ರಸ್ತೆ, ರೈಲು ತಡೆ, ಸರದಿ ಉಪವಾಸ ಸತ್ಯಾಗ್ರಹ, ಆತ್ಮಹತ್ಯೆ ಯತ್ನ

7

ರಸ್ತೆ, ರೈಲು ತಡೆ, ಸರದಿ ಉಪವಾಸ ಸತ್ಯಾಗ್ರಹ, ಆತ್ಮಹತ್ಯೆ ಯತ್ನ

Published:
Updated:

ಮಂಡ್ಯ: ಕರ್ನಾಟಕ ಬಂದ್ ಅಂಗವಾಗಿ ಶನಿವಾರ ಜಿಲ್ಲೆಯಲ್ಲಿಯೂ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ರೈಲು, ಬಸ್, ಖಾಸಗಿ ಬಸ್, ಆಟೊ ರಸ್ತೆಗೆ ಇಳಿಯಲಿಲ್ಲ. ಸರದಿ ಉಪವಾಸ ನಡೆಯುತ್ತಿರುವ ಸ್ಥಳದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದರಿಂದ ಮಾರುಕಟ್ಟೆ ಸ್ಥಳ ಬಿಕೋ ಎನ್ನುತ್ತಿತ್ತು. ಆದರೆ, ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಜನರು ಪ್ರತಿಭಟನೆಯಲ್ಲಿ ತೊಡಗಿಸಿ ಕೊಂಡಿದ್ದರು. ರೈಲು ತಡೆ ನಡೆಸಿದ್ದರಿಂದ ಬಹುತೇಕ ರೈಲುಗಳ ವೇಳಾಪಟ್ಟಿಯನ್ನು ರದ್ದು ಪಡಿಸಲಾಗಿತ್ತು. ಪರಿಣಾಮ ಬೇರೆ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು.ಜಿ.ರಾಮಲಿಂಗೇಗೌಡ, ಪ್ರೊ.ಜಿ.ಟಿ.ವೀರಪ್ಪ, ಹಲ್ಲೆಗೆರೆ ಶಿವರಾಮು, ರಫೀವುಲ್ಲಾ, ರಾಮೇಗೌಡ ಹಾಗೂ ಸಿದ್ದರಾಜುಗೌಡ ಹೊಸಹಳ್ಳಿ ಸರದಿ ಉಪವಾಸ ಸತ್ಯಾಗ್ರಹ ಮಾಡಿದರು.ಬೆಳಿಗ್ಗೆಯಿಂದ ಸಂಜೆಯವರೆಗೂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ವಿವಿಧ ಸಂಘಟನೆಗಳವರು ಸಾಲು, ಸಾಲಾಗಿ ಆಗಮಿಸುತ್ತಲೇ ಇದ್ದರು.ಪಾಂಡವಪುರ ತಾಲ್ಲೂಕಿನ ಶಾದನಹಳ್ಳಿಯ ವಿಶ್ವನಾಥ ಎಂಬುವವರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿ ದರು. ಕೂಡಲೇ ಪಕ್ಕದಲ್ಲಿದ್ದ ಜನರು ಅಂಗಿ ಕಿತ್ತೊ ಗೆದು, ಬೆಂಕಿ ಹಚ್ಚಿಕೊಳ್ಳುವುದನ್ನು ತಡೆದರು.ಭಾಗವಹಿಸಿದ್ದ ಸಂಘಟನೆಗಳು: ವಿವಿ ರಸ್ತೆಯ ಸರ್ ಎಂ.ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘ; ಜಿಲ್ಲಾ ಬ್ರಾಹ್ಮಣ ಸಭಾ; ಜಿಲ್ಲಾ ಹೊಟೇಲ್ ಮಾಲೀಕರ ಸಂಘ, ಪ್ರಾಥಮಿಕ, ದೈಹಿಕ ಶಿಕ್ಷಣ ಶಿಕ್ಷಕ, ಪ್ರೌಢಶಾಲಾ ಶಿಕ್ಷಕ, ಜನತಾ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಉಪನ್ಯಾಸಕರು, ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಲಕ್ಷ್ಮಿ ಜನಾರ್ದನ ಶಿಕ್ಷಣ ಸಮಿತಿ ಟ್ರಸ್ಟ್, ಅಭಿನವ ಭಾರತಿ ವಿದ್ಯಾಕೇಂದ್ರದ ಆಡಳಿತ ಮಂಡಳಿ,ಸಮೂಹ ಸಂಸ್ಥೆಗಳ ಅಧ್ಯಾಪಕರ ಮತ್ತು ಸಿಬ್ಬಂದಿ ವರ್ಗ, ಗುತ್ತಲು ರಸ್ತೆಯ ಸಫದರಬಾದ್ ಮೊಹಲ್ಲಾ ಯುವಕರ ಬಳಗ, ಮಂಡ್ಯ ಆಟೋ ಮಾಲೀಕರ ಮತ್ತು ಕಾರ್ಮಿಕರ ಸಂಘ, ಕೇರಳ ಸಮಾಜ, ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘ, ಮಂಡ್ಯ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ, ಜಿಲ್ಲಾ ಲಯನ್ಸ್ ಸಂಸ್ಥೆಗಳ ಒಕ್ಕೂಟ, ಮಂಡ್ಯ ಬೆಲ್ಲದ ವರ್ತಕರ ಸಂಘ, ಮಂಡ್ಯ ಜಿಲ್ಲಾ ವಾಣಿಜ್ಯ ಮಂಡಳಿ, ಚಿನ್ನ-ಬೆಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಜಿಲ್ಲಾ ವಿತರಕರ ಸಂಘ, ಜಿಲ್ಲಾ ಸಣ್ಣ ಕೈಗಾರಿಕೆಗಳ ಒಕ್ಕೂಟ 1ನೇ ಮತ್ತು 2ನೇ ಹಂತ, ಶಾಂತಿ ಎಂಜಿನಿಯರ್ಸ್‌ ವರ್ಕ್ಸ್, ಸಣ್ಣ ಕೈಗಾರಿಕಾ ಮಾಲೀಕರು ಮತ್ತು ನೌಕರರು ಹಾಗೂ ಎಸ್‌ಕೆ ಟ್ಯಾಕ್ಟರ್ ಮತ್ತು ಎಸ್‌ಕೆ ಟೈಲರ್ರ್ಸ್‌, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಿಲ್ಲಾ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಸಂಘ, ಮಂಡ್ಯ ನಗರದ ಸಮಸ್ತ ಮುಸ್ಲಿಂಬಾಂಧವರ ಒಕ್ಕೂಟ, ಜಿಲ್ಲಾ ಮದ್ಯ ಮಾರಾಟಗಾರರ ಹಾಗೂ ನೌಕರರ ಸಂಘ, ಮನ್ಮಾಧ್ವ ಸಂಘ, ಅಖಿಲ ಕರ್ನಾಟಕ ಕರಾವಳಿ ಸಾಂಸ್ಕೃತಿಕ ಒಕ್ಕೂಟ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಬೀಡಿ ಕಾರ್ಮಿಕರ ಕಾಲೊನಿ ನಿವಾಸಿಗಳು, ಜಿಲ್ಲಾ ಹಾಪ್‌ಕಾಮ್ಸ ನೌಕರರ ಸಂಘ, ರಾಜ್ಯ ಟೈಲರಿಂಗ್ ಅಸೋಸಿಯೇಷನ್, ಜಿಲ್ಲಾ ಲಯನ್ಸ್ ಸಂಸ್ಥೆಗಳ ಒಕ್ಕೂಟ, ಬೇಕರಿ ಮಾಲೀಕರ ಸಂಘ, ಡಾ. ರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ, ಆಟೋ ಮಾಲೀಕರು , ಸಿಬ್ಬಂದಿ, ಹೊಸಹಳ್ಳಿ ಬಡಾವಣೆ ಯುವಕರಿಂದ ಬೈಕ್ ರ‌್ಯಾಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಕನ್ನಡ ಸೇನೆ, ಬೋವಿ ಕಾಲೊನಿ ನಿವಾಸಿಗಳು, ವಿಶ್ವ ಹಿಂದು ಪರಿಷತ್ತು, ಬೆಂಗಳೂ ರಿನಲ್ಲಿ ನೆಲಸಿರುವ ಮಂಡ್ಯ ಜಿಲ್ಲೆ ಮೂಲ ನಿವಾಸಿಗಳ ಹಿತರಕ್ಷಣಾ ವೇದಿಕೆ, ಬೆಂಗಳೂರಿನ ವಿಜಯ ಕನ್ನಡ ರಕ್ಷಣಾ ವೇದಿಕೆ, ಮಂಡ್ಯದ ಹಾಲಹಳ್ಳಿ ಬಡಾವಣೆಯ ನೂರಾನಿ ಮಸ್ಜಿದ್.ಮಳವಳ್ಳಿ: ಬಂದ್ ಯಶಸ್ವಿ

ಮಳವಳ್ಳಿ: ಕರ್ನಾಟಕ ಬಂದ್‌ಗೆ ತಾಲ್ಲೂಕಿನಲ್ಲಿ ಪಟ್ಟಣವು ಸೇರಿದಂತೆ ಬೆಳಕವಾಡಿ, ಹಾಡ್ಲಿ-ಮೇಗಳಪುರ ಸರ್ಕಲ್, ಹಲಗೂರಿನಲ್ಲಿ  ಉತ್ತಮ ಬೆಂಬಲ ವ್ಯಕ್ತವಾಯಿತು.ವಿಶ್ವಕರ್ಮ ಮಹಾಸಭಾ, ಡಾ.ಬಾಬು ಜಗಜೀವನ್ ರಾಂ ಸಂಘ, ಗಿರವಿ ಮತ್ತು ಜ್ಯುಯಲರ್ಸ್‌, ಔಷಧಿ ಅಂಗಡಿ ಮಾಲೀಕರು, ಸಗಟು ವ್ಯಾಪಾರಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ, ರೈತ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಪಟ್ಟಣದ ಅನಂತರಾಂವೃತ್ತದಲ್ಲಿ ಜಮಾವಣೆಗೊಂಡು ಜಯಲಲಿತಾ ಪ್ರತಿಕೃತಿ ದಹಿಸಿದರು.ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಎ.ಚಿಕ್ಕರಾಜು, ದೊಡ್ಡಯ್ಯ, ಸದಸ್ಯರಾದ ಎಚ್.ಬಸವರಾಜು, ಭವಾನಿ, ಬಿಜೆಪಿ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಆರ್.ಅಶೋಕ್‌ಕುಮಾರ್, ಕರವೇ ಅಧ್ಯಕ್ಷ ಎಂ.ಪಿ.ಮಧು, ಗುರು, ಜಯಕರ್ನಾಟಕ ಸಂಘಟನೆಯ ಶ್ಯಾಂಸುಂದರ್,ರಾಜ್‌ಕುಮಾರ್, ಅನಂತು, ಔಷಧಿ ಅಂಗಡಿ ಸಂಘದ ಅಧ್ಯಕ್ಷ ನಾಗೇಶ್, ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಪ್ರಕಾಶ್ ಹಾಗೂ ಪದಾಧಿಕಾರಿಗಳು, ಡಾ.ಬಾಬುಜಗಜೀವನ್‌ರಾಂ ಸಂಘದ ರಾಚಪ್ಪ, ಕೃಷ್ಣಮೂರ್ತಿ, ಮ.ಸಿ.ನಾರಾಯಣ, ಸುವರ್ಣ ಕರವೇಯ ನಾಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ಜಯರಾಜು, ಸಿದ್ದರಾಜು  ಸೇರಿದಂತೆ ಹಲವರು ಇದ್ದರು.ಕಿಕ್ಕೇರಿ:ವಾಹನ ಸಂಚಾರ ಸ್ಥಗಿತ

ಕಿಕ್ಕೇರಿ:
ಕರ್ನಾಟಕ ಬಂದ್‌ಗೆ ಹೋಬಳಿಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 ಪ್ರತಿಭಟನೆಯಲ್ಲಿ ತಾಪಂ.ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಟಿ.ಪರಮೇಶ್, ವರ್ತಕ ಸಂಘದ ಅಧ್ಯಕ್ಷ ಪದ್ಮನಾಭ್,  ವಕೀಲ ಯೋಗಣ್ಣ, ಧರ್ಮಪ್ಪ, ಕೆ.ವಿ.ಅರುಣ್‌ಕುಮಾರ್, ಕಾವಲು ಪಡೆಯ

 

