಾಂಪ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಜತ್ತಿ ಕಾಲೊನಿ, ಜಿ.ಆರ್‌. ಕಾಲೊನಿ, ಜೆಪಿ ಕಾಲೊನಿ, ಎನ್‌ಜಿಆರ್‌ ಕಾಲೊನಿ,  ರಾಮ್‌ ರಹೀಮ್‌ ಕಾಲೊನಿ ಸೇರಿದಂತೆ ಅಬ್ದಲ್ಲಾ ಕಾಲೊನಿ ನಿವಾಸಿಗಳು ಹಟ್ಟಿ ಗ್ರಾಮಕ್ಕೆ ಹೋಗ

ಬೇಕು ಎಂದರೆ ಇದೆ ರಸ್ತೆಯಲ್ಲಿ ಸಾಗಬೇಕು. ದಿನ ನಿತ್ಯ ಸಾವಿರಾರು ಸಂಖ್ಯೆಯ ವಾಹನ ಇದೆ ರಸ್ತೆಯಲ್ಲಿ ಸಂಚಾರ ಮಾಡುತ್ತವೆ. ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿ ಪಡಿಸುವ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ಬೈಪಾಸ್ ರಸ್ತೆ ಮೇಲೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ.ಪಾದಚಾರಿಗಳು ದಿನವೂ ಮೈ ಮೇಲೆ ಚರಂಡಿ ಕೊಳಚೆ  ನೀರಿನ ಮಜ್ಜನ ಮಾಡಿಸಿಕೊಂಡುವ ಹೋಗುವ ಸ್ಥಿತಿ ಇದೆ.  ತಗ್ಗುಗಳಲ್ಲಿ ಕೊಳಚೆ ನೀರು ನಿಂತ ಪರಿಣಾಮ ಅಕ್ಕಪಕ್ಕದ ಮನೆಗಳಲ್ಲಿ ದುರ್ವಾಸನೆ ಹಬ್ಬತೊಡಗಿದೆ. ಇನ್ನು ಜನರು ಮುಗು ಮುಚ್ಚಿಕೊಂಡು ಇಲ್ಲಿಯೇ ನಡೆದಾಡುವ ವಾತಾವರಣವಿದೆ. ರೋಗ ಹರಡುವ ಭಯ ಕಾಡುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದರು.ಮಕ್ಕಳು, ಮಹಿಳೆಯರು, ವೃದ್ಧರು ಈ ಕೊಳಚೆ ನೀರು ದಾಟಿಕೊಂಡು ಹೋಗುವುದಕ್ಕೆ ಹರಸಾಹಸ ಪಡುತ್ತಾರೆ. ಶಾಲೆಗೆ ಹೋಗುವ ವಿದ್ಯಾರ್ಥಿಗಳು ಕೊಳಚೆಯಲ್ಲಿ ಬಿದ್ದಿದ್ದು ಇದೆ.  ಒಂದು ವಾರದಿಂದ ಚರಂಡಿ ತುಂಬಿ ಹರಿಯುತ್ತಿದೆ.  ಈ ಕುರಿತು ಕಂಪೆನಿ ಸ್ವಚ್ಛತಾ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಶೂನ್ಯ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.ಗಣಿ ಆಡಳಿತ ಮಂಡಳಿಯು ಪ್ರತಿ ತಿಂಗಳು ಕ್ಯಾಂಪ್‌ ಸ್ವಚ್ಛತೆಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ  ಸ್ವಚ್ಛತೆ ಕಾರ್ಯದ ಗುತ್ತಿಗೆ ಪಡೆದ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕಾರ್ಮಿಕರ ಕಾಲೊನಿ ಗಳಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ಭಾವನೆ ತಳೆ ದಿದ್ದಾರೆ ಎಂದು ಕಾರ್ಮಿಕರು ಆರೋಪ.ಗಾಂಧಿ ಮೈದಾನ, ವಾಚ್‌ಮನ್‌ ವಾರ್ಡ್‌ ಗಳಲ್ಲಿ  ನಿವಾಸಿಗಳು ನಿತ್ಯವೂ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾ ರಿಗಳು ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡ ಬೇಕು ಎಂದು ಕಾರ್ಮಿಕರಾದ ದುರಗಪ್ಪ, ಮರಿಯಪ್ಪ, ಬಾಬು, ಮಹೇಶ, ಅನೀಸ್‌, ಶ್ರೀನಿವಾಸ ಒತ್ತಾಯಿಸಿದ್ದಾರೆ.ಮುಖ್ಯಾಂಶಗಳು

* ಹಟ್ಟಿ ಚಿನ್ನದ ಗಣಿ ಆಡಳಿತ ಮಂಡಳಿ ನಿರ್ಲಕ್ಷ್ಯ: ಆರೋಪ

* ಪಾದಚಾರಿಗಳಿಗೆ ರಾಚುವ ಗಲೀಜು ಕೊಳಚೆ ನೀರು

*ಇದೇ ರಸ್ತೆ ಅವಲಂಭಿಸಿರುವ ಜನರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.