ಶುಕ್ರವಾರ, ಆಗಸ್ಟ್ 7, 2020
23 °C
ನಗರ ಸಂಚಾರ

ರಸ್ತೆ ಮೇಲೆ ಮಣ್ಣ ರಾಶಿ: ಸಂಚಾರ ದುಸ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಮೇಲೆ ಮಣ್ಣ ರಾಶಿ: ಸಂಚಾರ ದುಸ್ತರ

ಬೀದರ್: ಮಳೆಗಾಲ ಆರಂಭವಾದರೆ ನಗರದ ಬಡಾವಣೆಗಳ  ಹೆಚ್ಚಿನ ರಸ್ತೆಗಳು ಬಳಕೆಗೆ ಯೋಗ್ಯವಾಗಿರುವುದಿಲ್ಲ. ಡಾಂಬರು ಕಾಣದ ಇಂಥ ರಸ್ತೆಗಳನ್ನು ಸ್ಥಳೀಯ ಆಡಳಿತ ಸರಿಪಡಿಸಬೇಕು ಎಂಬ ನಿರೀಕ್ಷೆ ಸಹಜ. ಆದರೆ, ಇಲ್ಲಿ ಮೊದಲೇ ದುಃಸ್ಥಿತಿಯಲ್ಲಿದ್ದ ರಸ್ತೆಯಲ್ಲಿ ರಾಶಿ, ರಾಶಿ ಮಣ್ಣು ಗುಡ್ಡೆ ಹಾಕಿ ಇನ್ನಷ್ಟು ಹದಗೆಡಿಸಲಾಗಿದೆ.ಈಚೆಗೆ ಬಳಕೆಗೆ ತೆರವುಗೊಳಿಸಲಾದ ರೈಲ್ವೆ ಕೆಳಸೇತುವೆ ಸ್ಥಳದಿಂದ ಸಾಗಿಸಲಾದ ಮಣ್ಣನ್ನು ಹೀಗೆ ಬಡಾವಣೆಯ ರಸ್ತೆಗೆ ಸುರಿಯಲಾಗಿದೆ ಎಂಬ ದೂರುಗಳಿವೆ. ಇರುವ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳದೇ ಹೆಚ್ಚುವರಿಯಾಗಿ ಅಲ್ಲಲ್ಲಿ ಮಣ್ಣಿನ ರಾಶಿ ಹಾಕಿ ಸಂಚಾರಕ್ಕೆ ಸಮಸ್ಯೆ ತಂದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.ನಗರಸಭೆಯ ಕೇಂದ್ರ ಕಚೇರಿಗೆ ಸಮೀಪದಲ್ಲಿ, ಕೆಇಬಿ ಹಿಂಭಾಗದ ನಂದಿ ಕಾಲೊನಿಯಲ್ಲಿ ರ ಲೋಪ ಸಂಗ್ರಹವಾಗಿರುವ ಮಳೆ ನೀರಿನೊಂದಿಗೆ ಹೆಚ್ಚುವರಿಯಾಗಿ ಸುರಿದಿರುವ ಮಣ್ಣು ಸೇರಿ ಆ ಮಾರ್ಗದಲ್ಲಿ ವಾಹನಗಳು ಓಡಾಡಲಾಗದ ಸ್ಥಿತಿ ಇದೆ. ಸುತ್ತು ಬಳಸಿ ಮನೆಗಳಿಗೆ ತಲುಪಬೇಕಾದ ಸ್ಥಿತಿ ಅಲ್ಲಿನ ನಿವಾಸಿಗಳದು.ಈ ಹಿಂದೆಯೇ ರಸ್ತೆ ದುರಸ್ತಿಗೆ ಪಡಿಸಲು ಸ್ಥಳೀಯ ವಾರ್ಡ್ ಪ್ರತಿನಿಧಿಸುವ ನಗರಸಭೆ ಸದಸ್ಯ ಮತ್ತು ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿರುವ ಇಲ್ಲಿನ ನಿವಾಸಿಗಳು ಈಗ, ನಿವಾಸಿಗಳೇ ಒಗ್ಗೂಡಿ ಸಂಪರ್ಕ ರಸ್ತೆಯನ್ನು ದುರಸ್ತಿ ಪಡಿಸಿಕೊಳ್ಳುವ ಸಾಧ್ಯತೆಗಳ ಬಗೆಗೆ ಚಿಂತನೆ ನಡೆಸಿದ್ದಾರೆ.ನಗರಸಭೆ ಆಯುಕ್ತ ರಾಮದಾಸ್ ಅವರನ್ನು ಸಂಪರ್ಕಿಸಿದಾಗ, `ಲಭ್ಯವಿರುವ ಗಟ್ಟಿಯಾದ ಇಟ್ಟಿಗೆ ಚೂರು, ಕಲ್ಲುಗಳಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಂಡಿ ಇರುವ ರಸ್ತೆಗಳಲ್ಲಿ ಹಾಕಿ, ಸರಿಪಡಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಲಾಗಿತ್ತು.

ಆದರೆ, ಮಣ್ಣು ಸುರಿಯುವಂತೆ ಹೇಳಿರಲಿಲ್ಲ. ಈ ಬಗೆಗೆ ಪರಿಶೀಲಿಸಲಾಗುವುದು' ಎಂದರು.ಬಡಾವಣೆಯ ನಿವಾಸಿಯೊಬ್ಬರು, ಪ್ರತಿ ಬಾರಿ ನಿವಾಸಿಗಳ ಸಭೆ ನಡೆದಾಗಲೂ ರಸ್ತೆ ಸ್ಥಿತಿಯೇ ಪ್ರಮುಖವಾಗಿ ಚರ್ಚೆಗೆ ಬರಲಿದೆ. ನಗರಸಭೆಯು ಕೂಡಾ ಇದನ್ನು ನಿರ್ಲಕ್ಷಿಸಿದೆ.ನಗರಸಭೆ ಕ್ರಮ ಕೈಗೊಳ್ಳದೇ ಇದ್ದರೆ ನಿವಾಸಿಗಳೇ ವೆಚ್ಚ ಭರಿಸಿ ದುರಸ್ತಿ ಮಾಡಿಕೊಳ್ಳಬೇಕಾದಿತೇನೋ' ಎನ್ನುತ್ತಾರೆ.

ಹಿಂದೆ ಹೀಗೇ ಆದರ್ಶ ನಗರದಲ್ಲಿ ನಿವಾಸಿಗಳೇ ರಸ್ತೆ ದುರಸ್ತಿಗೆ ಮುಂದಾದಾಗ ಅಧಿಕಾರಿಗಳು, ಶಾಸಕರು ಸ್ಥಳಕ್ಕೆ ಧಾವಿಸಿ ಸ್ಥಳೀಯ ಆಡಳಿತವೇ ದುರಸ್ತಿ ಕೈಗೊಳ್ಳಲು ಕ್ರಮ ವಹಿಸಿದ್ದರು.ಈಗ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ಅವರು, ಹೆಚ್ಚಿನ ಬಡಾವಣೆಗಳಲ್ಲಿ ಗುಂಡಿಗಳಿಂದಲೇ ತುಂಬಿರುವ ರಸ್ತೆಗಳನ್ನು  ಕನಿಷ್ಠ ಬಳಕೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವರು ನಗರಸಭೆಗೆ ಚುರುಕು ಮುಟ್ಟಿಸುವರೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.