ತಾಲ್ಲೂಕು ಘಟಕದ ಅಧ್ಯಕ್ಷ ಎ.ಸಿ.ಚಂದ್ರಶೇಖರ್, ಹೋಬಳಿ ಅಧ್ಯಕ್ಷ ಸತ್ಯ, ಕರವೇ ಗುರುಮೂರ್ತಿ, ಕಾಯಿ ಸುರೇಶ್, ಜವರಾಯಿಗೌಡ, ಕೆ.ವಿ.ಅರುಣ್‌ಕುಮಾರ್, ಸೊಸೈಟಿ ಮಾಜಿ ಅಧ್ಯಕ್ಷ ಶ್ರೀನಾಥ್, ಕೆ.ಆರ್.ಕೃಷ್ಣ, ಕಾರಿಗಾನ ಹಳ್ಳಿ ಮಂಜುನಾಥ್, ಕಸಾಪ ಚಂದ್ರಮೋಹನ್, ಚಂದ್ರು, ರಾಯಲ್ ನಾಗರಾಜು, ಶ್ರೀನಿವಾಸ್, ರೋಹಿತ್, ಎಚ್.ಡಿ.ಬೋಜೇಗೌಡ ಇದ್ದರು.ಆನೆಗೂಳದಲ್ಲಿ ನಡೆದ ಚಳುವಳಿಯಲ್ಲಿ ಮುಖಂಡರಾದ ರಾಜ್ಯ ಜೆಡಿಎಸ್ ಯುವ ಮುಖಂಡ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಬೋಳಮಾರನಹಳ್ಳಿ ಮಂಜುನಾಥ್, ಪುಟ್ಟಸ್ವಾಮಿ, ರಾಮಕೃಷ್ಣೇಗೌಡ, ತಾಲ್ಲೂಕು ಮಾಜಿ ಎಪಿಎಂಸಿ ಅಧ್ಯಕ್ಷ ರಾಮೇಗೌಡ, ಕೆಂಪಯ್ಯ, ಜಯರಾಂ, ನಂಜುಂಡೇಗೌಡ ಮತ್ತಿತರರಿದ್ದರು.ಕೆಆರ್‌ಎಸ್ ಬಂದ್

ಶ್ರೀರಂಗಪಟ್ಟಣ:
ಕೆಆರ್‌ಎಸ್‌ನಲ್ಲಿ ಗ್ರಾಮಸ್ಥರು ಬಂದ್ ಆಚರಿಸಿ ಪ್ರತಿಭಟನೆ ನಡೆಸಿದರು. ಅರಳಿ ಮರ ವೃತ್ತದಿಂದ ಬೃಂದಾವನ ಪ್ರವೇಶ ದ್ವಾರದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಮೇ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿಜಯಕುಮಾರ್, ಸಿ.ಮಂಜುನಾಥ್, ಎಂ.ಬಿ. ಕುಮಾರ್, ನಾಗೇಂದ್ರಕುಮಾರ್, ದಿನೇಶ್‌ಕುಮಾರ್, ಜಗದೀಶ್, ಸ್ನೇಕ್ ದೀಪು, ಶ್ರೀನಿವಾಸ್, ಕೇಶವ ಇದ್ದರು.  ತಾಲ್ಲೂಕಿನ ದೊಡ್ಡಪಾಳ್ಯ ಗ್ರಾಮಸ್ಥರು ಶನಿವಾರ ಶ್ರೀರಂಗಪಟ್ಟಣ- ಬನ್ನೂರು ರಸ್ತೆ ಯಲ್ಲಿ ಪ್ರತಿಭಟನೆ ನಡೆಸಿದರು. ಗ್ರಾಮ ಸೇವಾ ಸಮಿತಿ ಅಧ್ಯಕ್ಷ ನಾಗರಾಜು, ಮಾಯಿಕೃಷ್ಣೇ ಗೌಡ, ವಿಎಸ್‌ಎಸ್‌ಎನ್ ಅಧ್ಯಕ್ಷ ನಾರಾಯಣ, ಶಿವಕುಮಾರ್, ದಿನೇಶ್, ಜಯರಾಮು ಇದ್ದರು. ತಾಲ್ಲೂಕಿನ ಗೌಡಹಳ್ಳಿ, ಗಣಂಗೂರು, ಕಿರಂ ಗೂರು, ಬೆಳಗೊಳದಲ್ಲಿ ಪ್ರತಿಭಟನೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry