ರಸ್ತೆ ರಿಪೇರಿ ಮಾಡದ ಪುರಸಭೆ

ಭಾನುವಾರ, ಜೂಲೈ 21, 2019
25 °C

ರಸ್ತೆ ರಿಪೇರಿ ಮಾಡದ ಪುರಸಭೆ

Published:
Updated:

ಹೊಳೆನರಸೀಪುರ: ಪಟ್ಟಣದ ಜನನಿಬಿಡ ಪ್ರದೇಶದಲ್ಲೊಂದಾದ ರಿವರ್‌ಬ್ಯಾಂಕ್ ರಸ್ತೆಯು ಗುಂಡಿ ಬಿದ್ದು ಓಡಾಡಲು ಸಾಧ್ಯ ಇಲ್ಲದಷ್ಟು ಹಾಳಾ ಗಿದೆ. ರಸ್ತೆಯ ಎರಡೂ ಬದಿಯಲ್ಲಿ ಕಸದ ರಾಶಿ ಬಿದ್ದಿದ್ದು ಹಂದಿಗಳು ಕಸದ ರಾಶಿಯನ್ನು ರಸ್ತೆಗೆಲ್ಲಾ ಹರಡಿವೆ. ಈ ರಸ್ತೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಪುರಸಭೆಯವರು ಇತ್ತ ತಿರುಗಿ ನೋಡುವುದಿಲ್ಲ ಎಂದು ಬಡಾವಣೆಯ ಜನರು ದೂರಿದ್ದಾರೆ.ಮುಖ್ಯರಸ್ತೆಯ ನಂತರ ರಿವರ್‌ಬ್ಯಾಂಕ್ ರಸ್ತೆ ಅತ್ಯಂತ ಜನನಿಬಿಡ ರಸ್ತೆ. ಈ ರಸ್ತೆಯಲ್ಲಿ ವರ್ಕ್‌ಶಾಪ್, ಟಿಂಬರ್ ಡಿಪೋ, ಹೋಟೆಲ್‌ಗಳು, ಚಿಕ್ಕಪುಟ್ಟ ಅಂಗಡಿಗಳು, ರೈಸ್‌ಮಿಲ್, ಕಲ್ಯಾಣ ಮಂಟಪ ಎಲ್ಲವೂ ಇದೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿವೆ. ಬೆಳಿಗ್ಗೆಯಿಂದ ಸಂಜೆವರೆಗೂ ಈ ಬೀದಿಯಲ್ಲಿ          ಜನವೋಜನ. ಆದರೆ, ಈ ರಸ್ತೆ ಸಂಚ ರಿಸಲು ಸಾಧ್ಯ ಇಲ್ಲದಷ್ಟು ಹಾಳಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿಯಲ್ಲಿ ನೀರು ನಿಂತು ಸೊಳ್ಳೆಗಳ ಉಗಮ ಸ್ಥಾನವಾದಂತಾಗಿದೆ.ಈ ರಸ್ತೆ ಡಾಂಬಾರು ಕಂಡು ಎಷ್ಟು ವರ್ಷಗಳು ಕಳೆದಿದೆಯೋ ಗೊತ್ತಿಲ್ಲ. ಮಳೆಗಾಲದಲ್ಲಿ ನೀರು ನಿಂತು ರಸ್ತೆ ಮತ್ತು ಗುಂಡಿ ಯಾವುದೆಂದು ತಿಳಿಯದೆ ದ್ವಿಚಕ್ರವಾಹನದ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಚಂರಡಿ ವ್ಯವಸ್ಥೆ ಸರಿಲ್ಲದೇ ಈ ರಸ್ತೆಯ ಗಲೀಜೆಲ್ಲಾ ಹೇಮಾವತಿ ನದಿಗೆ ಹರಿಯುತ್ತಿದೆ.ನಮ್ಮ ರಸ್ತೆಗೆ ಡಾಂಬಾರು ಹಾಕಿಸಿಕೊಂಡಿ ಎಂದು ಬಡಾವಣೆಯ ಜನರು ಶಾಸಕರಲ್ಲಿ ಮನವಿ ಮಾಡಿ ಮಾಡಿ ಬೇಸತ್ತು ಸುಮ್ಮನಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry